ಬೆಂಗಳೂರು: ಆ ಮಗುವಿಗಿನ್ನು ಒಂದೂವರೆ ವರ್ಷ ವಯಸ್ಸು. ಆಡಿ, ಬೆಳೆಯಬೇಕಾದ ಆ ಹೆಣ್ಣುಮಗಳು ಸೋಮವಾರ ಆಟವಾಡುತ್ತಲೇ ಎರಡಂತಸ್ತಿನ ಕಟ್ಟಡದ ಮೇಲಿಂದ ನೆಲಕ್ಕಪ್ಪಳಿಸಿ ಬಿದ್ದಳು. ಸಾವು ಬದುಕಿನ ನಡುವೆ ಹೋರಾಡುತ್ತಿದ್ದ ಆಕೆಯನ್ನು ಹಿಡಿದು ಪೋಷಕರು ಆಸ್ಪತ್ರೆಗಳಿಗೆ ಅಡ್ಡಾಡಿದರು. ಕೊನೆಗೆ, ವೈದ್ಯ ನಿರ್ಲಕ್ಷ್ಯ ಆ ಮಗುವಿನ ಪ್ರಾಣವನ್ನೇ ಕಸಿದುಕೊಂಡಿತು.
ಹೌದು.. ವೈದ್ಯರ ನಿರ್ಲಕ್ಷ್ಯ ಗಗನ ಎಂಬ ಒಂದೂವರೆ ವರ್ಷ ವಯಸ್ಸಿನ ಪ್ರಾಣವನ್ನೇ ಕಿತ್ತು ಕೊಂಡಿದೆ. ಕಟ್ಟಡದ ಮೇಲಿಂದ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದ ಆಕೆಯನ್ನು ಮೊದಲಿಗೆ
ನಗರದ ಇಂದಿರಾ ಗಾಂ„ ಮಕ್ಕಳ ಆಸ್ಪತ್ರೆಗೆ (ಐಜಿಐಸಿಎಚ್) ದಾಖಲಿ ಸಲಾಯಿತು. ಆದರೆ, ಮಗುವಿ ನ ಗಂಭೀರ ಪರಿಸ್ಥಿತಿಯನ್ನು ಅರಿಯದ ವೈದ್ಯರು ವೆಂಟಿಲೇಟರ್ ಅಲಭ್ಯತೆ ಕಾರಣ
ಮುಂದಿಟ್ಟು, ಒಂದು ತಾಸುಗಳ ಕಾಲ ಬಾಲಕಿಗೆ ಚಿಕಿತ್ಸೆ ಕೊಡದೆ ಸತಾಯಿಸಿದ್ದಾರೆ. ವೈದ್ಯರ ನಿರ್ಲಕ್ಷ್ಯ ಖಂಡಿಸಿ ಸಾರ್ವಜನಿಕರೆಲ್ಲ ಪ್ರತಿಭಟನೆ ನಡೆಸಿದ್ದಾರೆ. ಕೊನೆಗೆ ಮಗುವನ್ನು ಮಗುವನ್ನು ನಿಮಾ್ಹನ್ಸ್ ಗೆ ದಾಖಲಿಸಲಾಯಿತಾದರೂ, ಸೋಮವಾರ ರಾತ್ರಿ ಕೊನೆಯುಸಿರೆಳೆದಿದೆ.
ಆದದ್ದೇನು?:
ಜೆ.ಸಿ.ರಸ್ತೆ ನಾರಾಯಣಸ್ವಾಮಿ ಗಾರ್ಡನ್ ಬಳಿಯ ಕಟ್ಟಡದ ಎರಡನೇ ಮಹಡಿಯಲ್ಲಿ ವಾಸವಿರುವ ಕೂಲಿ ಕಾರ್ಮಿಕ ವೆಂಕಟೇಶ್ ಹಾಗೂ ಸುಮಾ ದಂಪತಿಯ ಪುತ್ರಿ ಗಗನ ಸೋಮವಾರ ಬೆಳಗ್ಗೆ 10.30ರ ಸುಮಾರಿನಲ್ಲಿ ಎರಡನೇ ಮಹಡಿಯ ಗ್ರಿಲ್ ಹತ್ತಿ, ಕೆಳಗೆ ನೋಡುತ್ತಿದ್ದಳು. ``ಅಮ್ಮ, ಅಮ್ಮ .''ಎಂದು ಕೂಗುತ್ತಿದ್ದ ಗಗನ, ಏಕಾಏಕಿ ಕೆಳಗೆ ಬಿದ್ದಿದ್ದಾಳೆ.
ಮಗು ಕೆಳಗೆ ಬಿದ್ದದ್ದನ್ನು ಗಮನಿಸಿದ ಸ್ಥಳೀಯರು ಕೂಗಾಡಿ ದ್ದಾರೆ. ಮಗು ಕೆಳಗೆ ಬಿದ್ದ ರಭಸಕ್ಕೆ ಆಕೆಯ ತಲೆಗೆ ತೀವ್ರ ಪೆಟ್ಟಾಗಿಕ್ಕು, ಕಿವಿ ಹಾಗೂ ಮೂಗಿನಲ್ಲಿ ರಕ್ತ ಒಸರಿತ್ತು. ಕೂಡಲೇ ಪಾಲಕರು ಹಾಗೂ ಸ್ಥಳೀಯರು ಮಗುವನ್ನು ಸಮೀಪದ ಕ್ಲಿನಿಕ್ ಗೆ ಕರೆದೊಯ್ದಿದ್ದರು. ಗಂಭೀರ ಗಾಯವಾಗಿದ್ದ ಹಿನ್ನೆಲೆಯಲ್ಲಿ ಮಗುವನ್ನು ದೊಡ್ಡ ಆಸ್ಪತ್ರೆಗೆ ದಾಖಲಿಸಬೇಕು ಎಂದು ಕ್ಲಿನಿಕ್ ನ ವೈದ್ಯರು ಸಲಹೆ ನೀಡಿದ್ದರು. ಈನ ಹಿನ್ನೆಲೆಯಲ್ಲಿ ಮಗುವನ್ನು ಮಾರ್ಥಾಸ್ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಚಿಕಿತ್ಸೆ ನೀಡದ ವೈದ್ಯರು ತಲೆಗೆ ಪೆಟ್ಟಾಗಿರುವ ಕಾರಣ ನಿಮ್ಹಾನ್ಸ್ ಗೆ ಕರೆದೊಯ್ಯುವಂತೆ ಸಲಹೆ ನೀಡಿದ್ದಾರೆ. ಬಳಿಕ ಬಾಲಕಿಯನ್ನು ನಿಮ್ಹಾನ್ಸ್ ಗೆ ಕರೆದೊಯ್ಯಲಾಯಿತು ಎಂದು ಗಗನ ತಂದೆ ವೆಂಕಟೇಶ್ ಹೇಳಿದ್ದಾರೆ.
ವೆಂಟಿಲೇಟರ್ ಕೊರತೆ:
ನಿಮ್ಹಾನ್ಸ್ ತುರ್ತು ನಿಗಾ ವಾರ್ಡ್ ಗೆ ತೆಗೆದುಕೊಂಡು ಹೋದಾಗ ಸುಮಾರು ಅರ್ಧಗಂಟೆ ಕಾಲ ವೈದ್ಯರು ಬಾಲಕಿಯನ್ನು ನೋಡಲೇ ಇಲ್ಲ. ಯಾರೂ ಬಾರದಿದ್ದಾಗ ಅಂತಿಮವಾಗಿ ವೈದ್ಯರ ಬಳಿ ತೆರಳಿ ಪ್ರಶ್ನಿಸಿದಾಗ ಹೊರ ಬಂದರು. ಅರ್ಧ ತಾಸು ರೋಗಿಯನ್ನು ನೋಡದ ವೈದ್ಯರು, ಪರಿಶೀಲನೆಗಾಗಿಯೇ ಅರ್ಧ ತಾಸು ತೆಗೆದುಕೊಂಡಿದ್ದಾರೆ. ನಂತರ ವೆಂಟಿಲೇಟರ್ ಕೊರತೆಯಿದ್ದು ಇಲ್ಲಿ ಚಿಕಿತ್ಸೆ ಆಗುವುದಿಲ್ಲ, ಇಂದಿರಾ ಗಾಂಧಿ ಮಕ್ಕಳ ಆಸ್ಪತ್ರೆಗೆ ಕರೆದೊಯ್ಯುವಂತೆ ಹೇಳಿದ್ದಾರೆ. ಅಲ್ಲಿಂದ ಇಂದಿರಾಗಾಂಧಿ ಆಸ್ಪತ್ರೆಗೆ ಮಗುವನ್ನು ಕರೆದೊಯ್ಯಲಾಗಿದೆ. ಆದರೆ, ಅಲ್ಲೂ ಒಂದು ಗಂಟೆಗೂ ಹೆಚ್ಚು ಕಾಲ ವೈದ್ಯರು ಮಗುವನ್ನು ಪರೀಕ್ಷಿಸಿಲ್ಲ. ಬಳಿಕ ಪೋಷಕರ ಒತ್ತಡಕ್ಕೆ ಮಣಿದು ಅಂತಿಮವಾಗಿ ಮಗುವಿಗೆ ಚಿಕಿತ್ಸೆ ನೀಡಲಾಯಿತಾದರೂ ಅಂತಿಮವಾಗಿ ಮತ್ತೆ ಮಗುವನ್ನು ನಿಮ್ಹಾನ್ಸ್ ಗೆ ಕರೆದುಕೊಂಡು ಹೋಗುವಂತೆ ಸೂಚಿಸಲಾಗಿದೆ. ನಿಮ್ಹಾನ್ಸ್ ನಲ್ಲಿ ಚಿಕಿತ್ಸೆ ಪಡೆಯುತ್ತಿರುವಾಗಲೇ ರಾತ್ರಿ 9 ಗಂಟೆ ಸುಮಾರಿಗೆ ಮಗು ಕೊನೆಯುಸಿರೆಳೆದಿದೆ.
ಶಟ್ ಅಪ್ ಅ್ಯಂಡ್ ಗೆಟ್ ಲಾಸ್ಟ್:
``ಇಂದಿರಾಗಾಂಧಿ ಆಸ್ಪತ್ರೆಗೆ ತೆರಳಿ ತುರ್ತುಪರಿಸ್ಥಿತಿ ಎಂದು ಹೇಳಿ ಒಂದು ತಾಸು ಕಳೆದರೂ ಯಾವ ವೈದ್ಯರು ಕೂಡ ಮಗುವನ್ನು ನೋಡಲಿಲ್ಲ. ಮಗುವಿನ ಸ್ಥಿತಿ ಗಂಭೀರವಾಗುತ್ತಾ ಸಾಗಿತ್ತು. ಗಗನ ತಂದೆ ವೆಂಕಟೇಶ್ ಹಾಗೂ ನಾನು ವೈದ್ಯರಿದ್ದ ಕೋಣೆಗೆ ತೆರಳಿದೆವು. ಈ ವೇಳೆ ಮಹಿಳಾ ವೈದ್ಯರೊಬ್ಬರು ನಮ್ಮ ಮೇಲೆಯೇ ಕೂಗಾಡಿದರು. `ಶಟ್ ಅಪ್ ಆ್ಯಂಡ್ ಗೆಟ್ ಲಾಸ್ಟ್' ಎಂದು ಕೂಗಾಡಿದರು. ವಿಧಿ ಇಲ್ಲದೆ, ಮಾಧ್ಯಮಗಳಿಗೆ ಮಾಹಿತಿ ನೀಡಲಾಯಿತು ,'' ಎಂದು ದೇವಿಕಾ ಎಂಬುವವರು ಹೇಳಿದರು. ಮಾಧ್ಯಮಗಳಿಗೆ ವಿಚಾರ ತಿಳಿಸಿದ್ದು ವಿಚಾರ ತಿಳಿಯುತ್ತಿದ್ದಂತೆ ವೈದ್ಯರು ಎಚ್ಚೆತ್ತುಕೊಂಡು ಮಗುವಿಗೆ ಚಿಕಿತ್ಸೆ ನೀಡಲು ಒಪ್ಪಿದರು.