ಮಗಳು ಗಗನಾಳನ್ನು ಕಳೆದುಕೊಂಡು ರೋದಿಸುತ್ತಿರುವ ತಾಯಿ
ಬೆಂಗಳೂರು: ಎರಡನೇ ಮಹಡಿಯಿಂದ ಬಿದ್ದು ಒಂದೂವರೆ ವರ್ಷದ ಬಾಲಕಿ ಗಗನಾ ಸಾವಿಗೆ ಇಂದಿರಾಗಾಂಧಿ ಮಕ್ಕಳ ಆಸ್ಪತ್ರೆ(ಐಜಿಐಸಿಎಚ್) ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂದು ಆರೋಪಿಸಿ ಬಾಲಕಿ ತಂದೆ ವೆಂಕಟೇಶ್ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಮಂಗಳವಾರ ದೂರು ದಾಖಲಿಸಿದ್ದಾರೆ.
ಸಮಯಕ್ಕೆ ಸರಿಯಾಗಿ ವೈದ್ಯಕೀಯ ನೆರವು ನೀಡದ ಕಾರಣ ಬಾಲಕಿ ಮೃತಪಟ್ಟಿದ್ದಾಳೆ. ಇದಕ್ಕೆ ಆಸ್ಪತ್ರೆ ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂದು ದೂರಿನಲ್ಲಿ ಹೇಳಲಾಗಿದೆ. ಹೀಗಾಗಿ, ನಿರ್ಲಕ್ಷದಿಂದ ಸಾವು ಸಂಭವಿಸುವುದು (ಐಪಿಸಿ ಕಲಂ 304ಎ) ಅನ್ವಯ ಐಜಿಐಸಿಎಚ್ ವಿರುದ್ಧ ಪ್ರಕರಣ ದಾಖಲಾಗಿದೆ.
ದೂರಿನಲ್ಲಿ ಮೊದಲು ಗಗನಾಳನ್ನು ಕರೆದೊಯ್ಯಲಾದ ಸೇಂಟ್ ಮಾರ್ಥಾಸ್ ಅಥವಾ ನಿಮಾ್ಹನ್ಸ್ ಆಸ್ಪತ್ರೆಯ ಹೆಸರನ್ನು ಉಲ್ಲೇಖಿಸಿರಲಿಲ್ಲ. ಆಸ್ಪತ್ರೆಗೆ ತೆರಳಿದ ಬಳಿಕ ಕರ್ತವ್ಯದಲ್ಲಿದ್ದ ವೈದ್ಯರ ಬಳಿ ತೆರಳಿ ವಿಷಯ ಹೇಳಿದಾಗ 10 ನಿಮಿಷ ಕಾಯಿರಿ ಎಂದರು.
ಆದರೆ, ಅರ್ಧ ಗಂಟೆ ಕಳೆದರೂ ವೈದ್ಯರಾಗಲಿ ಸಿಬ್ಬಂದಿ- ಯಾಗಲಿ ಬಾಲಕಿಯನ್ನು ನೋಡಲಿಲ್ಲ. ತುಂಬಾ ಹೊತ್ತಿನ ಬಳಿಕ ಗಗನಾಳನ್ನು ಆ್ಯಂಬುಲೆನ್ಸ್‍ನಲ್ಲೇ ಬಿಟ್ಟು ನೇರವಾಗಿ ವೈದ್ಯರ ಬಳಿ ತೆರಳಿದ್ದೆ. ನನ್ನ ಮಗಳು ಗಂಭೀರ ಸ್ಥಿತಿಯಲ್ಲಿದ್ದು ಆದಷ್ಟು ಬೇಗ ಚಿಕಿತ್ಸೆ ನೀಡಿ ಎಂದು ಕೋರಿದೆ. ಆಗ, ವೈದ್ಯರು ತನ್ನ ಕೈಯಲ್ಲಿದ್ದ ಟಾರ್ಚ್ ಅನ್ನು ಎಸೆದು, ಇದು ನಿನ್ನ ಅಪ್ಪನ ಆಸ್ಪತ್ರೆಯಲ್ಲಾ. ನಾನು ಬರುವವರೆಗೂ ಹೊರಗೆ ಕಾಯಿ ಎಂದು ಜೋರಾಗಿ ಕೂಗಾಡಿದರು ಎಂದು ದೂರಿನಲ್ಲಿ ಹೇಳಲಾಗಿದೆ.
ಇದೇ ವೇಳೆ ಘಟನೆ ಬಗ್ಗೆಯೂ ವಿವರಿಸಿರುವ ಗಗನಾ ತಂದೆ ವೆಂಕಟೇಶ್, ಸೋಮವಾರ ಬೆಳಗ್ಗೆ ಮಗುವನ್ನು ಮನೆಯಲ್ಲೇ ಬಿಟ್ಟು ಪತ್ನಿ ನೀರು ತರಲು ಕೆಳಗೆ ಬಂದಿದ್ದಳು. ಹೊರಗೆ ಬಂದ ಗಗನಾ ಕೆಳಗಿದ್ದ ತಾಯಿಯನ್ನು ಎರಡನೇ ಮಹಡಿಯ ಗ್ರಿಲ್ ನಿಂದ ಇಣುಕಿ ನೋಡುವ ವೇಳೆ ಜಾರಿ ಕೆಳಗೆ ಬಿದ್ದಿದ್ದಾಳೆ ಎಂದು ಹೇಳಲಾಗಿದೆ.
ಕೋಲಾರದಲ್ಲಿ ಅಂತ್ಯಕ್ರಿಯೆ: ಮರಣೋತ್ತ ರ ಪರೀಕ್ಷೆ ನಡೆಸಿದ ನಿಮಾ್ಹನ್ಸ್ ವೈದ್ಯರು, 11 ಗಂಟೆ ಸುಮಾರಿಗೆ ಬಾಲಕಿ ಶವವನ್ನು ಪಾಲಕರಿಗೆ ಹಸ್ತಾಂತರಿಸಿದರು. ಬಳಿಕ ಸ್ವಂತ ಊರಾದ ಕೋಲಾರ ಸಮೀಪದ ಕಾಮಸಮುದ್ರದಲ್ಲಿ ಸಂಜೆ ಅಂತ್ಯಕ್ರಿಯೆ ನಡೆಸಲಾಯಿತು.
ತಲೆಗೆ ತೀವ್ರವಾಗಿ ಗಾಯಗೊಂಡಿದ್ದ ಬಾಲ- ಕಿಗೆ ಸಮೀಪದ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿದ ಪೋಷಕರು, ನಂತರ ಅಲ್ಲಿಂದ¸ಸೇಂಟ್ ಮಾರ್ಥಾಸ್ ಮತ್ತು ನಿಮ್ಹಾನ್ಸ್ ಆಸ್ಪತ್ರೆಗಳಿಗೆ ಕೊಂಡೊಯ್ದಿದ್ದರು. ಆದರೆ, ಎರಡೂ ಆಸ್ಪತ್ರೆಗಳ ವೈದ್ಯರು ವೆಂಟಲೇಟರ್ ಕೊರತೆ ಕಾರಣ ಹೇಳಿ, ಇಂದಿರಾ ಗಾಂಧಿ ಮಕ್ಕಳ ಆಸ್ಪತ್ರೆಗೆ ಮಗುವನ್ನು ಕರೆದುಕೊಂಡು ಹೋಗಲು ಸೂಚಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics