(ಸಾಂದರ್ಭಿಕ ಚಿತ್ರ) 
ಜಿಲ್ಲಾ ಸುದ್ದಿ

ಹಾಡಹಗಲೇ ರು.15 ಲಕ್ಷ ದರೋಡೆ

ಹಾಡಹಗಲೇ ಉದ್ಯಮಿಯೊಬ್ಬರ ಗಮನ ಬೇರೆಡೆ ಸೆಳೆದು ರು.15 ಲಕ್ಷ ನಗದು ದೋಚಿರುವ ಘಟನೆ ಗಿರಿನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬುಧವಾರ ನಡೆದಿದೆ...

ಬೆಂಗಳೂರು: ಹಾಡಹಗಲೇ ಉದ್ಯಮಿಯೊಬ್ಬರ ಗಮನ ಬೇರೆಡೆ ಸೆಳೆದು ರು.15 ಲಕ್ಷ ನಗದು ದೋಚಿರುವ ಘಟನೆ ಗಿರಿನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬುಧವಾರ ನಡೆದಿದೆ.
ಕಾರು ಪಂಕ್ಚರ್ ಮಾಡುವ ಮೂಲಕ ಉದ್ಯಮಿ ಗಮನ ಬೇರೆ ಕಡೆ ಸೆಳೆದ ದುಷ್ಕರ್ಮಿಗಳು ಈ ಕೃತ್ಯವೆಸಗಿದ್ದಾರೆ.

ಜೆ.ಪಿ.ನಗರ ನಿವಾಸಿ ಬಾಲಯ್ಯ(70) ಹಣ ಕಳೆದುಕೊಂಡವರು. ಸಿವಿಲ್ ಕಂಟ್ರಾಕ್ಟರ್ ಆಗಿ ಕೆಲಸ ಮಾಡುವ ಇವರು ಹೊಸಕೆರೆಹಳ್ಳಿ 80 ಅಡಿ ರಸ್ತೆಯಲ್ಲಿನ ಸೀತಾ ಸರ್ಕಲ್ ಬಳಿ ಇರುವ ಎಸ್‍ಬಿಎಂ ಬ್ಯಾಂಕ್ ಶಾಖೆಯಲ್ಲಿ ಬುಧವಾರ ಮಧ್ಯಾಹ್ನ ಸುಮಾರು 12.30ರ ವೇಳೆಗೆ ರು.15 ಲಕ್ಷ ಹಣ ಡ್ರಾ ಮಾಡಿದ್ದಾರೆ. ಆ ಹಣವನ್ನು ಬ್ಯಾಗ್‍ನಲ್ಲಿಟ್ಟುಕೊಂಡು ಬಂದ ಅವರು, ಅದನ್ನು ಕಾರಿನಲ್ಲಿಟ್ಟು ಹೊರಡುತ್ತಿರುವಾಗ ಸಮೀಪದಲ್ಲಿದ್ದ ದುಷ್ಕರ್ಮಿಗಳು ಕಾರು ಪಂಕ್ಚರ್ ಆಗಿದೆ ಎಂದು ತಿಳಿಸಿದ್ದಾರೆ.

ಅವರತ್ತ ಗಮನ ಕೊಡದ ಬಾಲಯ್ಯ ಅವರು ಕಾರು ಚಾಲನೆ ಮಾಡಲು ಮುಂದಾದಾಗ ಪಂಕ್ಚರ್ ಆಗಿರುವುದು ತಿಳಿದುಬಂದಿದೆ. ಆದರೂ ಹಾಗೆಯೇ ಕಾರು ಚಾಲನೆ ಮಾಡಿಕೊಂಡು ಬಂದ ಅವರು ಸೀತಾ ಸರ್ಕಲ್ ಸಮೀಪದ ಪಂಕ್ಚರ್ ಅಂಗಡಿಯೊಂದರ ಮುಂದೆ ವಾಹನ ನಿಲ್ಲಿಸಿ, ಹಣವಿದ್ದ ಬ್ಯಾಗ್ ಸಮೇತ ಕೆಳಗಿಳಿದಿದ್ದಾರೆ. ಬ್ಯಾಂಕ್‍ನಿಂದ ಅವರನ್ನು ಹಿಂಬಾಲಿಸಿಕೊಂಡು ಬಂದಿದ್ದ ದುಷ್ಕರ್ಮಿಗಳು ಅವರ ಕೈಯಲ್ಲಿದ್ದ ಬ್ಯಾಗ್ ಕಿತ್ತುಕೊಂಡು ಪರಾರಿಯಾಗಿದ್ದಾರೆ. ಬಾಲಯ್ಯ ಅವರು ಸಹಾಯಕ್ಕಾಗಿ ಕೂಗಿಕೊಂಡರೂ ಸಾರ್ವಜನಿಕರು ನೆರವಿಗೆ ಧಾವಿಸಿಲ್ಲ. ಈ ಸಂಬಂಧ ಗಿರಿನಗರ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ಬೈಕ್‍ನಲ್ಲಿ ಬಂದ ಕಳ್ಳರ ಶೋಧ ನಡೆಸಿದ್ದಾರೆ. ಸ್ಥಳೀಯ ಸಿಸಿಟಿವಿಗಳನ್ನು ಪರಿಶೀಲಿಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮಾನವೀಯತೆ ಮರೆತ ಜನ: ಕಣ್ಣೀರಟ್ಟ ಬಾಲಯ್ಯ
``ಘಟನೆ ನಡೆದ ಸ್ಥಳದಲ್ಲಿ ಸಾಕಷ್ಟು ಮಂದಿ ಇದ್ದರು. ಸಹಾಯಕ್ಕಾಗಿ ಕೂಗಿದೆ. ಆದರೆ, ಯಾರೂ ನೆರವಾಗಲಿಲ್ಲ'' ಎಂದು ಹಣ ಕಳೆದುಕೊಂಡ ಬಾಲಯ್ಯ ಪೊಲೀಸರ ಬಳಿ ಕಣ್ಣೀರಿಟ್ಟು, ತಮ್ಮ ಅಳಲು ತೋಡಿಕೊಂಡಿದ್ದಾರೆ. ನಗರದಲ್ಲಿ ಇಂತಹ ಸಾಕಷ್ಟು ಅಪರಾಧ ಘಟನೆಗಳು ನಡೆಯುತ್ತಿವೆ. ಸರಗಳವು, ಗಮನ ಬೇರೆಡೆ ಸೆಳೆದು ಹಣ ಕಳವು, ಅಪಘಾತದಂತಹ ಸಾಕಷ್ಟು ಕೃತ್ಯಗಳು ನಡೆಯುತ್ತಿರುತ್ತವೆ. ಆದರೆ, ಕಷ್ಟದಲ್ಲಿರುವವರಿಗೆ ನೆರವಾಗಲೂ ಯಾರೂ ಮುಂದೆ ಬರುವುದಿಲ್ಲ. `ಇಂದು ಜನ ಮಾನವೀಯತೆ ಮರೆತಿದ್ದಾರೆ. ಅಲ್ಲಿದ್ದವರ ಪೈಕಿ ಒಬ್ಬರೇ ಒಬ್ಬರು ಆರೋಪಿಗಳ ಬೈಕ್ ಹಿಂಬಾಲಿಸಿದ್ದರೆ ಅವರು ಹೆದರುತ್ತಿದ್ದರು. ಜನರನ್ನು ಕಂಡು ಹಣ ಬಿಟ್ಟು ಹೋಗುತ್ತಿದ್ದರು ಅಥವಾ ಅವರನ್ನು ಹಿಡಿದು ಪೊಲೀಸರಿಗೆ ಒಪ್ಪಿಸಬಹುದಿತ್ತು. ಆರೋಪಿಗಳು ಇಬ್ಬರೇ. ಎಲ್ಲರೂ ಅವರನ್ನು ಹಿಡಿಯಲು ಮುಂದಾಗಿದ್ದಿದ್ದರೆ ತಪ್ಪಿಸಿಕೊಳ್ಳಲು ಆಗುತ್ತಿರಲಿಲ್ಲ' ಎಂದು ಬಾಲಯ್ಯ ಮರುಗಿದರು ಎಂದು ಪೊಲೀಸರು ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಉಪ ಚುನಾವಣೆ ಫಲಿತಾಂಶ| ಅಸ್ಸಾಂ, ಪ.ಬಂಗಾಳ, ತಮಿಳುನಾಡು, ಪುದುಚೇರಿಯ ಆರು ಕ್ಷೇತ್ರಗಳಲ್ಲಿ ಮತ ಎಣಿಕೆ ಪ್ರಗತಿಯಲ್ಲಿ

Sting operation ಮೂಲಕ ನಿಮ್ಮನ್ನು ಸಿಲುಕಿಸಲು ಯತ್ನಿಸಿರುವುದು ನಿಜವೇ ಆಗಿದ್ದರೆ ತನಿಖೆಗೆ ಆದೇಶಿಸಿ: ಸಿಎಂ ಡಿಕೆ.ಶಿವಕುಮಾರ್'ಗೆ HDK ಸವಾಲು

ಮತ ಕಳ್ಳತನದಿಂದಲೇ ಮೋದಿ ಪ್ರಧಾನಿಯಾಗಿದ್ದು, ಗೆಲ್ಲಲಾಗದ ರಾಜ್ಯಗಳಲ್ಲೂ BJP ಗೆಲುವು: ಅಭಿಜೀತ್ ದೀಪ್ಕೆ

ರಾಜ್ಯದ ಬಾಕಿ ಹಣದ ಬಗ್ಗೆ ನಿರ್ಮಲಾ ಸೀತಾರಾಮನ್ ಜೊತೆ ಚರ್ಚೆ: GST ಮಂಡಳಿ ಸಭೆ ಬಳಿಕ CM ಡಿಕೆ.ಶಿವಕುಮಾರ್ ಹರ್ಷ

ಉತ್ತರ ಭಾರತ ವ್ಯಕ್ತಿಯಿಂದ ಡಿಕೆಶಿ ಸಿಲುಕಿಸಲು ಯತ್ನ: ಸಚಿವ ಸತೀಶ್ ಜಾರಕಿಹೊಳಿ