ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಜಿಲ್ಲಾ ಸುದ್ದಿ

ಸಾರಿಗೆ ವಾಹನಗಳಿಗೆ ಮಾರ್ಚ್‍ರೊಳಗೆ ಸ್ಪೀಡ್ ಗವರ್ನರ್ ಕಡ್ಡಾಯ

ರಾಜ್ಯದಲ್ಲಿ 2016ರ ಮಾರ್ಚ್ 31ರೊಳಗೆ ಎಲ್ಲಾ ಸಾರಿಗೆ ವಾಹನಗಳಿಗೆ ಕಡ್ಡಾಯವಾಗಿ `ಸ್ಪೀಡ್ ಗವರ್ನರ್' ಅಳವಡಿಸುವುದಾಗಿ...

ಹೈಕೋರ್ಟ್
Mainashree
Updated On : 15 Oct 2015, 10:45 am
ಬೆಂಗಳೂರು: ರಾಜ್ಯದಲ್ಲಿ 2016ರ ಮಾರ್ಚ್ 31ರೊಳಗೆ ಎಲ್ಲಾ ಸಾರಿಗೆ ವಾಹನಗಳಿಗೆ ಕಡ್ಡಾಯವಾಗಿ `ಸ್ಪೀಡ್ ಗವರ್ನರ್' ಅಳವಡಿಸುವುದಾಗಿ ಸರ್ಕಾರ ಹೈಕೋರ್ಟ್‍ಗೆ ಬುಧವಾರ ಪ್ರಮಾಣ ಪತ್ರ ಸಲ್ಲಿಸಿದೆ. 
ಈ ಸಂಬಂಧ 2015ರ ಆ.11ರಂದು ಹೊರಡಿಸಿದ ಅಧಿಸೂಚನೆಯ ಸಮರ್ಪಕ ಜಾರಿಗೆ ರಾಜ್ಯ ಸಾರಿಗೆ ಇಲಾಖೆ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಆರೋಪಿಸಿ ಎಚ್ ಎಎಲ್‍ನ ನಿವೃತ್ತ ನೌಕರ ವೈ.ಎನ್.ನಂಜಪ್ಪ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ವೇಳೆ ಸರ್ಕಾರ ಈ ಪ್ರಮಾಣ ಪತ್ರ ಸಲ್ಲಿಸಿದೆ. 
ಅಲ್ಲದೆ, ಸ್ಪೀಡ್ ಗವರ್ನರ್ ಸಾಧನ ಅಳವಡಿಸದ ಹಳೆಯ ಸಾರಿಗೆ ವಾಹನಗಳಿಗೆ ಸಾಮರ್ಥ್ಯ ಪ್ರಮಾಣ ಪತ್ರ ನೀಡಲಾ-ಗುವುದಿಲ್ಲ ಎಂದು ಸರ್ಕಾರ ಇದೇ ವೇಳೆ ಹೈಕೋರ್ಟ್‍ಗೆ ಭರವಸೆ ನೀಡಿದೆ.

Advertisement

Advertisement

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement