ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಜಿಲ್ಲಾ ಸುದ್ದಿ

ರಾತ್ರಿ ಸಂಚಾರ ಹೆಚ್ಚಿಸಲು ಬಿಎಂಟಿಸಿ ಚಿಂತನೆ

ಬೆಂಗಳೂರಿನಲ್ಲಿ ಕತ್ತಲಾಗುತ್ತಿದ್ದಂತೆ ಅತ್ಯಾಚಾರ, ದೌರ್ಜನ್ಯ ಪ್ರಕರಣ ಹೆಚ್ಚುತ್ತಿರು ಹಿನ್ನೆಲೆಯಲ್ಲಿ ಬಿಎಂಟಿಸಿ ಸೇವೆಯನ್ನು ರಾತ್ರಿ ವೇಳೆ...

ಬಿಎಂಟಿಸಿ ಬಸ್
Rashmi Kasaragodu
Updated On : 17 Oct 2015, 12:39 pm
ಬೆಂಗಳೂರು:  ಬೆಂಗಳೂರಿನಲ್ಲಿ ಕತ್ತಲಾಗುತ್ತಿದ್ದಂತೆ ಅತ್ಯಾಚಾರ,  ದೌರ್ಜನ್ಯ  ಪ್ರಕರಣ ಹೆಚ್ಚುತ್ತಿರು  ಹಿನ್ನೆಲೆಯಲ್ಲಿ ಬಿಎಂಟಿಸಿ ಸೇವೆಯನ್ನು ರಾತ್ರಿ ವೇಳೆ ಹೆಚ್ಚಿಸುವ ಬಗ್ಗೆ ಚಿಂತನೆ ನಡೆದಿದೆ. ಸಮಾನ್ಯವಾಗಿ ರಾತ್ರಿ 10.30ರಿಂದ ಬೆಳಗ್ಗೆವರೆಗೆ ಕನಿಷ್ಠ ಸಂಖ್ಯೆಯಲ್ಲಿ ಬಸ್ಸುಗಳು ಸಂಚರಿಸುತ್ತಿವೆ. ಈ ಸಂಖ್ಯೆಯನ್ನು ಗಣನೀಯವಾಗಿ ಹೆಚ್ಚಿಸುವುದು ಬಿಎಂಟಿಸಿಯ ಆಲೋಚನೆ. ಚರ್ಚೆ ನಡೆದಿದ್ದು, ಸರ್ಕಾರಕ್ಕೆ  ಪ್ರಸ್ತಾವನೆ ಸಲ್ಲಿಸಲು ನಿರ್ಧರಿಸಲಾಗಿದೆ. ಕನ್ನಡಪ್ರಭಕ್ಕೆ ಲಭ್ಯವಾದ ಮಾಹಿತಿ ಪ್ರಕಾರ ಸದ್ಯ ರಾತ್ರಿ 10.30ರಿಂದ ಬೆಳಗ್ಗೆ 4 ಗಂಟೆ ವರೆಗೆ 55 ಬಸ್ಸುಗಳು ಸಂಚರಿಸುತ್ತಿವೆ. ತಕ್ಷಣದಲ್ಲೇ ಇನ್ನೂ 10 ಬಸ್ಸುಗಳ ಸೇವೆ
ಆರಂಭಿಸುವುದು ಮತ್ತು ಮುಂದಿನ ದಿನಗಳಲ್ಲಿ ಇದನ್ನು ಇನ್ನಷ್ಟು ಹೆಚ್ಚಿಸಬೇಕೆಂಬ  ಆಲೋಚನೆ  ಬಿಎಂಟಿಸಿಯದ್ದಾಗಿದೆ. ರಾತ್ರಿಯಲ್ಲಿ ಬಸ್ ಸಂಚಾರ ಹೆಚ್ಚಿಸುವ ಬಗ್ಗೆ ಸಾರಿಗೆ ಸಚಿವ  ರಾಮಲಿಂಗಾರೆಡ್ಡಿ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದ್ದಾರೆ. ಅಂತಿಮ ಒಪ್ಪಿಗೆಯೊಂದು ಬೇಕಾಗಿದ್ದು,ಇನ್ನು ಕೆಲವೇ ದಿನಗಳಲ್ಲಿ ಹೆಚ್ಚುವರಿ ಬಸ್ ಸಂಚಾರ ಆರಂಭವಾಗುವ ಸಾಧ್ಯತೆ ಇದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement