ಬೆಂಗಳೂರು: ಅನೈತಿಕ ಸಂಬಂಧಕ್ಕೆ ಅಡ್ಡಿಪಡಿಸಿದ ಪತಿಯನ್ನು ಪ್ರಿಯಕರನೊಂದಿಗೆ ಸೇರಿ ಕೊಲೆ ಮಾಡಿದ್ದಳು. ಅಷ್ಟೇ ಅಲ್ಲ, ಗಂಡ ನಾಪತ್ತೆಯಾಗಿದ್ದಾನೆಂದು ತಾನೇ ಸ್ವತಃ ಠಾಣೆಗೆ ಹೋಗಿ ದೂರು ನೀಡಿ ನಾಟಕವಾಡಿದ್ದಳು. ಈಗ ಆ ಮಹಿಳೆ ಸೇರಿ ನಾಲ್ವರು ಆರೋಪಿಗಳನ್ನು ಬಾಗಲೂರು ಪೊಲೀಸರು ಬಂಧಿಸಿದ್ದಾರೆ.
ಆಟೋ ಚಾಲಕ ಖಾಜಾ ಮಹಮದ್ ಅಮೀದು ಖುರೇಷಿ (42) ಕೊಲೆ ಪ್ರಕರಣ ಸಂಬಂಧ ಈತನ ಪತ್ನಿ ಶಾಂಪೂರ ರಸ್ತೆ ಪಿಎನ್ಧಿಟಿ ಕಾಲೋನಿಯ ಅಸ್ಮಾ ಅಲಿಯಾಸ್ ರಿಜ್ವಾನ (36),
ಈಕೆ ಪ್ರಿಯಕರ ಫಾಹಿದ್ (38), ಆಕೆಯ ಸಹೋದರ ಇಮ್ರಾನ್ಧಿಪಾಷ ಮತ್ತು ಕೆ.ಜಿ.ಹಳ್ಳಿಯ ಸೈಯದ್ ಪಾಷ (18) ಬಂಧಿತರು. ಅಕ್ಟೋಬರ್ ೧೨ರ ಸಂಜೆ ಆಟೋ ಬಾಡಿಗೆ ನೆಪದಲ್ಲಿ
ಖುರೇಷಿಯನ್ನು ಬಾಗಲೂರು ಸಮೀಪದ ಕಲ್ಲುಕ್ವಾರಿಗೆ ಕರೆದೊಯ್ದಿದ್ದ ಆರೋಪಿಗಳು ಕೊಲೆ ಮಾಡಿ ಶವವನ್ನು ಕ್ವಾರಿಯಲ್ಲಿ ಬಿಸಾಡಿದ್ದರು.
ಆಟೋ ಚಾಲಕನಾಗಿದ್ದ ಖುರೇಷಿ, ಪತ್ನಿ ಮತ್ತು ಪಾಲಕರ ಜತೆಗೆ ಶಿವಾಜಿನಗರದಲ್ಲಿ ವಾಸವಿದ್ದ. ೪ ತಿಂಗಳ ಹಿಂದೆ ಶಾಂಪೂರ ರಸ್ತೆಯ ಚಿಕ್ಕಣ್ಣ ಲೇಔಟ್ಧಿನಲ್ಲಿ ಬಾಡಿಗೆ ಮನೆಗೆ
ಸ್ಥಳಾಂತರವಾಗಿದ್ದರು. ಎದುರು ಮನೆಯಲ್ಲಿ ಗ್ಯಾರೇಜ್ ನಡೆಸುತ್ತಿದ್ದ ಆರೋಪಿ ಫಾಹಿದ್ ತನ್ನ ಕುಟುಂಬ ಸದಸ್ಯರ ಜತೆ ವಾಸವಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಎರಡು ತಿಂಗಳ ಹಿಂದೆ ಖುರೇಷಿ ತನ್ನ ಪತ್ನಿ ಅಸ್ಮಾಗೆ ಫಾಹಿದ್ ಹೆಸರಿನಲ್ಲಿ ಸಿಮ್ ಕಾರ್ಡ್ ಖರೀದಿಸಿ ಕೊಟ್ಟಿದ್ದ. ಹೀಗಾಗಿ, ಅಸ್ಮಾಗೆ ಫಾಹಿದ್ಧಿನ ಪರಿಚಯವಾಗಿತ್ತು. ಬಳಿಕ ಇಬ್ಬರ ನಡುವೆ ಅನೈತಿಕ ಸಂಬಂಧ ಏರ್ಪಟ್ಟಿತ್ತು ಎನ್ನಲಾಗಿದೆ.
ಪತ್ನಿ ಹಾಗೂ ಫಾಹಿದ್ ನಡುವಿನ ಅನೈತಿಕ ಸಂಬಂಧ ವಿಚಾರ ಗೊತ್ತಾಗಿ ಕುಪಿತಗೊಂಡ ಖುರೇಷಿ, ಪತ್ನಿಗೆ ಹಿಗ್ಗಾಮುಗ್ಗಾ ಥಳಿಸಿದ್ದ. ಫಾಹಿದ್ ಮನೆಗೆ ತೆರಳಿ ತನ್ನ ಪತ್ನಿ ಜತೆ ಮಾತನಾಡದಂತೆ ಎಚ್ಚರಿಕೆ ಕೊಟ್ಟಿದ್ದ. ಆದರೂ, ಅಸ್ಮಾ ಮತ್ತು ಫಾದ್ ನಡುವೆ ಸಂಬಂಧ ಮುಂದುವರಿದಿತ್ತು. ತಮ್ಮಿಬ್ಬರ ಸಂಬಂಧಕ್ಕೆ ಅಡ್ಡಿಯಾಗಿರುವ ಪತಿಯನ್ನು ಮುಗಿಸಿದರೆ ಯಾರ ಸಮಸ್ಯೆ ಇರುವುದಿಲ್ಲವೆಂದು ಯೋಜಿಸಿದ ಅಸ್ಮಾ, ಪ್ರಿಯಕರನ ಪುಸಲಾಯಿಸಿದ್ದಳು. ಇದಕ್ಕೆ ಫಾಹಿದ್ ಒಪ್ಪಿಕೊಂಡಿದ್ದ, ನಂತರ ಸಹೋದರ ಇಮ್ರಾನ್ ಪಾಷನನ್ನು ಒಪ್ಪಿಸಿದ್ದಳು ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದರು.
ಬಾಡಿಗೆ ನೆಪದಲ್ಲಿ ಕರೆದೊಯ್ದು ಕೊಲೆ:
ಅ.12 ಸಂಜೆ ಖುರೇಷಿ ಮನೆಗೆ ತೆರಳಿದ್ದ ಫಾಹಿದ್ ಬಾಡಿಗೆಗೆ ಆಟೋ ಬೇಕಿದೆ ಎಂದು ಹೇಳಿದ್ದ. ಪತ್ನಿಯ ಸಂಚು ಅರಿಯದ ಖುರೇಷಿ ಆಟೋ ತೆಗೆದುಕೊಂಡು ಹೋಗಿದ್ದ. ಸಂಜೆ 4.30ರ ಸುಮಾರಿಗೆ ಹೆಣ್ಣೂರು ಕ್ರಾಸ್ಧಿಗೆ ಕರೆದೊಯ್ದಿದ್ದ. ಅಲ್ಲಿಂದ ಇಮ್ರಾನ್ ಪಾಷನನ್ನು ಆಟೋಗೆ ಹತ್ತಿಸಿಕೊಂಡ ನಂತರ ಬಾಗಲೂರಿಗೆ ಹೋಗುವಂತೆ ಹೇಳಿದ್ದ.
ಮಾರ್ಗಮಧ್ಯೆ ಮಾರೇನಹಳ್ಳಿ ಬಂಡೆ ಸಮೀಪ ಆಟೋ ನಿಲ್ಲಿಸುತ್ತಿದ್ದಂತೆ ಖುರೇಷಿಯನ್ನು ಆಟೋದಿಂದ ಹೊರಗಳೆದು ಹಲ್ಲೆ ಮಾಡಲಾಗಿದೆ. ಪ್ರತಿಯಾಗಿ ಖುರೇಷಿ ಆಟೋ ಸೀಟಿನ ಕೆಳಗಿಟ್ಟಿದ್ದ ಚಾಕುವಿನಿಂದ ಫಾಹಿದ್ ನ ಮೇಲೆ ಹಲ್ಲೆ ಮಾಡಿದ್ದ. ತಪ್ಪಿಸಿಕೊಳ್ಳಲು ಕೈಗಳನ್ನು ಅಡ್ಡವಿಟ್ಟಾಗ ಫಾಹಿದ್ ನ ಎರಡು ಅಂಗೈಗೆ ಗಾಯವಾಗಿದೆ. ಈ ವೇಳೆ ಇಮ್ರಾನ್ ಪಾಷಾ ತನ್ನಲ್ಲಿದ್ದ ಚಾಕು ತೆಗೆದು ಖುರೇಷಿ ಹೊಟ್ಟೆಗೆ ಇರಿದಿದ್ದ.
ತಕ್ಷಣ ಕುಸಿದು ಬಿದ್ದ ಖುರೇಷಿ ಕೈಯಲ್ಲಿದ್ದ ಚಾಕು ಕಿತ್ತುಕೊಂಡ ಫಾಹಿದ್, ಆತನ ಮೇಲೆ ಹಲವು ಬಾರಿ ಇರಿದು ಕೊಲೆ ಮಾಡಿ ಬಳಿಕ ಶವವನ್ನು ಕಲ್ಲುಕ್ವಾರಿಯಲ್ಲಿ ಸಂಗ್ರವಾಗಿದ್ದ ನೀರಿಗೆ ತಳ್ಳಿ ಸ್ಥಳದಿಂದ ಪರಾರಿಯಾಗಿದ್ದರು. ಆಟೋವನ್ನು ಮತ್ತೊಬ್ಬ ಆರೋಪಿ ಸಾದಿಕ್ ಪಾಷ ಬಳಿ ಆಟೋ ಬಿಟ್ಟು ಹೋಗಿದ್ದರು. ಸಾದಿಕ್ ಆಟೋವನ್ನು ಹೊಸಕೋಟೆಗೆ ಕೊಂಡೊಯ್ದು ರಸ್ತೆಬದಿ ಬಿಟ್ಟು ಬಂದಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.