ಕಬ್ಬನ್ ಉದ್ಯಾನವನದಲ್ಲಿ ಬೆದರುಗೊಂಬೆಗಳು 
ಜಿಲ್ಲಾ ಸುದ್ದಿ

ಪ್ರೇಮಿಗಳಿಗಿರಲಿ ರಾತ್ರಿ 10ರ ವರೆಗೆ ಪರ್ಮಿಶನ್!

ಕಬ್ಬನ್‍ಪಾರ್ಕ್‍ನಲ್ಲಿ ರಾತ್ರಿ 10 ಗಂಟೆವರೆಗೂ ಪ್ರೇಮಿಗಳ ಅಲೆದಾಟಕ್ಕೆ ಅವಕಾಶ ಕೊಡಬೇಕು. ಜತೆಗೆ ತಿಂಡಿ, ತಿನಿಸು ಮಾರಾಟ ಮಾಡಲು ಅವಕಾಶ ಕೊಡಬೇಕೆಂಬ ಕೂಗು ಎದ್ದಿದೆ...

ಬೆಂಗಳೂರು: ಕಬ್ಬನ್‍ಪಾರ್ಕ್‍ನಲ್ಲಿ ರಾತ್ರಿ 10 ಗಂಟೆವರೆಗೂ ಪ್ರೇಮಿಗಳ ಅಲೆದಾಟಕ್ಕೆ ಅವಕಾಶ ಕೊಡಬೇಕು. ಜತೆಗೆ ತಿಂಡಿ, ತಿನಿಸು ಮಾರಾಟ ಮಾಡಲು ಅವಕಾಶ ಕೊಡಬೇಕೆಂಬ ಕೂಗು ಎದ್ದಿದೆ.

ಇದಕ್ಕಾಗಿ ಸ್ವಯಂ ಸೇವಾ ಸಂಸ್ಥೆಯ ಪ್ರತಿನಿಧಿಗಳು ಹಾಗೂ ಕೆಲವು ಕಲಾವಿದರ ತಂಡ ಕಬ್ಬನ್‍ಪಾರ್ಕ್‍ನಲ್ಲಿ ಬೆದರುಗೊಂಬೆಗಳ ನ್ನಿಟ್ಟು ವಿನೂತನ ರೀತಿಯಲ್ಲಿ ಪ್ರತಿಭಟನೆ ನಡೆಸಿದೆ. ಕಬ್ಬನ್‍ಪಾರ್ಕ್ ಹಾಗೂ ಲಾಲ್‍ಬಾಗ್‍ನಲ್ಲಿ ಅಕ್ರಮ ಚಟುವಟಿಕೆಗಳು ಹಾಗೂ ಪ್ರೇಮಿಗಳ ಹಾವಳಿ ತಪ್ಪಿಸಲು ಜಾರಿಗೊಳಿಸಿದ `ಹಸಿರು ಪೊಲೀಸ್'ನಿಂದಾಗಿ ಕೆಲವೊಂದು ನಿಯಂತ್ರಣಕ್ಕೆ ಬಂದಿದ್ದವು.

ಆದರೆ ಈಗ ಕಬ್ಬನ್ ಉದ್ಯಾನದಲ್ಲಿ ರಾತ್ರಿ 10ರ ತನಕ ಮುಕ್ತವಾಗಿ ಓಡಾಡಲು ಅವಕಾಶ ಕೊಡಬೇಕೆಂದು ಕೆಲವು ಸಂಘಟನೆಗಳು ಪ್ರತಿಭಟನೆಗಿಳಿಯುವ ಮೂಲಕ ಪುನಃ ಹಿಂದಿನ ಸ್ಥಿತಿಯೇ ಮರುಕಳಿಸುವ ಸಾಧ್ಯತೆಗಳಿವೆ.

ಪ್ರತಿ ದಿನ ಸಂಜೆ 7ರ ನಂತರ ಸಾರ್ವಜನಿಕರಿಗೆ ಉದ್ಯಾನದೊಳಗೆ ಪ್ರವೇಶ ನಿಷೇಧ. ಕೆಲವರು ಉದ್ಯಾನದಲ್ಲಿ ಬೇಡದ ಚಟುವಟಿಕೆಗಳನ್ನು ನಡೆಸುತ್ತಿದ್ದರು, ಪ್ರೇಮಿಗಳು ಕೂಡ ಎಲ್ಲೆಮೀರಿ ವರ್ತಿಸುತ್ತಿದ್ದರು. ಈ ಹಿನ್ನೆಲೆಯಲ್ಲಿ ತೋಟಗಾರಿಕೆ ಇಲಾಖೆ ಅಧಿಕಾರಿಗಳು ಇಂತಹ ಕೃತ್ಯಗಳಿಗೆ ಆಸ್ಪದ ನೀಡಬಾರದೆಂದು ಸಾರ್ವಜನಿಕರಿಗೆ ಸಂಜೆ 7ರ ನಂತರ ಪ್ರವೇಶ ನಿಷೇಧಿಸಲಾಗಿತ್ತು. ಆದರೆ `ಮಾರಾ' ಎಂಬ ಸ್ವಯಂ ಸೇವಾ ಸಂಸ್ಥೆ ಮತ್ತು ಕೆಲವು ಕಲಾವಿದರ ತಂಡ ಅಧಿಕಾರಿಗಳ ವಿರುದ್ಧ ಕಿಡಿಕಾರಿದ್ದಾರೆ. ಪ್ರೇಮಿಗಳ ಮೇಲೆ ನೈತಿಕ ಪೊಲೀಸ್‍ಗಿರಿಯನ್ನು ತೋರಿಸುತ್ತಿದ್ದಾರೆ. ರಾತ್ರಿ 7ಗಂಟೆಯ ಮೇಲೂ ಮುಕ್ತ ಪ್ರವೇಶ ನೀಡಬೇಕು ಹಾಗೂ ತಿಂಡಿ ತಿನಿಸುಗಳನ್ನು ಪಾರ್ಕ್‍ನ ಒಳಗೆ ಮಾರಾಟಕ್ಕೆ ಅನುವು ಮಾಡಿಕೊಡಬೇಕು ಎಂದು ಬೆದರುಗೊಂಬೆಗಳನ್ನಿಟ್ಟು ಪ್ರತಿಭಟನೆ ನಡೆಸಿದ್ದಾರೆ.

ಪ್ರೇಮಿಗಳು ಮರದ ಕೆಳಗೆ ನಿಂತಿರುವ 45 ಆಕೃತಿಗಳನ್ನು `ಮಾರಾ ಫೌಂಡೇಷನ್' ಬ್ಯಾಂಡ್‍ಸ್ಟ್ಯಾಂಡ್, ಮತ್ತಿತರ ಕಡೆ ಇಟ್ಟಿದೆ. ಜತೆಗೆ 45 ಬೆದರುಗೊಂಬೆಗಳನ್ನು ಹಾಕಿದೆ. ಇತ್ತೀಚೆಗೆ ಪ್ರತಿ ಭಾನುವಾರ ಕಬ್ಬನ್‍ಪಾರ್ಕ್‍ನಲ್ಲಿ ವಾಹನ ಸಂಚಾರ ನಿಷೇಧಿಸಿರುವುದರಿಂದ ಕೆಲವೊಂದು ಸಾಂಸ್ಕೃತಿಕ, ಸಂಗೀತ, ನೃತ್ಯ ಕಾರ್ಯಕ್ರಮಗಳಿಂದಾಗಿ ಕುಟುಂಬಸ್ಥರು ಹಾಗೂ ಮಕ್ಕಳ ಸಂಖ್ಯೆ ಜಾಸ್ತಿಯಾಗಿದೆ.

ಆದರೆ ಈಗ ರಾತ್ರಿ 10ರವರೆಗೆ ಪ್ರೇಮಿಗಳಿಗೆ ಉದ್ಯಾನದೊಳಗೆ ಅವಕಾಶ ಮಾಡಿಕೊಟ್ಟರೆ ಕುಟುಂಬಸ್ಥರು ದೂರ ಉಳಿಯುತ್ತಾರೆ ಎಂಬ ಆತಂಕವಿದೆ. ನಿತ್ಯ ಬೆಳಗ್ಗೆಯಿಂದ ಸಂಜೆಯವರೆಗೆ ಭದ್ರತೆ ನೀಡಲು ಸಾಧ್ಯವಿಲ್ಲ, ಸಂಜೆ ಬಳಿಕ ಸಾರ್ವಜನಿಕರ ಸಂಚಾರ ನಿಷೇಧಿಸಲಾಗಿದೆ. ಕೆಲವೊಂದು ಗೌಪ್ಯ ಸ್ಥಳವಿರುವುದರಿಂದ ಅನೈತಿಕ ಚಟುವಟಿಕೆಗಳು ನಡೆಯಬಾರದು ಮತ್ತು ಉಳಿದ ಹೆಣ್ಣು ಮಕ್ಕಳಿಗೆ ಅದರಿಂದ ತೊಂದರೆ- ಯುಂಟಾಗಬಾರದು ಎನ್ನುವುದು ಇಲಾಖೆಯ ಉದ್ದೇಶ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಇಂಧನ ಸ್ಥಾವರಗಳ ಮೇಲಿನ ದಾಳಿಯನ್ನು ನಿಲ್ಲಿಸಲು ರಷ್ಯಾ-ಉಕ್ರೇನ್ ಒಪ್ಪಿಕೊಂಡಿವೆ: ಟ್ರಂಪ್ ಘೋಷಣೆ

ಕೊನೆಯ ಓವರ್‌ನಲ್ಲಿ ಭಾರತಕ್ಕೆ ವಿಂಡೀಸ್ ವಿರುದ್ಧ ರೋಚಕ ಜಯ: T20 ಸರಣಿಯಲ್ಲಿ 2-1 ಮುನ್ನಡೆ!

'We're Sorry': ಅಭಿಜಿತ್ ದೀಪ್ಕೆಗೆ ಅಜ್ಜಿಯ ಸಾವಿನ ಬಗ್ಗೆ ತಿಳಿಸಿದ್ದ ಮಹಿಳಾ ಪೊಲೀಸ್; ಹೇಗಿತ್ತು CJP ನಾಯಕನ ಪ್ರತಿಕ್ರಿಯೆ...: ವಿಡಿಯೋ ವೈರಲ್!

'ಮತದಾನದ ಹಕ್ಕನ್ನೇ ಕಸಿದರೆ ಯಾವ ಪಕ್ಷವೂ ಸುರಕ್ಷಿತವಾಗಿರಲ್ಲ': SIR ವಿರುದ್ಧ ದೇಶಾದ್ಯಂತ ಹೋರಾಟಕ್ಕೆ CJP ಕರೆ

ಸ್ಟಿಂಗ್‌ ಆಪರೇಷನ್ ಆರೋಪ: ಶಾಂಗ್ರೀಲಾ ಹೋಟೆಲ್‌ನಲ್ಲಿ ಯಾರ ಜೊತೆ ಕುಳಿತಿದ್ರಿ; ಸಿಎಂ ಶಿವಕುಮಾರ್ ವಿರುದ್ಧ HDK ಹೊಸ ಬಾಂಬ್