ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗಾರೆಡ್ಡಿ (ಸಂಗ್ರಹ ಚಿತ್ರ) 
ಜಿಲ್ಲಾ ಸುದ್ದಿ

ವಿವಾದ ಬಗೆಹರಿಸಿ ಇಲ್ಲವೇ ಮಾತೃ ಇಲಾಖೆಗೆ ಹೋಗಿ

ತೂಬರಹಳ್ಳಿಯ ವಿಬ್ಗಯಾರ್ ಸಂಸ್ಥೆ ಮುಂದಿನ ರಸ್ತೆ ಒತ್ತುವರಿ ವಿವಾದವನ್ನು ನ.1 ರೊಳಗೆ ಬಗೆಹರಿಸದಿದ್ದರೆ ನಗರ ಯೋಜನೆಯ ಅಧಿಕಾರಿಯನ್ನು ಮಾತೃ ಇಲಾಖೆಗೆ ವಾಪಸ್ ಕಳುಹಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗಾರೆಡ್ಡಿ ಎಚ್ಚರಿಕೆ ನೀಡಿದ್ದಾರೆ...

ಬೆಂಗಳೂರು: ತೂಬರಹಳ್ಳಿಯ ವಿಬ್ಗಯಾರ್ ಸಂಸ್ಥೆ ಮುಂದಿನ ರಸ್ತೆ ಒತ್ತುವರಿ ವಿವಾದವನ್ನು ನ.1 ರೊಳಗೆ ಬಗೆಹರಿಸದಿದ್ದರೆ ನಗರ ಯೋಜನೆಯ ಅಧಿಕಾರಿಯನ್ನು ಮಾತೃ ಇಲಾಖೆಗೆ ವಾಪಸ್ ಕಳುಹಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗಾರೆಡ್ಡಿ ಎಚ್ಚರಿಕೆ ನೀಡಿದ್ದಾರೆ.

ಮಹದೇವಪುರ ವಲಯದ ತೂಬರಹಳ್ಳಿಯ ವಿವಾದಿತ ಸ್ಥಳದಲ್ಲಿ ಪರಿಶೀಲನೆ ನಡೆಸಿದ ಸಚಿವರು, ಕಾನೂನು ಪ್ರಕಾರ ರಸ್ತೆಗೆ ಜಾಗ ಬಿಡಲು ಕ್ರಮಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ಹಲವು ವರ್ಷಗಳಿಂದ ತೂಬರಹಳ್ಳಿಯ ವಿಬ್ಗಯಾರ್ ಶಾಲೆಯ ಮುಂದಿನ ರಸ್ತೆ ವಿವಾದಕ್ಕೆ ಒಳಗಾಗಿದೆ. ಶಾಲೆಗೆ ಅಭಿಮುಖವಾಗಿ ವಸತಿ ಸಂಕೀರ್ಣಗಳು ನಿರ್ಮಾಣವಾಗಿವೆ. ಶಾಲೆಯ ಮುಂದಿನ ರಸ್ತೆಯನ್ನು 40 ಅಡಿ ಬಿಡಬೇಕಿದ್ದರೂ ನಿಯಮ ಉಲ್ಲಂಘಿಸಿ ಬೇಲಿ ಹಾಕಲಾಗಿದೆ.

ಹಿಂದಿನ ದಿನ ಇಲ್ಲಿಗೆ ಭೇಟಿ ನೀಡಿದ್ದ ಬಿಎಂಟಿಎಫ್ ಸಿಬ್ಬಂದಿ ಬೇಲಿ ಕಿತ್ತುಹಾಕಿದ್ದರು. ಇದರಿಂದಾಗಿ ಮತ್ತೆ ವಿವಾದ ಆರಂಭವಾಗಿತ್ತು. ಸಚಿವ ರಾಮಲಿಂಗಾರೆಡ್ಡಿ ಪರಿಶೀಲ ನೆಗೆ ಬಂದಾಗ ಮಹದೇವಪುರ ಬಿಬಿಎಂಪಿ ವಲಯದ ನಗರ ಯೇಜನೆಯ ಸಹಾಯಕ ನಿರ್ದೇಶಕ ಗಂಗಪ್ಪ, ಶಾಲೆಯ ಚಂದ್ರಾರೆಡ್ಡಿ, ರಮೇಶ್ ರೆಡ್ಡಿ ಹಾಗೂ ವಿಶ್ವಾನಿ ಗ್ರೂಪ್‍ನ ಮುಖ್ಯಸ್ಥರು ನೈಜಸ್ಥಿತಿ ವಿವರಿಸಿದರು. ವಿಬ್ಗಯಾರ್ ಶಾಲೆ ಈ ಜಾಗ ಪಡೆದಾಗ ಪಂಚಾಯ್ತಿಯಿಂದ ಮಂಜೂರಾಗಿತ್ತು.

ಬಿಬಿಎಂಪಿ ನೀಡಿರುವ ನಕ್ಷೆಯಲ್ಲಿ ಸರ್ವೆ ಸಂ.58/1 ಹಾಗೂ 58/2 ರಲ್ಲಿ ಕಟ್ಟಡ ನಿರ್ಮಿಸಲು ಅನುಮತಿ ದೊರೆತಿತ್ತು. ಅನುಮತಿ ಪತ್ರದಲ್ಲಿ ರಸ್ತೆಗೆ ಜಾಗ ಬಿಡುವ ಪ್ರಸ್ತಾಪವೇ ಇಲ್ಲ. ಹೀಗಾಗಿ ಎರಡೂ ಸರ್ವೆ ಸಂಖ್ಯೆಗಳ ಜಾಗದ ಮಾಲೀಕರು ರಸ್ತೆಗಾಗಿ ಜಾಗ ಬಿಟ್ಟಿರಲಿಲ್ಲ. ಹೀಗಾಗಿ ಗೊಂದಲ ಸೃಷ್ಟಿಯಾಗಿದ್ದು, ರಸ್ತೆಯಜಾಗವೂ ತನ್ನದೇ ಎಂದು ವಿಬ್ಗಯಾರ್  ವಾದಿಸುತ್ತಿದೆ. ಒಂದು ವೇಳೆ ರಸ್ತೆಗಾಗಿ 40 ಅಡಿ ಜಾಗ ನೀಡಬೇಕೆಂದರೆ ಮುಂಭಾಗದ ವಸತಿ ಸಂಕೀರ್ಣದ ಮಾಲೀಕರು ಕೂಡಾ ಜಾಗ ಬಿಟ್ಟುಕೊಡಬೇಕು ಎಂದು ಚರ್ಚೆ ನಡೆಯಿತು.

ಸ್ಥಳದಲ್ಲಿ ಚರ್ಚೆ ಕಾವೇರುತ್ತಿದ್ದಾಗ ಅಧಿಕಾರಿ ಗಂಗಪ್ಪ ಅವರನ್ನು ತರಾಟೆಗೆ ತೆಗೆದುಕೊಂಡ ಸಚಿವ ರಾಮಲಿಂಗಾರೆಡ್ಡಿ, ಅಧಿಕಾರಿಗಳು ಹುಡುಗಾಟ ಆಡುತ್ತಿದ್ದಾರೆ. ವಿವಾದ ಬಗೆಹರಿಸಲು ಮೂರನೇ ಬಾರಿ ಇಲ್ಲಿಗೆ ಬರುತ್ತಿದ್ದು, ಇನ್ನೂ ಬಗೆಹರಿಯುವಂತೆ ಕಾಣುತ್ತಿಲ್ಲ. ನ.1ರೊಳಗೆ ವಿವಾದ ಮುಗಿಯದಿದ್ದರೆ ಮಾತೃ ಇಲಾಖೆಗೆ ಕಳುಹಿಸಲು ಆದೇಶಿಸಲಾಗುವುದು ಎಂದರು.

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ರಾಮಲಿಂಗಾ ರೆಡ್ಡಿ, ಗ್ರಾಮದಲ್ಲಿ ನಕ್ಷೆ ಮಂಜೂರಾತಿ ಮಾಡಿದ ಅ„ಕಾರಿ ಹಾಗೂ ಭೂ ಮಾಲೀಕರ ಅಕ್ರಮದಿಂದ ಇಂತಹ ಸಮಸ್ಯೆ ಸೃಷ್ಟಿಯಾಗಿದೆ. ಎರಡೂ ಕಡೆಗಳಲ್ಲಿ ಮಾಲೀಕರು ರಸ್ತೆಗಾಗಿ ಜಾಗ ಬಿಟ್ಟಿಲ್ಲ. ಹೀಗಾಗಿ ಸುಮಾರು 2 ಸಾವಿರ ಕುಟುಂಬಗಳಿಗೆ ಸಮಸ್ಯೆಯಾಗುತ್ತಿದೆ. ವಿವಾದ ಬಗೆಹರಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದು, ರಸ್ತೆಗೆ ಜಾಗ ಬಿಡುವಂತೆ ಮಾಲೀಕರಿಗೂ ತಿಳಿಸಲಾಗಿದೆ ಎಂದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಕಾಗ್ನಿಜಂಟ್, ಇನ್ಫೋಸಿಸ್, ಟಿಸಿಎಸ್, ವಿಪ್ರೋ ಎಚ್‌ಸಿಎಲ್ ಗೆ ಅಮೆರಿಕ ಶಾಕ್: ಗ್ರೀನ್ ಕಾರ್ಡ್ ಕಾರ್ಯಕ್ರಮದಿಂದ ಅಮಾನತು!

ರಿಯಾದ್ ವಿಮಾನ ನಿಲ್ದಾಣದ ಮೇಲೆ ದಾಳಿ: ರಿಯಾದ್ ಗೆ ತೆರಳಬೇಕಿದ್ದ ಭಾರತೀಯ ವಿಮಾನಗಳು ರದ್ದು

ರಾಜ್‌ಘಟ್‌ನಲ್ಲಿ 'ಇಂಡಿಯಾ' ನಾಯಕರಿಂದ ಧರಣಿ; ಜ್ಞಾನೇಶ್ ಕುಮಾರ್ ರಾಜೀನಾಮೆ ನೀಡುವವರೆಗೂ 'ವೋಟ್ ಚೋರಿ' ಹೋರಾಟ ಮುಂದುವರಿಸಲು ಪ್ರತಿಜ್ಞೆ!

ಅಂಬಾನಿ ಭಾರತದ ನಿಜವಾದ ಬಾಸ್?: ಭಾರತದಲ್ಲಿ ಸ್ಟಾರ್ ಲಿಂಕ್ ಸೇವೆ ಆರಂಭ ವಿಳಂಬಕ್ಕೆ ಎಲಾನ್ ಮಸ್ಕ್ ಹತಾಶೆ!

SIR ಕಾನೂನುಬದ್ಧ: ಪ್ರತಿಪಕ್ಷಗಳ ಪ್ರತಿಭಟನೆ ನಡುವೆ CEC ಜ್ಞಾನೇಶ್ ಬೆಂಬಲಕ್ಕೆ ನಿಂತ 42 ನಿವೃತ್ತ ನ್ಯಾಯಾಧೀಶರು!