ವೈ ಭಾಸ್ಕರ್ ರಾವ್ 
ಜಿಲ್ಲಾ ಸುದ್ದಿ

ಲೋಕಾಯುಕ್ತ ನ್ಯಾ.ಭಾಸ್ಕರ್ ರಾವ್ ರಜೆ ಮತ್ತೆ 45 ದಿನ ವಿಸ್ತರಣೆ

ಲೋಕಾಯುಕ್ತ ಭಾಸ್ಕರರಾವ್ ಮತ್ತೆ ರಜೆ ವಿಸ್ತರಿಸಿಕೊಂಡಿದ್ದಾರೆ. ಅಂದರೆ ಅಕ್ಟೋಬರ್ 22ರಿಂದ ಡಿಸೆಂಬರ್ 5ರವರೆಗೆ ಅವರು ರಜೆಯಲ್ಲಿರುತ್ತಾರೆ. ...

ಬೆಂಗಳೂರು: ಲೋಕಾಯುಕ್ತ ಭಾಸ್ಕರರಾವ್ ಮತ್ತೆ ರಜೆ ವಿಸ್ತರಿಸಿಕೊಂಡಿದ್ದಾರೆ. ಸುದೀರ್ಘ 84 ದಿನಗಳ ರಜೆಯಲ್ಲಿದ್ದ ಅವರು ಈ ಬಾರಿ ಬರೋಬ್ಬರಿ 45 ದಿನಗಳವರೆಗೆ! ಅಂದರೆ ಅಕ್ಟೋಬರ್ 22ರಿಂದ ಡಿಸೆಂಬರ್ 5ರವರೆಗೆ ಅವರು ರಜೆಯಲ್ಲಿರುತ್ತಾರೆ. ಅಕ್ಟೋಬರ್ 1, 2015ರಿಂದ 21ರವರೆಗೆ ರಜೆ ವಿಸ್ತರಿಸಿಕೊಂಡಿದ್ದ ಅವರು, ಅ.22ರಿಂದ 45 ದಿನಗಳವರೆಗೆ ಒಮ್ಮೆಲೇ ರಜೆ ವಿಸ್ತರಿಸಿಕೊಂಡಿದ್ದಾರೆ. ಈಗ ರಜೆ ಪಡೆದ ದಿನಗಳ ಸಂಖ್ಯೆ ಈಗ 129 ದಿನಕ್ಕೇರಿದೆ. ಈ ಬಾರಿಯೂ ರಜೆ ವಿಸ್ತರಣೆಗೆ ಅವರು ಯಾವುದೇ ಕಾರಣಗಳನ್ನು ನೀಡಿಲ್ಲ.

ಭಾಸ್ಕರರಾವ್ ಪದೇ ಪದೆ ರಜೆ ಮೇಲೆ ತೆರಳುತ್ತಿದ್ದರೂ ಸರ್ಕಾರ ಮಾತ್ರ ಇನ್ನೂ ಮೌನ ಮುರಿದಿಲ್ಲ. ಲೋಕಾ ಲಂಚ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಸಾರ್ವಜನಿಕ ವಲಯದಲ್ಲಿನ ಆಕ್ಷೇಪ ಮತ್ತು ಅವರ ವಿರುದ್ಧ ಸರಣಿ ಪ್ರತಿಭಟನೆಗಳು ನಡೆದ ಕಾರಣ ರಜೆ ತಂತ್ರ ಬಳಸಿದ್ದ ಭಾಸ್ಕರರಾವ್ ಅವರು, ಪುತ್ರ ಅಶ್ವಿನ್‍ರಾವ್ ಸೇರಿ ಹಲವರ ವಿರುದ್ಧ ಈಗಾಗಲೇ 4 ಚಾರ್ಜ್ ಶೀಟ್ ಗಳು ಸಲ್ಲಿಕೆಯಾಗಿರುವ ಕಾರಣ ಮುಜುಗರದಿಂದ ತಪ್ಪಿಸಿಕೊಳ್ಳಲು ರಜೆ ತಂತ್ರ ಬಳಸುತ್ತಿದ್ದಾರೆ ಎನ್ನಲಾಗಿದೆ.

ಪಿಡಬ್ಲ್ಯೂಡಿ ಎಕ್ಸಿಕ್ಯೂಟಿವ್ ಎಂಜಿನಿಯರ್ ಕೃಷ್ಣ-ಮೂರ್ತಿಯಿಂದ 1 ಕೋಟಿ ರು.ಗೆ ಬೇಡಿಕೆ ಇಟ್ಟಿದ್ದ ಪ್ರಕರಣದ ಸಂಬಂಧ ಭಾಸ್ಕರರಾವ್, ಅಶ್ವಿನ್‍ರಾವ್ ಸೇರಿ ಹಲವರ ವಿರುದ್ಧ ಲೋಕಾ ಕಚೇರಿ, ನಿವಾಸದಲ್ಲಿ ಕಾರ್ಯನಿರ್ವಹಿಸುತ್ತಿರುವ ನೌಕರರೇ ಹೇಳಿಕೆ ನೀಡಿದ್ದಾರೆ. ವಿಶೇಷ
ತನಿಖಾ ತಂಡ ಸಲ್ಲಿಸಿರುವ ಚಾರ್ಜ್‍ಶೀಟ್ ನಲ್ಲಿರುವ ವಿವರಗಳೆಲ್ಲವೂ ಭಾಸ್ಕರರಾವ್ ಮತ್ತು ಅಶ್ವಿನ್‍ರಾವ್ ವಿರುದ್ದ ಸಾಕಷ್ಟು ಹೇಳಿಕೆ ಮತ್ತು ಸಾಕ್ಷ್ಯಗಳಿವೆ.

ಭಾಸ್ಕರರಾವ್ ಅವರನ್ನು ಬಂಧನಕ್ಕೊಳಪಡಿಸಲು ಅವಕಾಶವಿದ್ದರೂ ವಿಶೇಷ ತನಿಖಾ ತಂಡ ಕೇವಲ ವಿಚಾರಣೆ ನಡೆಸಿ ಪ್ರಮುಖ ಸಾಕ್ಷಿಯನ್ನಾಗಿಸಿ ಕೈತೊಳೆದುಕೊಂಡಿದೆ. ಲೋಕಾಯುಕ್ತದಲ್ಲಿ ದಾಖಲಾಗಿರುವ ವಿವಿಧ ದೂರುಗಳ ಸಂಬಂಧ ತನಿಖೆ ಪೂರ್ಣಗೊಳಿಸಿರುವ ಸಹಾಯಕ ನಿಬಂಧಕರು, ಲೋಕಾಯುಕ್ತರ ಆದೇಶ ಮತ್ತು ಅನುಮೋದನೆಗಾಗಿ ಕಡತಗಳನ್ನು ಸಿದ್ದಗೊಳಿಸಿಕೊಂಡಿದ್ದಾರೆ.,
.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರಾಜ್ಯ ಸರ್ಕಾರಕ್ಕೆ 'ಸ್ಟಿಂಗ್ ಆಪರೇಷನ್' ಆತಂಕ: ಟ್ರ್ಯಾಪ್‌ಗೆ ಯತ್ನ ನಡೆಯುತ್ತಿದೆ, ಹುಷಾರಾಗಿರಿ ; 5 ಸಚಿವರಿಗೆ ಡಿಕೆಶಿ ಎಚ್ಚರಿಕೆ ಸಂದೇಶ

‘ವೈಯಕ್ತಿಕ ಮಹತ್ವಾಕಾಂಕ್ಷೆ ಅಲ್ಲ, ಧ್ಯೇಯಕ್ಕಾಗಿ ಬದುಕಿದ್ದೇನೆ, ದೇಶದ ಜನತೆಗೆ ತಲೆಬಾಗುತ್ತೇನೆ’: ಆಡಳಿತದಲ್ಲಿ 25 ವರ್ಷ ಪೂರೈಸಿದ ಪ್ರಧಾನಿ ಮೋದಿ ಮಾತು; Video

Bigg Boss Kannada: ಟಾಸ್ಕ್ ವೇಳೆ ಕುಸಿದು ಬಿದ್ದ ನಟಿ ಸಂಗೀತಾ ಭಟ್; ಆರೋಗ್ಯದಲ್ಲಿ ಏರುಪೇರು! ವಿಡಿಯೋ ವೈರಲ್

42 ಎಸೆತ, 102 ರನ್: ವಿರಾಟ್ ಕೊಹ್ಲಿಯ ಸಾರ್ವಕಾಲಿಕ ದಾಖಲೆಯೇ ಉಡೀಸ್‌ ಮಾಡಿದ ಶ್ರೇಯಸ್ ಅಯ್ಯರ್‌!

ಹಾಸನದ ಹೇಮಾವತಿ ನಾಲೆಯಲ್ಲಿ ಪ್ಲಾಸ್ಟಿಕ್‌ ಚೀಲದಲ್ಲಿ ವೃದ್ಧೆಯ ಶವ ಪತ್ತೆ: ಕೊಲೆ ಶಂಕೆ