ಎಪಿಎಂಸಿ ಸುಧಾರಣೆಗೆ ಅಮೆರಿಕ ಹರ್ಷ
ರಾಜ್ಯದ ಕೃಷಿ ಉತ್ಪನ್ನ ಮಾರುಕಟ್ಟೆಗಳಲ್ಲಿ ಜಾರಿಗೆ ತಂದಿರುವ ಸುಧಾರಣೆಗಳು ರೈತ ಪರವಾಗಿವೆ. ಈ ವ್ಯವಸ್ಥೆ ಇಡೀ ರಾಷ್ಟ್ರಕ್ಕೆ ಉಪಯುಕ್ತವಾಗಿದೆ...
ಬೆಂಗಳೂರು: ರಾಜ್ಯದ ಕೃಷಿ ಉತ್ಪನ್ನ ಮಾರುಕಟ್ಟೆಗಳಲ್ಲಿ ಜಾರಿಗೆ ತಂದಿರುವ ಸುಧಾರಣೆಗಳು ರೈತ ಪರವಾಗಿವೆ. ಈ ವ್ಯವಸ್ಥೆ ಇಡೀ ರಾಷ್ಟ್ರಕ್ಕೆ ಉಪಯುಕ್ತವಾಗಿದೆ ಎಂದು ಅಮೆರಿಕ ರಾಯಭಾರ ಕಚೇರಿಯಲ್ಲಿನ ಕೃಷಿ ವ್ಯವಹಾರ ಳ ಕೌನ್ಸಿಲರ್ ಸ್ಕಾಟ್ ಸಿಂಡ್ಲರ್ ಹರ್ಷ ವ್ಯಕ್ತಪಡಿಸಿದರು. ಕೃಷಿ ಮಾರುಕಟ್ಟೆ ಇಲಾಖೆ ಮತ್ತು ತೋಟಗಾರಿಕಾ ಸಚಿವ ಶಾಮನೂರು
ಶಿವಶಂಕರಪ್ಪ, ಹಿರಿಯ ಕೃಷಿ ತಜ್ಞ ಡಾ. ಸಂತೋಷ್ ಕುಮಾರ್ ಸಿಂಗ್ ಮತ್ತು ಇಲಾಖೆಯ ಉನ್ನತ ಅಧಿಕಾರಿಗಳನ್ನು ಇತ್ತೀಚೆಗೆ ಭೇಟಿ ಮಾಡಿದ ಸ್ಕಾಟ್ ಸಿಂಡ್ಲರ್, ತೋಟಗಾರಿಕೆ, ಕೃಷಿ ಉತ್ಪನ್ನಗಳ ಮಾರಾಟ ಕ್ಷೇತ್ರದ ಲಉನ್ನತೀಕರಣಕ್ಕಾಗಿ ಹಾಗೂ ಮತ್ತಷ್ಟು ತಂತ್ರಜ್ಞಾನಗಳ ಅಳವಡಿಕೆಯ ಸಂಬಂಧ ಅಮೆರಿಕ ಮತ್ತು ಕರ್ನಾಟಕ ದ್ವಿಪಕ್ಷೀಯ ಸಂಬಂಧಗಳು ಹೆಚ್ಚಲಿವೆ ಎಂದರು.
ಹೆಚ್ಚು ಸೌಲಭ್ಯ, ಪಾರದರ್ಶಕತೆ: ಸಚಿವ ಶಾಮನೂರು ಶಿವಶಂಕರಪ್ಪ ಮಾತನಾಡಿ, ರೈತರು ಮಾರಾಟಕ್ಕಾಗಿ ತಂದ ಉತ್ಪನ್ನಗಳ ಮಾರಾಟದಲ್ಲಿ ಸ್ಪರ್ಧೆಯನ್ನು ಹೆಚ್ಚಿಸುವ
ಮೂಲಕ ಉತ್ತಮ ಬೆಲೆ ಒದಗಿಸಲು ಅನುಕೂಲ ಕಲ್ಪಿಸಲಾಗಿದ್ದು, ಮಾರುಕಟ್ಟೆಯ ಎಲ್ಲ ಹಂತಗಳಲ್ಲಿ ಪಾರದರ್ಶಕತೆಯನ್ನು ಹೆಚ್ಚಿಸಲಾಗಿದೆ. ಕೃಷಿ ಉತ್ಪನ್ನ
ಮಾರುಕಟ್ಟೆ ಸಮಿತಿಗಳಲ್ಲಿ ಆನ್ಲೈನ್ ವೇದಿಕೆಯ ಮೂಲಕ ವಿವಿಧ ಮಾರಾಟ ಚಟುವಟಿಕೆಗಳನ್ನು ಜಾರಿ ಮಾಡಲಾಗಿದೆ. ವರ್ತಕರಿಗೆ ಏಕರೂಪದ ಏಕೀಕೃತ ಲೈಸನ್ಸ್ ನೀಡಿಕೆ, ದೂರದ ವ್ಯಾಪಾರವನ್ನು ಉತ್ತೇಜಿಸಲು ಕೃಷಿ ಉತ್ಪನ್ನಗಳ ಗುಣ ಪರೀಕ್ಷೆ ಮತ್ತು ವರ್ಗೀಕರಣ ಮುಂತಾದ ಗುಣಾತ್ಮಕ ಚಟುವಟಿಕೆಗಳನ್ನು ಕೈಗೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.
ಆನ್ಲೈನ್ ವಹಿವಾಟು: ರಾಷ್ಟ್ರದಲ್ಲಿಯೇ ಪ್ರಥಮ ಬಾರಿಗೆ ರಾಜ್ಯದ 75 ಪ್ರಮುಖ ಮಾರುಕಟ್ಟೆಗಳಲ್ಲಿ ಆನ್ಲೈನ್ ವ್ಯಾಪಾರ ವೇದಿಕೆಯನ್ನು ಕಲ್ಪಿಸಲಾಗಿದೆ. ಕಳೆದ ಒಂದು ವರ್ಷದಲ್ಲಿ ಪ್ರಾಯೋಗಿಕವಾಗಿ ಲಆನ್ಲೈನ್ ವೇದಿಕೆಯ ಮೂಲಕ ರು.11,000 ಕೋಟಿ ಮೌಲ್ಯದ 27 ಲಕ್ಷ ಲಾಟ್ಗಳನ್ನು ಅಂದರೆ 940 ಲಕ್ಷ ಕ್ವಿಂಟಲ್ಗಳಷ್ಟು ಸಂಚಿತ ಪ್ರಮಾಣದ ಕೃಷಿ ಉತ್ಪನ್ನಗಳ ವಹಿವಾಟು ನಡೆಸಲಾಗಿದೆ. ವರ್ತಕರಿಗೆಯಾಂತ್ರಿಕವಾಗಿ ಸ್ವಚ್ಛಗೊಳಿಸಿದ ಉತ್ಪನ್ನವನ್ನು ವ್ಯಾಪಾರಕ್ಕಾಗಿ ನೀಡುವ ಉದ್ದೇಶದಿಂದ ಈಗಾಗಲೇ 7 ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳಲ್ಲಿ ಸ್ವಯಂ ಚಾಲಿತ ಸ್ವಚ್ಛಗೊಳಿಸುವ, ವರ್ಗೀಕ ರಿಸುವ ಮತ್ತು ಪ್ಯಾಕ್ ಮಾಡುವ ಯಂತ್ರೋಪಕರಣಗಳನ್ನು ಅಳವಡಿಸಲಾಗಿದೆ. ಇದರಿಂದ ರೈತರ ಉತ್ಪನ್ನಗಳಿಗೆ ಉತ್ತಮ ಬೆಲೆ ಪಡೆಯಲು ಸಾಧ್ಯವಾಗುತ್ತಿದೆ. ಪ್ರಸಕ್ತ ಸಾಲಿನಲ್ಲಿ ಈ ವ್ಯವಸ್ಥೆಯನ್ನು ಇನ್ನೂ 25 ಕೃಷಿ ಉತ್ಪನ್ನಮಾರುಕಟ್ಟೆ ಸಮಿತಿಗಳಿಗೆ ವಿಸ್ತರಿಸಲು ಉದ್ದೇಶಿಸಲಾಗಿದೆ ಎಂದು ಸಚಿವರು ತಿಳಿಸಿದರು.