ಮಂಗಳೂರು: ಜಾತಿ, ಪಕ್ಷ ಭೇದ ಮರೆತು ನೇತ್ರಾವತಿಗಾಗಿ ಒಗ್ಗಟ್ಟಾದ ಜನತೆ, ಸರ್ವ ಧರ್ಮ ಗುರುಗಳ ಸಮ್ಮಿಲನ. ನೇತ್ರಾವತಿ ನದಿಯಲ್ಲಿ ದೋಣಿಯಲ್ಲಿ ಸಂಚರಿಸುವ ಮೂಲಕ ಹೋರಾಟಕ್ಕೆ ಬೆಂಬಲ. ಮಂಗಳವಾರ ಜೆಪ್ಪಿನಮೊಗರು ನೇತ್ರಾವತಿ ತಟದಲ್ಲಿ ಕಂಡುಬಂದ ದೃಶ್ಯಗಳಿವು. ಎತ್ತಿನ ಹೊಳೆ ಯೋಜನೆ ವಿರುದ್ಧ ನೇತ್ರಾವತಿ ಸಂರಕ್ಷಣಾ ಸಮಿತಿಯಿಂದ ತೊಕ್ಕೊಟ್ಟಿ ನಿಂದ ಜೆಪ್ಪಿನಮೊಗರು ನೇತ್ರಾವತಿ ತಟದವರೆಗೆ ಬೃಹತ್ ಪಾದಯಾತ್ರೆ ನಡೆಯಿತು. ಸಂಜೆ ತೊಕ್ಕೊಟ್ಟು ಬಸ್ ತಂಗುದಾಣದಿಂದ ಸರ್ವ ಧರ್ಮೀಯ ಗುರುಗಳ ನೇತೃತ್ವದಲ್ಲಿ ಪಾದಯಾತ್ರೆ ಆರಂಬಿs-ಸಿದ್ದು, `ಬುಡಯ, ಬುಡಯ, ನೇತ್ರಾವತಿ ತಿರ್ಗಾಂಯೆರೆ ಬುಡಾಯ' (ಬಿಡಲಾರೆವು ಬಿಡಲಾರೆವು ನೇತ್ರಾವತಿ ತಿರುಗಿಸಲು ಬಿಡಲಾರೆವು) ಎನ್ನುವ ಘೋಷಣೆಯೊಂದಿಗೆ ನೇತ್ರಾವತಿ ಸೇತುವೆ ಮಧ್ಯ ಭಾಗಕ್ಕೆ ತಲುಪಿದರು. ಅದೇ ವೇಳೆ ನದಿಮಧ್ಯೆ ಎರಡು ದೋಣಿಗಳಲ್ಲಿ ಮಹಿಳೆ ಯರು ಬ್ಯಾನರ್ ಪ್ರದರ್ಶಿಸಿ ಬೆಂಬಲ ಸೂಚಿಸಿದರು. ಸೇತುವೆ ಮಧ್ಯಭಾಗದಲ್ಲೇ ವಾಹನ ನಿಲ್ಲಿಸಿ, ಸಿದ್ಧಪಡಿಸಲಾಗಿದ್ದ ವೇದಿಕೆಯಲ್ಲಿ ಗುರುಪುರ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ, ಅಲ್ ಫಾರ್ಕಾನ್ ಅರೆಬಿಕ್ ಕಾಲೇಜು ಪ್ರಾಂಶುಪಾಲ ಯಾಹ್ಯಾ ತಂಙಳ್ ಹಾಗೂ ಮಂಗಳೂರು ಧರ್ಮ ಪ್ರಾಂತ್ಯದ ವಿಕಾರ್ ರೆ.ಡೆನ್ನಿಸ್ ಮೋರಸ್ ಆಸೀನರಾಗಿ ದ್ದರೆ, ಅತ್ತ ಮೂರೂ ಧರ್ಮದ
ಮಹಿಳೆಯರು ಮಂಗಳೂರು ದಕ್ಷಿಣ ವಲಯ ಧರ್ಮಪ್ರಾಂತ್ಯ ಡೀನ್, ಸಮಿತಿ ಗೌರವಾಧ್ಯಕ್ಷ ರೆ.ಜಾನ್ ಬ್ಯಾಪ್ಟಿಸ್ಟ್ ಸಲ್ದಾನ ನೇತೃತ್ವದಲ್ಲಿ ನೇತ್ರಾವತಿಗೆ ಬಾಗಿನ
ಅರ್ಪಿಸಿದರು. ಸರ್ವ ಧರ್ಮೀಯ ಗುರುಗಳು ಆಯಾ ಧರ್ಮಕ್ಕನುಗುಣವಾಗಿ ಪ್ರಾರ್ಥನೆ ನಡೆಸಿ,ಸರ್ಕಾರಕ್ಕೆ ದೇವರು ಒಳ್ಳೆ ಬುದ್ಧಿ ನೀಡಲಿ ಎಂದು ಬೇಡಿದರು.