ಮರದ ತುಂಡಿನಲ್ಲಿ ಕೆತ್ತಲಾದ ಮೀನಿನ ಕಲಾಕೃತಿಯನ್ನು ವೀಕ್ಷಿಸುತ್ತಿರುವ ಕಲಾಸಕ್ತರು 
ಜಿಲ್ಲಾ ಸುದ್ದಿ

ಕಟ್ಟಿಗೆಯಲ್ಲಿ ಅರಳಿ ನಿಂತ ಕಲಾವೈಭವ

ಕಲೆ ವಿಶ್ವವ್ಯಾಪಿ. ವಿದ್ಯೆಯುಳ್ಳವನು ಯಾವುದೇ ದೇಶಕ್ಕೆ ಹೋದರೂ ವಿದ್ಯೆ ದೈವತಾರೂಪದಲ್ಲಿ ಆತನನ್ನು ಕಾಪಾಡುತ್ತದೆ...

ಬೆಂಗಳೂರು: ಕಲೆ ವಿಶ್ವವ್ಯಾಪಿ. ವಿದ್ಯೆಯುಳ್ಳವನು ಯಾವುದೇ ದೇಶಕ್ಕೆ ಹೋದರೂ ವಿದ್ಯೆ ದೈವತಾರೂಪದಲ್ಲಿ ಆತನನ್ನು ಕಾಪಾಡುತ್ತದೆ. ಕಲಾಕಾರನಿಗೆ ವ್ಯಾಪ್ತಿಯಿಲ್ಲ. ಆದರೆ ಕಲ್ಪನಾ ವ್ಯಾಪ್ತಿಯಿರುತ್ತದೆ ಎಂದು ಕರ್ನಾಟಕ ಶಿಲ್ಪಕಲಾ ಅಕಾಡೆಮಿ ಅಧ್ಯಕ್ಷ ಮಹಾದೇವಪ್ಪ ಶಂಭುಲಿಂಗಪ್ಪ ಶಿಲ್ಪಿ ಹೇಳಿದರು.

ತೋಟಗಾರಿಕಾ ಇಲಾಖೆ, ಕರ್ನಾಟಕ ಶಿಲ್ಪಕಲಾ ಅಕಾಡೆಮಿ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬುಧವಾರ ಹಮ್ಮಿಕೊಂಡಿದ್ದ ಸಮಕಾಲೀನ ಕಾಷ್ಠ ಶಿಲ್ಪಕಲಾ ಶಿಬಿರ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.

ಯಾವುದೇ ಚಲನಚಿತ್ರವನ್ನು ತಯಾರಿಸುವಾಗಲೂ ಚಿತ್ರ ನಿರ್ದೇಶಕ, ಒಳ್ಳೆಯ ಕಲಾವಿದರು, ಸಹ ಕಲಾವಿದರು ಎಷ್ಟು ಮುಖ್ಯವಾಗುತ್ತಾರೋ ಹಾಗೆಯೇ ಒಳ್ಳೆಯ ಶಿಲ್ಪವನ್ನು ಕೆತ್ತನೆ ಮಾಡುವಾಗ ಕೂಡ ಒಳ್ಳೆಯ ಶಿಲ್ಪಿಗಳು, ಸಹಾಯಕ ಶಿಲ್ಪಿಗಳ ಅಗತ್ಯವಿರುತ್ತದೆ ಎಂದರು. ಶಿಲ್ಪಿಗಳು ಕರ್ಮದ ಮೇಲೆ ನಿಂತವರು ಅವರಿಗೆ ಆಸ್ತಿ ಅಂತಸ್ತುಗಳಿಲ್ಲ,ಅಷ್ಟು ಸ್ಥಿತಿವಂತರೂ ಅಲ್ಲ. ಆದರೂ ಯಾವುದೇ ಗೌರವಗಳಿಗೂ ಅವರು ಕಡಿಮೆಯಿಲ್ಲ.ಕಲಾವಿದರು ಕೆತ್ತನೆ ಮಾಡುವಾಗ ಅವರದ್ದೇ ಕಲ್ಪನೆಯಲ್ಲಿ ಅವರದ್ದೇ ಶೈಲಿಯಲ್ಲಿ ಕೆತ್ತುತ್ತಾರೆ. ಆದರೆ ಆ ಶಿಲ್ಪದ ಬಗ್ಗೆ ವರ್ಣನೆ ಮಾಡುವುದು ಕಷ್ಟದ ಕೆಲಸ ಎಂದರು.

ಇತ್ತೀಚೆಗೆ ಬೇರೆ ಇಲಾಖೆಗಳೊಂದಿಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಂಪರ್ಕ ಸಾಧಿಸುತ್ತಿದೆ. ಬೇರೆ ಇಲಾಖೆಗಳು ಇಂತಹ ಕಲಾವಿದರಿಗೆ ಚಿತ್ರಕಲೆ, ಶಿಲ್ಪಕಲೆ ಯಾವುದೇ
ಇರಲಿ ಬೇಕಾದ ಕಚ್ಚಾವಸ್ತುಗಳನ್ನು ನೀಡಿ ಪ್ರೋತ್ಸಾಹಿಸಿದರೆ ಇಂತಹ ಹಲವಾರು ಶಿಬಿರಗಳನ್ನು ಮಾಡಬಹುದು ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕ ಕೆ.ಎ.
ದಯಾನಂದ ಹೇಳಿದರು.

ಶಿಲ್ಪಿಗಳಿಗೆ ಸನ್ಮಾನ
ಒಟ್ಟು 19 ಶಿಲ್ಪಗಳನ್ನು 15 ದಿನಗಳಲ್ಲಿ 30 ಜನ ಶಿಲ್ಪಿಗಳು ಸೇರಿ ಸುಂದರವಾಗಿ ನಿರ್ಮಿಸಿದ್ದರು. 30 ಅಡಿ ಎತ್ತರದ ನೇಗಿಲು, ಭೂಮಿತಾಯಿಯ ಕೈ, ಮೀನು, ಪಿಸ್ತೂಲ್ ಇನ್ನೂ ಕೆಲವು ಶಿಲ್ಪಗಳು ನೋಡುಗರ ಗಮನ ಸೆಳೆದವು. ಒಟ್ಟು 30 ಜನ ಶಿಲ್ಪಿಗಳನ್ನು  ಸನ್ಮಾನಿಸಲಾಯಿತು, ಹಿರಿಯ ಶಿಲ್ಪಿಗಳಿಗೆ 30 ಹಾಗೂ ಸಹಾಯಕ ಶಿಲ್ಪಿಗಳಿಗೆ 20 ಸಾವಿರ ನಗದು ಬಹುಮಾನ ನೀಡಲಾಯಿತು. ಇನ್ನು ಎರಡು ದಿನಗಳಲ್ಲಿ ಈ ಶಿಲ್ಪಗಳಿಗೆ ಜಾಗ ಮಾಡಿ, ಮರ ನೆಲಕ್ಕೆ ತಾಗದಂತೆ ಕಟ್ಟೆಗಳನ್ನು ಕಟ್ಟಿ ಅವುಗಳನ್ನು ಇರಿಸಲಾಗುತ್ತದೆ. ಜತೆಗೆ ಹೆಚ್ಚು ವರ್ಷಗಳ ಕಾಲ ಬಾಳಿಕೆ ಬರುವ ರೀತಿಯಲ್ಲಿ ಸಂರಕ್ಷಿಸಲು ರಾಸಾಯನಿಕಗಳನ್ನು ಸಿಂಪಡಿಸಲಾಗುತ್ತದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

INDIA ಬ್ಲಾಕ್ ನಲ್ಲಿ ಬಿರುಕು?: ಆಪ್ ಕೈ ಕೊಟ್ಟ ಬೆನ್ನಲ್ಲೇ ಭೋಜನ ಕೂಟಕ್ಕೆ ಸಮಾಜವಾದಿ ಪಕ್ಷ ಗೈರು!

ರಾಹುಲ್, ಪ್ರಿಯಾಂಕಾ ಗಾಂಧಿಯನ್ನು ಎಳೆದೊಯ್ದು ವಶಕ್ಕೆ ಪಡೆದ ಪೊಲೀಸರು; ಬಸ್‌ನ ಟೈರ್ ಪಂಕ್ಚರ್ ಮಾಡಿದ ಕಾರ್ಯಕರ್ತರು

ಭಾರತವನ್ನು ಜಾಗತಿಕ ಶಕ್ತಿಯಾಗಿಸಿದ್ದು ಮೋದಿ, ಅಂತಹವರ ವಿರುದ್ಧವೇ ಸಂಚು: ಸರ್ಬಿಯಾ ಮಾಜಿ ಅಧ್ಯಕ್ಷ, Video ವೈರಲ್

SIR ವಿರುದ್ಧ ಕಾಂಗ್ರೆಸ್ ಪ್ರತಿಭಟನೆ: ಡಿಎಂಕೆ ಯು-ಟರ್ನ್!

ಗ್ರಾಹಕರಿಗೆ ನೆಮ್ಮದಿ: ಕಟಾವಿಗೆ ಬಂದ ಖಾರಿಫ್ ಬೆಳೆ, ಕರ್ನಾಟಕ ಸೇರಿ ಹಲವು ರಾಜ್ಯಗಳಲ್ಲಿ ಈರುಳ್ಳಿ ದರ ಕುಸಿತ ಸಾಧ್ಯತೆ, 2 ಲಕ್ಷ ಕ್ವಿಂಟಾಲ್‌ ಪೂರೈಕೆ!