ಬೆಂಗಳೂರು : ಬಿಜೆಪಿ ಬೆಂಬಲಿತ ಸಂಘಟನೆಗಳಾದ ಭಜರಂಗದಳ, ಶ್ರೀರಾಮ ಸೇನೆ ವಿರುದ್ಧ ಜಾಗೃತರಾಗಿರಿ. ಯುವ ಕಾಂಗ್ರೆಸ್ ಅಂತಹ ಕೋಮುಶಕ್ತಿಗಳ ವಿರುದ್ಧ ಹೋರಾಡಬೇಕು. ನಿಮಗೆ ಸರ್ಕಾರದ ವತಿಯಿಂದ ಸದಾ ನೆರವು ನೀಡುತ್ತೇನೆ' ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆ ನೀಡಿದ್ದಾರೆ.
ರಾಜ್ಯದಲ್ಲಿ ಅಹಿಂದ ಹೋರಾಟ ಶುರು ಮಾಡಿದ್ದು ನಾನು. ಆದರೆ ಈಗ ಬಿಜೆಪಿ ಅದನ್ನು ಹಿಂದೆ ಮಾಡಿ ದೇಶದ ಅಲ್ಪಸಂಖ್ಯಾತರನ್ನು ಕಡೆಗಣನೆ ಮಾಡಿದೆ' ಎಂದು ಸಿದ್ದರಾಮಯ್ಯ ಆರೋಪಿಸಿದರು. ಆರ್‌ಎಸ್‌ಎಸ್ ಸಂಘ ಚಾಲಕ ಮೋಹನ್ ಭಾಗವತ್ ಅವರು ಮೀಸಲಾತಿಯ ವಿರೋಧಿಯಾಗಿದ್ದು, ಮೀಸಲಾತಿ ತೆಗೆದು ಹಾಕುವುದು ಅವರ ಗುರಿಯಾಗಿದೆ.ಇದರ ಪರಿಣಾಮ ಬಿಜೆಪಿಯವರಿಗೆ ಬಿಹಾರ ಚುನಾವಣಾ ಫಲಿತಾಂಶದಲ್ಲಿ ತಿಳಿಯಲಿದೆ' ಎಂದರು.
ಈ ಹಿಂದೆ ಗೋಮಾಂಸದ ಕುರಿತು ಚರ್ಚೆ ನಡೆಸುತ್ತಿದ್ದ ವೇಳೆ 'ಹೌದು..ನಾನು ಗೋಮಾಂಸ ತಿನ್ನುತ್ತೇನೆ ಎನಾಗುತ್ತೆ ಎಂದಿದ್ದೆ.ಆದರೆ ನಾನು ಇದುವರೆಗೆ ಗೋಮಾಂಸ ತಿಂದೇ ಇಲ್ಲ ' ಎಂದು ಸ್ಪಷ್ಟನೆ ನೀಡಿದರು.