ಅಕ್ರಮ ನೆಟ್ ಕರೆ ಜಾಲ(ಸಾಂಕೇತಿಕ ಚಿತ್ರ) 
ಜಿಲ್ಲಾ ಸುದ್ದಿ

ಐಎಸ್ ಡಿ ಕರೆಗಳನ್ನು ಸ್ಥಳಿಯ ಕರೆಯಾಗಿಸುತ್ತಿದ್ದ ಅಕ್ರಮ ನೆಟ್ ಕರೆ ಜಾಲ ಪತ್ತೆ

ಸರ್ಕಾರದ ಬೊಕ್ಕಸಕ್ಕೆ ಕೋಟ್ಯಂತರ ನಷ್ಟ ಉಂಟು ಮಾಡುತ್ತ ಅಧಿಕೃತ ದೂರ ಸಂಪರ್ಕ ಸಂಸ್ಥೆಯಂತೆ ಅಕ್ರಮವಾಗಿ ಕಾರ್ಯನಿರ್ವಹಿಸುತ್ತಿದ್ದ ಜಾಲವನ್ನು ಸಿಸಿಬಿ ಪೊಲೀಸರು ಪತ್ತೆಹಚ್ಚಿದ್ದಾರೆ.

ಬೆಂಗಳೂರು: ದೇಶದ ಭದ್ರತೆಗೆ ಧಕ್ಕೆ ತರುವುದು, ಸಮಾಜ ಘಾತುಕ ಶಕ್ತಿಗಳಿಗೆ ಅನುಕೂಲ
ಮಾಡಿಕೊಟ್ಟು ಸರ್ಕಾರದ ಬೊಕ್ಕಸಕ್ಕೆ ಕೋಟ್ಯಂತರ ನಷ್ಟ ಉಂಟು ಮಾಡುತ್ತ ಅಧಿಕೃತ ದೂರ ಸಂಪರ್ಕ ಸಂಸ್ಥೆಯಂತೆ ಅಕ್ರಮವಾಗಿ ಕಾರ್ಯನಿರ್ವಹಿಸುತ್ತಿದ್ದ ಜಾಲವನ್ನು ಸಿಸಿಬಿ ಪೊಲೀಸರು ಪತ್ತೆಹಚ್ಚಿದ್ದಾರೆ.
ಅಂತಾರಾಷ್ಟ್ರೀಯ ಇಂಟರ್ ನೆಟ್ ಕರೆಗಳನ್ನು ಅಕ್ರಮವಾಗಿ ಸ್ಥಳೀಯ ಕರೆಗಳನ್ನಾಗಿ ಪರಿವರ್ತಿಸಿ ಖಾಸಗಿ ಕಂಪನಿ ಹಾಗೂ ಕೆಲ ಆಯ್ದ ವ್ಯಕ್ತಿಗಳಿಗೆ ಸೇವೆ ಒದಗಿಸುತ್ತಿದ್ದ ಬೆಂಗಳುರಿನ ಎಲೆಕ್ಟ್ರಾನಿಕ್ ಸಿಟಿಯಲ್ಲಿರುವ ವರುಣ್ ಎಂಟರ್ ಪ್ರೈಸಸ್ ಹೆಸರಿನ ಕಚೇರಿಯ ಮೇಲೆ ಸಿಸಿಬಿ ಹಾಗೂ ದೆಹಲಿ ಪೊಲೀಸರು ಏಕಕಾಲಕ್ಕೆ ದಾಳಿ ನಡೆಸಿದ್ದಾರೆ. ಆರೋಪಿಗಳಾದ ಜಯ ಮೋಹನ್ ಅಗರ್ ವಾಲ್ ಹಾಗೂ ಅಮಿತ್ ಕುಮಾರ್ ತಲೆಮರೆಸಿಕೊಂಡಿದ್ದಾರೆ. 
ಕಳೆದ ಮೂರು ತಿಂಗಳಿನಿಂದ ಕಾರ್ಯನಿರ್ವಹಿಸುತ್ತಿದ್ದ ಈ ಜಾಲ, ದೂರಸಂಪರ್ಕ ಇಲಾಖೆಗೆ ಬರೋಬ್ಬರಿ ರೂ.2 .73 ಕೋಟಿ ವಂಚನೆ ಎಸಗಿರುವುದು ಬಹಿರಂಗವಾಗಿದೆ. ಕಡಿಮೆ ವೆಚ್ಚದ ಕರೆಯಷ್ಟೇ ಅಲ್ಲದೇ, ಸಮಾಜಘಾತುಕ ಶಕ್ತಿಗಳು ಈ ಸೇವೆಯನ್ನು ಬಳಸಿಕೊಂಡಿರುವ ಅನುಮಾನವಿದ್ದು ಸಿಸಿಬಿ ಅಧಿಕಾರಿಗಳು ತೀವ್ರ ತನಿಖೆ ನಡೆಸುತ್ತಿದ್ದಾರೆ.
ವ್ಯವಸ್ಥಿತ ಜಾಲ: ವಿದೇಶಗಳಿಂದ ಅಂತರ್ಜಾಲದ ಮೂಲಕ ಭಾರತಕ್ಕೆ ಕರೆ ಮಾಡಿದರೆ ಕರೆ ವಾಯ್ಸ್ ಓವರ್ ಇಂಟರ್ ನೆಟ್ ಪ್ರೋಟೋ ಕಾಲ್(ವಿಒಐಪಿ) ವಿಧಾನದ ಮೂಲಕ ಬರುತ್ತದೆ. ಕರೆ ಮಾಡಿರುವವರು ಹಾಗೂ ಸ್ವೀಕರಿಸಿರುವವರು ಮಾತನಾಡುವಾಗ ಕೆಲ ಸೆಕೆಂಡುಗಳು ತಡವಾಗಿ ಧ್ವನಿ ವಿನಿಮಯವಾಗುತ್ತದೆ. ಅಲ್ಲದೇ ಇದು ಅಂತಾರಾಷ್ಟ್ರೀಯ ಕರೆ ಎನ್ನುವುದು ಗೊತ್ತಾಗುತ್ತದೆ.
ಆದರೆ ಇಂತಹ ವಿಐಒಪಿ ಕರೆಗಳನ್ನು ಸ್ಥಳೀಯ ಕರೆಗಳಾಗಿ ಪರಿವರ್ತನೆ ಮಾಡುವ ವ್ಯವಸ್ಥೆಯನ್ನು ಉತ್ತರಪ್ರದೇಶದ ಗಾಜಿಯಾಬಾದ್ ನ ಜಯಮೋಹನ್ ಅಗರ್ ವಾಲ್ ಹಾಗೂ ದೆಹಲಿ ಮೂಲದ ಅಮಿತ್ ಕುಮಾರ್ ಜೈನ್ ಹೊಂದಿದ್ದರು. ಎಲೆಕ್ಟ್ರಾನಿಕ್ ಸಿಟಿಯಲ್ಲಿ ವರುಣ್ ಎಂಟರ್ ಪ್ರೈಸಸ್ ಹೆಸರಿನ ಕಚೇರಿಯಲ್ಲಿ ಹಾಗೂ ನೋಯ್ಡಾದಲ್ಲಿ ಅಕ್ರಮವಾಗಿ ಕರೆ ಬದಲಿಸುವ ವ್ಯವಸ್ಥೆ ನಡೆಸುತ್ತಿದ್ದರು.
ಜಯಮೋಹನ್ ಅಗರ್ ವಾಲ್ ಉತ್ತರ ಪ್ರದೇಶದ ಗಾಜಿಯಾಬಾದ್ ನಲ್ಲಿ ವರುಣ್ ಎಂಟರ್ ಪ್ರೈಸಸ್ ಹೆಸರಿನಲ್ಲಿ ರಿಲಯನ್ಸ್ ಸಂಸ್ಥೆ ಜತೆ 21 ಎಂ.ಡಿ.ಎನ್. ಪೋರ್ಟ್ ಗಳ 1300 ಪಿ.ಎನ್ ಚಾನೆಲ್(ಲೈನ್) ವ್ಯವಸ್ಥೆ ಇರುವ ಮೆಟ್ರೋ ಇಂಟರ್ ನೆಟ್ ಸ್ವಿಚ್ ನ ಸಂಪರ್ಕವನ್ನು ಸುಮಾರು 3 .9 ಕೋಟಿ ವೆಚ್ಚದಲ್ಲಿ ಕರಾರು ಒಪ್ಪಂದದ ಮೂಲಕ ಪಡೆದುಕೊಂಡಿದ್ದರು. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ನನ್ನ ವಿರುದ್ಧ 100 ಎಫ್‌ಐಆರ್‌ ದಾಖಲಿಸಿ ಹೆದರಲ್ಲ, ಪ್ರತಿಯೊಂದೂ ನನಗೆ ಪದಕ': ರಾಹುಲ್ ಗಾಂಧಿ

CM ಆಗಲು ಸಿದ್ದರಾಮಯ್ಯ ವಿರುದ್ಧ ಡಿಕೆಶಿ ಸ್ಟಿಂಗ್ ಆಪರೇಷನ್; ಈಗ ಸಚಿವರ ವಿರುದ್ಧವೂ ಅದೇ ತಂತ್ರ: ಕುಮಾರಸ್ವಾಮಿ ಗಂಭೀರ ಆರೋಪ

ಅಮೆರಿಕ ಸೇನೆಯ ಮಾಜಿ ಮೇಜರ್‌ಗೆ ಶೂಟ್ ಮಾಡುವ ಮೂಲಕ ಮರಣದಂಡನೆ ಶಿಕ್ಷೆ: 65 ವರ್ಷಗಳಲ್ಲಿ ಇದೇ ಮೊದಲು!

SIR ವೇಳೆ ಡಿಲೀಟ್ ಆಗಿರುವ 13.3 ಕೋಟಿ ಮತದಾರರ ಪತ್ತೆಗೆ ಕಾಂಗ್ರೆಸ್‌ನಿಂದ ‘ಮತ ರಕ್ಷಕ’ರ ನೇಮಕ!

'ಸ್ಪಾದಲ್ಲಿ ಅಕ್ರಮ ಚಟುವಟಿಕೆ' ಎಂದು ಆರೋಪಿಸಿ ದಾಂಧಲೆ; 5 ಲಕ್ಷ ರೂ ಗೆ ಬೇಡಿಕೆ, 1 ಲಕ್ಷ ವಸೂಲಿ! ಶಾಕಿಂಗ್ ಘಟನೆ