ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಜಿಲ್ಲಾ ಸುದ್ದಿ

ಬೀಗ ಹಾಕಿದ್ರೂ ತೆರೆದ ಕಚೇರಿ: ಸ್ಥಾಯಿ ಸಮಿತಿ ಸಿಡಿಮಿಡಿ

ಬಿಬಿಎಂಪಿಗೆ ಬಾಡಿಗೆ ಪಾವತಿಸಲಾಗದೆ, ಮಳಿಗೆಯನ್ನು ಮರಳಿ ಪಡೆಯಲಾಗದೆ, ಮುಚ್ಚಿದ ಮಳಿಗೆ ಮುಂಭಾಗವೇ ತಾತ್ಕಾಲಿಕವಾಗಿ ಮಳಿಗೆ ಹಾಕಿದ್ದ ಎಪಿಎಂಸಿ ಕ್ರಮಕ್ಕೆ ಪಾಲಿಕೆ ಮಾರುಕಟ್ಟೆ ಸ್ಥಾಯಿ ಸಮಿತಿ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು...

(ಸಾಂದರ್ಭಿಕ ಚಿತ್ರ)
Vishwanath S
Updated On : 1 Nov 2015, 1:28 am

ಬೆಂಗಳೂರು: ಬಿಬಿಎಂಪಿಗೆ ಬಾಡಿಗೆ ಪಾವತಿಸಲಾಗದೆ, ಮಳಿಗೆಯನ್ನು ಮರಳಿ ಪಡೆಯಲಾಗದೆ, ಮುಚ್ಚಿದ ಮಳಿಗೆ ಮುಂಭಾಗವೇ ತಾತ್ಕಾಲಿಕವಾಗಿ ಮಳಿಗೆ ಹಾಕಿದ್ದ ಎಪಿಎಂಸಿ ಕ್ರಮಕ್ಕೆ ಪಾಲಿಕೆ ಮಾರುಕಟ್ಟೆ ಸ್ಥಾಯಿ ಸಮಿತಿ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು.

ಮಾರುಕಟ್ಟೆ ಸಮಿತಿಯು ಕೆ.ಆರ್ ಮಾರುಕಟ್ಟೆಯಲ್ಲಿ ಪರಿಶೀಲನೆ ನಡೆಸಿದ ವೇಳೆ ಕೃಷಿ ಉತ್ಪನ್ನದ ಮಾರುಕಟ್ಟೆಯ ಈ ವಿಚಿತ್ರ ಸ್ಥಿತಿ ಅರಿವಿಗೆ ಬಂತು. ಎಪಿಎಂಸಿ ಕಚೇರಿಗೆ ಬೀಗ ಹಾಕಿ ಪಾಲಿಕೆಯ ವಶಕ್ಕೆ ತೆಗೆದುಕೊಳ್ಳಲಾಗಿದೆ. ಆದರೆ ಸಮಿತಿಯ ನೌಕರರು ಆ ಕಚೇರಿಯ ಮುಂದೆ ಟಾರ್ಪಲ್ ಕಟ್ಟಿಕೊಂಡು ಟೇಬಲ್ ಮತ್ತು ಕುರ್ಚಿ ಹಾಕಿಕೊಂಡು ಬಳಕೆದಾರರಿಂದ ಶುಲ್ಕ ಪಡೆಯುತ್ತಿದ್ದದ್ದು ಬೆಳಕಿಗೆ ಬಂದಿತು. ಎಪಿಎಂಸಿ ಪಾಲಿಕೆಗೆ ಡಿ.2015ರವರೆಗೆ ರು.2.10 ಕೋಟಿ ಬಾಕಿ ಪಾವತಿಸಬೇಕಿದ್ದರೂ, ಕಾನೂನು ಬಾಹಿರವಾಗಿ ಕಚೇರಿ ಚಟುವಟಿಕೆ ನಡೆಸುತ್ತಿರುವುದನ್ನು ಕಂಡು, ಸಮಿತಿ ಸದಸ್ಯರನ್ನು ತರಾಟೆಗೆ ತೆಗೆದುಕೊಂಡರು.

ನಂತರ ಜಯನಗರ ವಾಣಿಜ್ಯ ಸಂಕೀರ್ಣ ಪರಿಶೀಲಿಸಲಾಯಿತು. ಸಂಕೀರ್ಣದಲ್ಲಿ ಕೆ.ಪ್ರಭಾಕರ್ ರಾವ್ ಎಂಬುವರು ಮಹಾರಾಜ ಕೋಲ್ಡ್ ಸ್ಟೋರೆಂಜ್ ನಡೆಸುತ್ತಿದ್ದು, ಇದಕ್ಕೆ ಅವರು ಮಾಸಿಕ ರು.11,000 ಮಾತ್ರ ಪಾವತಿಸುತ್ತಿರುವುದು ಸಮಿತಿ ಗಮನಕ್ಕೆ ಬಂದಿತು. ಬಾಡಿಗೆದಾರರು ಬಾಡಿಗೆ ಪರಿಷ್ಕರಣೆ ವಿರುದ್ಧ ನ್ಯಾಯಾಲಯದಲ್ಲಿ ದಾವೆ ಹೂಡಿದ್ದು, ಪ್ರಕರಣ ಇತ್ಯರ್ಥವಾಗದೆ ಬಾಕಿಯಾಗಿದೆ ಎಂದು ಅಧಿಕಾರಿಗಳು ತಿಳಿಸಿದರು. ಪಾಲಿಕೆಯ ಕಾನೂನು ಕೋಶವು ಈ ಬಗ್ಗೆ ಗಮನಹರಿಸಬೇಕು. ಬಾಕಿ ಮೊತ್ತ ಸುಮಾರು ರು.2 ಕೋಟಿಯಾಗಿದ್ದು, ಪ್ರಕರಣವನ್ನು ತ್ವರಿತವಾಗಿ ಇತ್ಯರ್ಥಗೊಳಿಸುವ ಬಗ್ಗೆ ಅಗತ್ಯ ಕ್ರಮಕೈಗೊಳ್ಳಬೇಕು ಎಂದು ಸೂಚಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments