ನಕಲಿ ವಸ್ತು ಮಾರಾಟಗಾರನ ಬಂಧನ
ಪ್ರತಿಷ್ಠಿತ ಎಚ್.ಪಿ ಕಂಪನಿಯ ನಕಲಿ ಟೋನರ್ಗಳ ಮಾರಾಟ ಮಾಡುತ್ತಿದ್ದ ಗುಜರಾತ್ ಮೂಲದ ಜೈಮಲ್ ಕುಂಬಾ...
ಬೆಂಗಳೂರು: ಪ್ರತಿಷ್ಠಿತ ಎಚ್.ಪಿ ಕಂಪನಿಯ ನಕಲಿ ಟೋನರ್ಗಳ ಮಾರಾಟ ಮಾಡುತ್ತಿದ್ದ ಗುಜರಾತ್ ಮೂಲದ ಜೈಮಲ್ ಕುಂಬಾ(30) ಎಂಬಾತನನ್ನು ಸಿಸಿಬಿ ಪೊಲೀಸರು
ಬಂಧಿಸಿದ್ದಾರೆ. ಆರೋಪಿಯಿಂದ ರು.25 ಲಕ್ಷ ಮೌಲ್ಯದ ನಕಲಿ ಟೋನರ್ಗಳನ್ನು ವಶಪಡಿಸಿಕೊಳ್ಳಲಾಗಿದೆ.
ವಿಲ್ಸನ್ ಗಾರ್ಡನ್ನ ಸೆಲ್ವರಾಜ್ ಎಂಬುವರ ಮನೆಯನ್ನು ಬಾಡಿಗೆಗೆ ಪಡೆದಿದ್ದ ಜೈಮಲ್ ಮತ್ತು ನಾರಾಯಣ ಪಟೇಲ್ ಅದನ್ನು ಗೋಡನ್ ಮಾಡಿಕೊಂಡಿದ್ದರು. ಮುಂಬೈನಿಂದ ಟೋನರ್ಗಳನ್ನು ತರಿಸಿಕೊಳ್ಳುತ್ತಿದ್ದರು. ಅವುಗಳಿಗೆ ಪ್ರತಿಷ್ಠಿತ ಕಂಪನಿಗಳ ಸ್ಟಿಕ್ಕರ್ಗಳನ್ನು ಅಂಟಿಸಿ ಅವು ಅಸಲಿ ಎಂಬಂತೆ ಮಾರಾಟ ಮಾಡುತ್ತಿದ್ದರು.
ಈ ಬಗ್ಗೆ ಎಚ್ಪಿ ಹಾಗೂ ಕೆನಾನ್ ಕಂಪನಿ ಸಿಬ್ಬಂದಿ ಸಿಸಿಬಿ ಪೊಲೀಸರಿಗೆ ಮಾಹಿತಿ ನೀಡಿದ್ದರು. ಆರೋಪಿಗಳು ಒಂದುವರೆ ತಿಂಗಳಿಂದ ಅಕ್ರಮದಲ್ಲಿ ತೊಡಗಿದ್ದರು. ಮತ್ತೊಬ್ಬ ಆರೋಪಿ ತಲೆಮರೆಸಿಕೊಂಡಿದ್ದಾನೆ. ವಿಲ್ಸನ್ ಗಾರ್ಡನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.