ಕರ್ನಾಟಕ ಹೈ ಕೋರ್ಟ್ (ಸಂಗ್ರಹ ಚಿತ್ರ) 
ಜಿಲ್ಲಾ ಸುದ್ದಿ

ಮೇಯರ್ ಚುನಾವಣೆಗೆ ತಡೆ ಕೋರಿ ರಿಟ್ ಅರ್ಜಿ

ಬಿಬಿಎಂಪಿ ಮೇಯರ್, ಉಪಮೇಯರ್ ಚುನಾವಣೆಯಲ್ಲಿ ಶಾಸಕರು ಮತ್ತು ಸಂಸದರು ಮತದಾನಕ್ಕೆ ಅವಕಾಶ ನೀಡಿರುವ ಕೆಎಂಸಿ ಕಾಯ್ದೆ 1976, ಸೆಕ್ಷನ್ 7ನ್ನು ಅಸಂವಿಧಾನಿಕ ಎಂದು ಘೋಷಿಸುವಂತೆ ಕೋರಿ ಹೈಕೋರ್ಟ್‍ನಲ್ಲಿ ಅರ್ಜಿ ದಾಖಲಾಗಿದೆ...

ಬೆಂಗಳೂರು: ಬಿಬಿಎಂಪಿ ಮೇಯರ್, ಉಪಮೇಯರ್ ಚುನಾವಣೆಯಲ್ಲಿ ಶಾಸಕರು ಮತ್ತು ಸಂಸದರು ಮತದಾನಕ್ಕೆ ಅವಕಾಶ ನೀಡಿರುವ ಕೆಎಂಸಿ ಕಾಯ್ದೆ 1976, ಸೆಕ್ಷನ್ 7ನ್ನು ಅಸಂವಿಧಾನಿಕ ಎಂದು ಘೋಷಿಸುವಂತೆ ಕೋರಿ ಹೈಕೋರ್ಟ್‍ನಲ್ಲಿ ಅರ್ಜಿ ದಾಖಲಾಗಿದೆ.

ಬಿಬಿಎಂಪಿ ಚುನಾವಣೆ ಸ್ಥಳೀಯ ಚುನಾವಣೆ ವ್ಯಾಪ್ತಿಗೆ ಒಳಪಡಲಿದ್ದು, ಮೇಯರ್ ಹಾಗೂ ಉಪ ಮೇಯರ್ ಆಯ್ಕೆಯಲ್ಲಿ ಪಾಲಿಕೆ ಚುನಾವಣೆಯಲ್ಲಿ ಜಯ ಸಾಧಿಸಿದ ಅಭ್ಯರ್ಥಿಗಳು ಮಾತ್ರ ಮತ ಚಲಾಯಿಸುವಂತೆ ನಿರ್ದೇಶಿಸಬೇಕು ಹಾಗೂ ಅರ್ಜಿ ಇತ್ಯರ್ಥ ಆಗುವವರೆಗೂ ಇದಕ್ಕೆ ಪ್ರಾದೇಶಿಕ ಆಯುಕ್ತರು ತಡೆ ಹಿಡಿಯುವಂತೆ ನಿರ್ದೇಶಿಸ ಬೇಕೆಂದು ಕೋರಿ ಪಾಲಿಕೆಗೆ ಬಿಜೆಪಿ ಸದಸ್ಯರಾಗಿ ಆಯ್ಕೆಯಾಗಿರುವ ಪ್ರಮೀಳಾ ಸೇರಿ ಐವರು ತಕರಾರು ಅರ್ಜಿ ದಾಖಲಿಸಿದ್ದರು. ನ್ಯಾ. ರಾಘವೇಂದ್ರ ಸಿಂಗ್ ಚೌವ್ಹಾಣ್ ಅವರಿದ್ದ ಏಕಸದಸ್ಯ ಪೀಠ, ಆಕ್ಷೇಪಣೆ ಸಲ್ಲಿಸುವಂತೆ ಸರ್ಕಾರಕ್ಕೆ ನಿರ್ದೇಶಿಸಿ ವಿಚಾರಣೆಯನ್ನು ಸೆ.8ಕ್ಕೆ ಮುಂದೂಡಿದೆ.

ಮೇಯರ್ ಆಯ್ಕೆಗೆ ಏಕೆ ಹಕ್ಕು?:

ವಿಚಾರಣೆ ವೇಳೆ ಅರ್ಜಿದಾರರ ಪರ ಹಿರಿಯ ವಕೀಲ ಅಶೋಕ್ ಹಾರನಹಳ್ಳಿ ವಾದ ಮಂಡಿಸಿ, ಜಿಲ್ಲಾ ಪಂಚಾಯ್ತಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಶಾಸಕರು ಮತ್ತು ಸಂಸದರು ಮತ
ಚಲಾಯಿಸುವುದಿಲ್ಲ. ಆದರೆ, ಬಿಬಿಎಂಪಿ ಮೇಯರ್ ಮತ್ತು ಉಪ ಮೇಯರ್ ಆಯ್ಕೆಯಲ್ಲಿ ಕೆಎಂಸಿ ಕಾಯ್ದೆ ಶಾಸಕರು ಮತ್ತು ಸಂಸದರಿಗೆ ಮತ ಚಲಾಯಿಸುವ ಅಧಿಕಾರಿ ನೀಡಿದೆ.

ವರನ ಆಯ್ಕೆ ಅಧಿಕಾರ ಅಪ್ಪನಿಗಿಲ್ಲ ಮೇಯರ್ ಆಯ್ಕೆಯಲ್ಲಿ ಶಾಸಕರು ಮತ್ತು ಸಂಸದರು ಭಾಗವಹಿಸಬಾರದು ಎಂಬ ಅರ್ಜಿದಾರರ ವಾದ ಗಮನಿಸಿದರೆ, ಮದುವೆ ಸಮಾರಂಭದಲ್ಲಿ ಮಂಟಪ ಕಾಯ್ದಿರಿಸುವುದು, ಪುರೋಹಿತರಿಗೆ ತಿಳಿಸಲು ಮಾತ್ರ ತಂದೆ ಬೇಕು ಆದರೆ, ವರನ ಆಯ್ಕೆ ಅಧಿಕಾರ ಮಾತ್ರ ತಂದೆಗಿಲ್ಲ ಎಂಬಂತಾಗಿದೆ ಎಂದು ನ್ಯಾಯಮೂರ್ತಿಗಳು ವಿಚಾರಣೆ ವೇಳೆ ಹಾಸ್ಯ ಚಟಾಕಿ ಹಾರಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರಾಹುಲ್, ಪ್ರಿಯಾಂಕಾ ಗಾಂಧಿಯನ್ನು ಎಳೆದೊಯ್ದು ವಶಕ್ಕೆ ಪಡೆದ ಪೊಲೀಸರು; ಬಸ್‌ನ ಟೈರ್ ಪಂಕ್ಚರ್ ಮಾಡಿದ ಕಾರ್ಯಕರ್ತರು

ರಾಜ್ಯದಲ್ಲಿ ಶೇ. 90ರಷ್ಟು ಬೆಳೆ ಹಾನಿ: ಪರಿಸ್ಥಿತಿ ಗಂಭೀರ - DCM ಪರಮೇಶ್ವರ

'ನನ್ನ ವಿರುದ್ಧ 100 ಎಫ್‌ಐಆರ್‌ ದಾಖಲಿಸಿ ಹೆದರಲ್ಲ, ಪ್ರತಿಯೊಂದೂ ನನಗೆ ಪದಕ': ರಾಹುಲ್ ಗಾಂಧಿ

CM ಆಗಲು ಸಿದ್ದರಾಮಯ್ಯ ವಿರುದ್ಧ ಡಿಕೆಶಿ ಸ್ಟಿಂಗ್ ಆಪರೇಷನ್; ಈಗ ಸಚಿವರ ವಿರುದ್ಧವೂ ಅದೇ ತಂತ್ರ: ಕುಮಾರಸ್ವಾಮಿ ಗಂಭೀರ ಆರೋಪ

ಕಾರ್ಮಿಕರ ಆರೋಗ್ಯ ತಪಾಸಣೆ ಹೆಸರಲ್ಲಿ 800 ಕೋಟಿ ರೂ. ಲೂಟಿ; ಸಂತೋಷ್ ಲಾಡ್ ರಾಜೀನಾಮೆಗೆ ಆರಗ ಜ್ಞಾನೇಂದ್ರ ಆಗ್ರಹ