ಬೆಂಗಳೂರು: ರಾಜ್ಯದಲ್ಲಿ ಬುಧವಾರ ರೈತರ ಮರಣ ಮೃದಂಗ ಮಾರ್ದನಿಸಿದೆ. ಒಂದೇ ದಿನ 11 ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಲಿಂಗಸ್ಗೂರು ತಾಲೂಕಿನ ಗೌಡೂರಿನ ಈರೇಶ (30), ರಾಯಚೂರು ತಾಲೂಕಿನ ಮಾಸದೊಡ್ಡಿಯ ಸಣ್ಣ ಭೀಮಣ್ಣ(35), ರಾಣಿಬೆನ್ನೂರು ತಾಲೂಕಿನ ವೆಂಕಟಾಪುರದ ಹನುಮಂತಪ್ಪ ಕೊಬೆಪ್ಪ ಲಮಾಣಿ (20), ವಡೇರಾಯನಹಳ್ಳಿಯ ಚಂದ್ರಶೇಖರ ಅಪ್ಪಣ್ಣ ಪಂಪಣ್ಣನವರ (50), ಚಿತ್ತಾಪುರ ತಾಲೂಕಿನ ಯರಗಲ್‍ನ ದವಲ್‍ಸಾಬ್ ಬಾಷುಮಿಯ್ಯಬನ್ನಟ್ಟಿ (50), ಹರಿಹರ ತಾಲೂಕಿನ ಕಡ್ಲೆಗೊಂದಿಯ ನಾಗಪ್ಪರೆಡ್ಡಿ (56), ಕುಣಿಗಲ್ ತಾಲೂಕಿನ ಕೆಂಚನ ಹಳ್ಳಿಯ ಬಸವಯ್ಯ(45), ಕಡೂರು ತಾಲೂಕಿನ ಕುರುಬಗೆರೆಯ ಗೋವಿಂದಪ್ಪ (62), ಔರಾದ್ ತಾಲೂಕಿನ ವೈಜಿನಾಥ ರಾಚಪ್ಪ ಕೋರೆ (65), ಚನ್ನಗಿರಿ ತಾಲೂಕಿನ ಹಿರೇಗಂಗೂರಿನ ಬಸವರಾಜಪ್ಪ (65), ಮಂಡ್ಯದ ಕಿಕ್ಕೇರಿ ಸಮೀಪದ ಕನ್ನೇಶ್ವರ ನಗರದ ಮಂಜುಶೆಟ್ಟಿ (40) ಮೃತರು.
ಎಲ್ಲರೂ, ಸಾಲಬಾಧೆ, ಬೆಳೆನಷ್ಟ ದಿಂದ ಬೇಸತ್ತಿದ್ದರು.