ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಜಿಲ್ಲಾ ಸುದ್ದಿ

ಹಣಕ್ಕಾಗಿ ಸ್ನೇಹಿತರ ಜಗಳ ಕೊಲೆಯಲ್ಲಿ ಅಂತ್ಯ

ಮಾರಕಾಸ್ತ್ರಗಳಿಂದ ಹಲ್ಲೆ ಟಿವಿ ಕೇಬಲ್ ಸಂಸ್ಥೆಯಲ್ಲಿ ಕೆಲಸ ಮಾಡುವ ನಾಲ್ವರು ಸ್ನೇಹಿತರ ನಡುವಿನ ಜಗಳ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ...

ಸಾಂದರ್ಭಿಕ ಚಿತ್ರ
Shilpa D
Updated On : 4 Sept 2015, 11:49 am

ಬೆಂಗಳೂರು: ಮಾರಕಾಸ್ತ್ರಗಳಿಂದ ಹಲ್ಲೆ ಟಿವಿ ಕೇಬಲ್ ಸಂಸ್ಥೆಯಲ್ಲಿ ಕೆಲಸ ಮಾಡುವ ನಾಲ್ವರು ಸ್ನೇಹಿತರ ನಡುವಿನ ಜಗಳ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಬಾಣಸವಾಡಿಯಲ್ಲಿ ನಡೆದಿದೆ. ಸೆ.1ರಂದು ಸ್ನೇಹಿತರಿಂದಲೇ ಹಲ್ಲೆಗೊಳಗಾಗಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಬಾಣಸವಾಡಿ ನಿವಾಸಿ ದಿಲೀಪ್(31) ಚಿಕಿತ್ಸೆ ಫಲಿಸದೆ ಗುರುವಾರ ಬೆಳಗ್ಗೆ ಮೃತಪಟ್ಟಿದ್ದಾನೆ.

ಈ ಸಂಬಂಧ ರಾಮಸ್ವಾಮಿ ಪಾಳ್ಯ ನಿವಾಸಿ ರವಿ (24), ಜೀವನಹಳ್ಳಿ ನಿವಾಸಿ ಪ್ರತಾಪ್ (25), ಫ್ರೇಜರ್  ನ್ ನಿವಾಸಿ ಸಂತೋಷ್ (23) ನನ್ನು ಪೆÇಲೀಸರು ಬಂಧಿಸಿದ್ದಾರೆ. ಹಾಡಹಗಲೇ ಇರಿದು ದರೋಡೆ: ಹಾಡಹಗಲೇ ಗ್ಯಾಸ್ ಏಜೆನ್ಸಿ ಉದ್ಯೋಗಿಗೆ ಚಾಕುವಿನಿಂದ ಇರಿದ ದುಷ್ಕರ್ಮಿಗಳು ರೂ. 12 ಸಾವಿರ ನಗದು ದರೋಡೆ ಮಾಡಿರುವ ಘಟನೆ ದೊಡ್ಡಬೊಮ್ಮಸಂದ್ರದಲ್ಲಿ ಗುರುವಾರ ನಡೆದಿದೆ. ಸಿಂಗಾಪುರ ಲೇಔಟ್ ನಿವಾಸ ರಂಗನಾಥ (37) ಇರಿತಕ್ಕೊಳಗಾ ದವರು. ಗ್ಯಾಸ್ ಏಜೆನ್ಸಿಯಲ್ಲಿ ಕೆಲಸ ಮಾಡುತ್ತಿದ್ದ ರಂಗನಾಥ ವಿಲೇವಾರಿ ಮಾಡಲು ಸಿಲಿಂಡರ್‍ಗಳನ್ನು ಒಂದೆಡೆ ಇರಿಸಿದ್ದರು. ಮಧ್ಯಾಹ್ನ 1 ಗಂಟೆ ಸುಮಾರಿಗೆ ಬೈಕ್‍ನಲ್ಲಿ ಆಗಮಿಸಿದ ನಾಲ್ವರು ದುಷ್ಕರ್ಮಿಗಳು ಚಾಕುವಿನಿಂದ ಕಾಲು, ಕೈಗೆ ಇರಿದು ರೂ. 12 ಸಾವಿರ ಕಿತ್ತುಕೊಂಡು ಪರಾರಿಯಾಗಿದ್ದಾರೆ. ಸಮೀಪದಲ್ಲೇ ಜನ ಇದ್ದರೂ ದುಷ್ಕರ್ಮಿಗಳ ಬಳಿ ಚಾಕು ಇದ್ದ ಕಾರಣ ಅವರೊಂದಿಗೆ ಸೆಣೆಸಾಡುವ ಪ್ರಯತ್ನ ಮಾಡಿಲ್ಲ ಎಂದು ಪೊಲೀಸರು ಹೇಳಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement