ಬೆಂಗಳೂರು: ಏಳು ವರ್ಷದ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ 65 ವರ್ಷದ ವೃದ್ಧನ ಬಂಧಿಸಿರುವ ಬಾಣಸವಾಡಿ ಪೊಲೀಸರು ಆತನನ್ನು ನ್ಯಾಯಾಂಗ ಬಂಧನಕ್ಕೆ
ಕಳುಹಿಸಿದ್ದಾರೆ.
ಮನೆ ಹತ್ತಿರದ ಶಾಲೆಯಲ್ಲಿ 2ನೇ ತರಗತಿ ಓದುತ್ತಿರುವ ಬಾಲಕ, ಆ.25ರಂದು ಮನೆ ಮುಂದೆ ಆಟವಾಡುತ್ತಿದ್ದಾಗ ಚಾಕೊಲೇಟ್ ನ ಆಮಿಷ ಒಡ್ಡಿ ಮಹಡಿಗೆ ಕರೆದೊಯ್ದ ವೃದ್ಧ, ಲೈಂಗಿಕ ದೌರ್ಜನ್ಯ ಎಸಗಿದ್ದ. ವಿಷಯ ಯಾರಿಗೂ ಹೇಳದಂತೆ ಬೆದರಿಕೆ ಹಾಕಿದ್ದ. ಅದೇ ದಿನ ಸಂಜೆ ಬಾಲಕ ಬಹಿರ್ದೆಸೆಗೆ ಹೋದಾಗ ತೀವ್ರ ರಕ್ತ ಸ್ರಾವ ಉಂಟಾಗಿದೆ.
ತಾಯಿಯ ಬಳಿ ಬಾಲಕ ನೋವನ್ನು ಹೇಳಿಕೊಂಡಿದ್ದ. ಆದರೆ, ವೃದ್ಧನ ಕುಕೃತ್ಯದ ಬಗ್ಗೆ ಬಾಯ್ಬಿಟ್ಟಿರಲಿಲ್ಲ. ಕೊನೆಗೂ ಮಗನ ಮನವೊಲಿಸಿದ ತಾಯಿ ವಿಷಯವನ್ನು ತಿಳಿದು ಮಾಲೀಕನ ಮನೆಗೆ ತೆರಳಿ ಗಲಾಟೆ ಮಾಡಿದ್ದರು. ಬಳಿಕ ಠಾಣೆಗೆ ತೆರಳಿ ಕೊಟ್ಟಿದ್ದರು.
ಪೊಕ್ಸೊ ಅಡಿ ಬಂಧನ:
ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆ ಕಾಯ್ಕೆ (ಪೊಕ್ಸೊ) ಹಾಗೂ ಅಸಹಜ ಲೈಂಗಿಕ ಕ್ರಿಯೆ (ಐಪಿಸಿ 377) ಆರೋಪದಡಿ ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು.
ಅಳುಕಿದ್ದ ಬಾಲಕ ಮಗ ತೀವ್ರ ಅಸ್ವಸ್ಥಗೊಂಡ. ಮೈ ಸುಡುತ್ತಿತ್ತು. ಏನೋ ತೊಂದರೆಯಾಗಿದೆ ಎಂದು ಗೊತ್ತಾಯಿತು. ಎಷ್ಟೇ ಕೇಳಿದರೂ ಮಗ ಏನೂ ಹೇಳಲಿಲ್ಲ. ಸಂಜೆ ಆತ ಬಹಿರ್ದೆಸೆಗೆ ಹೋದಾಗ ರಕ್ತಸ್ರಾವವಾಗಿತ್ತು. ಕೂರಿಸಿಕೊಂಡು ಸಮಾಧಾನದಿಂದ ಕೇಳಿದಾಗ ತನ್ನ ಮೇಲೆ ಲೈಂಗಿಕ ದೌರ್ಜನ ಎಸಗಿರುವ ವಿಷಯವನ್ನು ತಾಯಿಗೆ ಹೇಳಿದ ಎಂದು ಪೊಲೀಸರು ತಿಳಿದ್ದಾರೆ.