ಭಾನುವಾರ ಮೈಸೂರಿನಲ್ಲಿ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಚಾಲನೆ ನೀಡಿದ ಮುಖ್ಯಮಂತ್ರಿ ಸಿದ್ಧರಾಮಯ್ಯ 
ಜಿಲ್ಲಾ ಸುದ್ದಿ

ಹೋರಾಟ ಕೈಬಿಡಿ, ಸಿಎಂ ಮನವಿ

`ಕಳಸಾ-ಬಂಡೂರಿ ವಿಚಾರದಲ್ಲಿ ರೈತರಿಗೆ ಅನುಕೂಲ ಮಾಡಿಕೊಡಲು ಸರ್ಕಾರ ಸರ್ವರೀತಿಯಲ್ಲೂ ಪ್ರಯತ್ನಿಸುತ್ತಿದೆ. ಆದ್ದರಿಂದ ಉತ್ತರ ಕರ್ನಾಟಕದ...

ಮೈಸೂರು:`ಕಳಸಾ-ಬಂಡೂರಿ ವಿಚಾರದಲ್ಲಿ ರೈತರಿಗೆ ಅನುಕೂಲ ಮಾಡಿಕೊಡಲು ಸರ್ಕಾರ ಸರ್ವರೀತಿಯಲ್ಲೂ ಪ್ರಯತ್ನಿಸುತ್ತಿದೆ. ಆದ್ದರಿಂದ ಉತ್ತರ ಕರ್ನಾಟಕದ ಜನ ಹೋರಾಟ ಕೈಬಿಡಬೇಕು,' ಎಂದು ಮನವಿ ಮುಖ್ಯಮಂತ್ರಿ ಸಿದ್ದರಾಮಯ್ಯ ಶನಿವಾರ ಮನವಿ ಮಾಡಿದ್ದಾರೆ.

ಮೈಸೂರಿನಲ್ಲಿ ಮಾತನಾಡಿರುವ ಅವರು, `ಪದೇ ಪದೇ ಬಂದ್‍ಗೆ ಕರೆ ನೀಡುವಂಥ ಸ್ಥಿತಿ ರಾಜ್ಯದಲ್ಲಿಲ್ಲ. ಕೆಲ ನಾಯಕರು ರಾಜಕೀಯ ಮತ್ತು ಸ್ವಪ್ರತಿಷ್ಠೆಗಾಗಿ ಬಂದ್‍ಗೆ ಕರೆ ನೀಡುತ್ತಿದ್ದಾರೆ. ಇದರಿಂದ ಜನ ಸಾಮಾನ್ಯರಿಗೆ ತೊಂದರೆಯಾಗುತ್ತಿದೆ,' ಎಂದು ಅಭಿಪ್ರಾಯಪಟ್ಟಿದ್ದಾರೆ.

`ಸಿದ್ದರಾಮಯ್ಯ ಅವರು ಮೈಸೂರಿಗೆ ಮಾತ್ರ ಸಿಎಂ. ಹೀಗಾಗಿ ರಾಜ್ಯದ ಅಭಿವೃದ್ಧಿ ಕುಂಠಿತವಾಗಿದೆ' ಎಂಬ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಟೀಕೆಗೆ  ಪ್ರತಿಕ್ರಿಯಿಸಿರುವ ಸಿದ್ದರಾಮಯ್ಯ, `ರಾಜ್ಯ ಹಿಂದುಳಿಯಲು ಕಾಂಗ್ರೆಸ್ ಸರ್ಕಾರ ಕಾರಣವಲ್ಲ. ಬಿಜೆಪಿ ಸರ್ಕಾರದಿಂದಾಗಿ ರಾಜ್ಯ 10 ವರ್ಷಗಳಷ್ಟು ಹಿಂದಕ್ಕೆ ಹೋಗಿದೆ' ಎಂದಿದ್ದಾರೆ.

ಮೊದಲ ಗುರುವನ್ನು ನೆನೆದ ಸಿದ್ದು : `ನಮ್ಮ ರಾಜಪ್ಪ ಮೆಷ್ಟ್ರು ಅವತ್ತು ನನ್ನನ್ನು ನೇರವಾಗಿ ಐದನೇ ತರಗತಿಗೆ ಹಾಕದೇ ಇದ್ದಿದ್ದರೆ ನಾನು ಓದುತ್ತಿರಲೂ ಇಲ್ಲ, ಈ ಮಟ್ಟಕ್ಕೆ ಬೆಳೆಯುತ್ತಲೂ ಇರಲಿಲ್ಲ. ನಾನು ಇವತ್ತು ಏನಾಗಿದ್ದೀನಿ ಅದಕ್ಕೆಲ್ಲಾ ನಮ್ಮ ರಾಜಪ್ಪ ಮೇಷ್ಟ್ರು ಕಾರಣ ಎಂದು ಕೃತಜ್ಞತೆ ಸಲ್ಲಿಸಿದರು.

ಆತ್ಮಹತ್ಯೆ ಬೆದರಿಕೆ: ಅವರ ಹೆಸರು ಚನ್ನರಾಜನಾಯಕ. ಸಿಎಂ ಸಿದ್ದರಾಮಯ್ಯ ಅವರಿಗೆ ಗುರುತಿನ ವ್ಯಕ್ತಿ. ಮಾರ್ಬಳ್ಳಿ ಗ್ರಾಮದ ಅಭಿವೃದ್ಧಿಗಾಗಿ ಸಿಎಂ ಅವರಿಂದ  50 ಲಕ್ಷ ಮಂಜೂರು
ಮಾಡಿಸಿದ್ದರು. ಆದರೆ, ಜಿ.ಪಂ.ಮಾಜಿ ಅಧ್ಯಕ್ಷರೊಬ್ಬರು ಇದಕ್ಕೆ ತೊಡರುಗಾಲು  ಹಾಕಿದ್ದಾರೆಂದು ನಾಯಕ ಅವರು ಸಿಎಂ ಬಳಿ ಸಮಸ್ಯೆ ನಿವೇದಿಸಿಕೊಳ್ಳುತ್ತಿದ್ದರು.`ಸಮಸ್ಯೆ ನಿವಾರಿಸದೇ ಇದ್ದರೆ ನಾನು ವಿಷ ಕುಡಿದು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಜೋರಾಗಿ ಕೂಗಾಡುತ್ತಿದ್ದರು. ಸಿಎಂ, ಏಯ್ ನಾಯಕ ನಿನಗೆ  ಅನುಕೂಲ ಮಾಡಿಕೊಡ್ತೀನಿ ಹೋಗಯ್ಯ ಎಂದು ಹೇಳಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರಾಹುಲ್, ಪ್ರಿಯಾಂಕಾ ಗಾಂಧಿಯನ್ನು ಎಳೆದೊಯ್ದು ವಶಕ್ಕೆ ಪಡೆದ ಪೊಲೀಸರು; ಬಸ್‌ನ ಟೈರ್ ಪಂಕ್ಚರ್ ಮಾಡಿದ ಕಾರ್ಯಕರ್ತರು

KPSC ನೇಮಕಾತಿ ಹಗರಣ: ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್, ಸದಸ್ಯೆ ಗೀತಾ 13 ದಿನ ED ಕಸ್ಟಡಿಗೆ

ರಾಜ್ಯದಲ್ಲಿ ಶೇ. 90ರಷ್ಟು ಬೆಳೆ ಹಾನಿ: ಪರಿಸ್ಥಿತಿ ಗಂಭೀರ - DCM ಪರಮೇಶ್ವರ

'ಸತ್ತವರಿಂದಲೂ ವೋಟಿಂಗ್, SIR ಉಪಯೋಗಗಳ ಕುರಿತು ಚೆನ್ನಿತ್ತಲಾರನ್ನು ಕೇಳಿ': ರಾಹುಲ್ ಗಾಂಧಿಗೆ ಸುರೇಶ್ ಗೋಪಿ

'ನನ್ನ ವಿರುದ್ಧ 100 ಎಫ್‌ಐಆರ್‌ ದಾಖಲಿಸಿ ಹೆದರಲ್ಲ, ಪ್ರತಿಯೊಂದೂ ನನಗೆ ಪದಕ': ರಾಹುಲ್ ಗಾಂಧಿ