ಸಂಗ್ರಹ ಚಿತ್ರ 
ಜಿಲ್ಲಾ ಸುದ್ದಿ

ಸಾಲಬಾಧೆಗೆ 5 ರೈತರ ಆತ್ಮಹತ್ಯೆ

ಶಿರಾಳಕೊಪ್ಪ ಸಮೀಪದ ಮಳೂರು ಗ್ರಾಮದ ರೈತ ಬಸವರಾಜಪ್ಪ (30) ವಿಷ ಸೇವಿಸಿ...

ಬೆಂಗಳೂರು: ಸಾಲಬಾಧೆಗೆ ರಾಜ್ಯದ ಹಲವೆಡೆ 5 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಶಿರಾಳಕೊಪ್ಪ ಸಮೀಪದ ಮಳೂರು ಗ್ರಾಮದ ರೈತ ಬಸವರಾಜಪ್ಪ (30) ವಿಷ ಸೇವಿಸಿದ್ದಾರೆ.
ಅವರಿಗೆ ಮೂರು ಎಕರೆ ಜಮೀನಿದ್ದು, ಬ್ಯಾಂಕ್ ಸಹಿತ ಖಾಸಗಿ ಸಾಲ ಮಾಡಿದ್ದರು.

ಹರಿಹರ ತಾಲೂಕಿನ ಕಡರ ನಾಯಕನಹಳ್ಳಿ ಗ್ರಾಮದ ಮಹೇಶ್ವರಯ್ಯ(27) ವಿಷ ಸೇವಿಸಿದ್ದಾರೆ. 4 ಎಕರೆ ಜಮೀನಿನಲ್ಲಿ ಮೆಕ್ಕೆಜೋಳ ಬೆಳೆದಿದ್ದು ಕೈಕೊಟ್ಟಿತ್ತು. ರು.4 ಲಕ್ಷಕ್ಕೂ ಅಧಿಕ ಸಾಲವಿತ್ತು.

ಹೊಸದುರ್ಗ ತಾಲೂಕಿನ ಪೀಲಾಪುರ ಗ್ರಾಮದ ಪರಮೇಶ್ವರಪ್ಪ (58) ನೇಣಿಗೆ ಶರಣಾಗಿದ್ದಾರೆ. 4 ಎಕರೆ ಜಮೀನಿನಲ್ಲಿ ಬೆಳೆದಿದ್ದ ಈರುಳ್ಳಿ ಬೆಳೆ ಒಣಗಿತ್ತು. ರು.1.20 ಲಕ್ಷ ಸಾಲವಿತ್ತು.

ಟಿ. ನರಸೀಪುರ ತಾಲೂಕಿನ ನುಗ್ಗೇನಹಳ್ಳಿ ಗ್ರಾಮದ ರೈತ ಎನ್.ಸಿ. ಮಂಜು ಉರುಫ್ ಮಂಚೇಗೌಡ (37) ನೇಣಿಗೆ ಕೊರಳೊಡ್ಡಿದ್ದಾರೆ. 2 ಎಕರೆ ಜಮೀನಿನಲ್ಲಿ ಬೆಳೆದ ರೇಷ್ಮೆ ಕೈಕೊಟ್ಟಿತ್ತು. ರು.2 ಲಕ್ಷ ಸಾಲವಿತ್ತು.

ಶಿರಹಟ್ಟಿ ತಾಲೂಕಿನ ತಂಗೋಡ ಗ್ರಾಮದ ರೈತ ಫಕ್ಕೀರೇಶ ಬಸಪ್ಪ ತಳವಾರ (45) ನೇಣು ಹಾಕಿಕೊಂಡಿದ್ದಾರೆ. 6 ಎಕರೆ ಜಮೀನಿದ್ದು, ಮೆಕ್ಕೆಜೋಳ ನಾಶವಾಗಿತ್ತು. ರು.6 ಲಕ್ಷ ಸಾಲ ಮಾಡಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಸಿಇಸಿ ವಿರುದ್ಧದ ವಿಪಕ್ಷಗಳ ಪ್ರತಿಭಟನೆ: ವಶಕ್ಕೆ ಪಡೆದ ಬೆನ್ನಲ್ಲೇ ರಾಹುಲ್, ಪ್ರಿಯಾಂಕಾ ಗಾಂಧಿ ಬಿಡುಗಡೆ

ಅಧಿಕಾರಿಯಂತೆ ನಟಿಸಿ ಆಪ್ ನಾಯಕನಿಗೆ ಧೋಕಾ; ಮದುವೆಯಾಗಿ ಆಭರಣಗಳೊಂದಿಗೆ ಮಹಿಳೆ ಪರಾರಿ!

ಆಪರೇಷನ್ ಸಿಂಧೂರ್, ರಕ್ಷಕ್‌ನಲ್ಲಿ ಪ್ರಮುಖ ಪಾತ್ರವಹಿಸಿದ್ದ ಅಶುತೋಷ್ ದೀಕ್ಷಿತ್ ವಾಯುಪಡೆಯ ನೂತನ ಮುಖ್ಯಸ್ಥ!

ಮಚ್ಛಾರ್ ಆರೋಗ್ಯಯಲ್ಲಿ 'ಸ್ಥಿರ ಸುಧಾರಣೆ': ಭಾರತೀಯ ರಾಯಭಾರ ಕಚೇರಿ

KPSC ನೇಮಕಾತಿ ಹಗರಣ: EDಯಿಂದ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್‌, ಸದಸ್ಯೆ ಗೀತಾ ಬಂಧನ!