ಹುಬ್ಬಳ್ಳಿ: ಪಾಠ ಹೇಳೋ ಪ್ರಾಂಶುಪಾಲನೊಬ್ಬ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿರುವ ಆರೋಪಕ್ಕೆ ಸಿಲುಕಿ ಯರ್ರಾಬಿರ್ರಿ ಧರ್ಮದೇಟು ತಿಂದಿರುವ ಘಟನೆ ಹುಬ್ಬಳ್ಳಿಯ ವಿದ್ಯಾನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಖಾಸಗಿ ಕಾಲೇಜು ಪ್ರಾಂಶುಪಾಲ ಆನಂದ್ ವಡ್ಡಿನ್ ಗೆ ವಿದ್ಯಾರ್ಥಿಗಳು ಮತ್ತು ಪೋಷಕರು ಹಿಗ್ಗಾಮಗ್ಗಾ ಥಳಿಸಿದ್ದಾರೆ. ಇಂಡಸ್ಟ್ರಿಯಲ್ ಟೂರ್ ನೆಪದಲ್ಲಿ ಗೋವಾಗೆ ಪ್ರವಾಸಕ್ಕೆ ತೆರಳಿದ್ದ ಸಂದರ್ಭದಲ್ಲಿ ಮದ್ಯ ಸೇವಸಿದ್ದ ಪ್ರಾಂಶುಪಾಲ ಆನಂದ್ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿದ್ದನಂತೆ. ಇದರಿಂದ ಕೆರಳಿದ ಕೆಲ ವಿದ್ಯಾರ್ಥಿಗಳು ಮತ್ತು ಪೋಷಕರು ಕಾಲೇಜಿಗೆ ಮುತ್ತಿಗೆ ಹಾಕಿ ಆನಂದ್ ಥಳಿಸಿದ್ದಾರೆ.
ಅಲ್ಲದೇ, ಕಾಲೇಜಿನ ಆವರಣದಲ್ಲಿದ್ದ ಆನಂದ್ ಕಾರನ್ನು ಜಖಂಗೊಳಿಸಿದ್ದು, ಕಾಲೇಜಿನ ಕಿಟಕಿ ಗಾಜು ಮತ್ತು ಕಾಲೇನಲ್ಲಿರುವ ಸಿಸಿ ಕ್ಯಾಮೆರಾವನ್ನು ಹೊಡೆದು ಹಾಕಿದ್ದಾರೆ. ಸ್ಥಳಕ್ಕೆ ಧಾವಿಸಿದ ವಿದ್ಯಾನಗರ ಪೊಲೀಸರು ಪ್ರಾಂಶುಪಾಲ ಆನಂದ್ ವಡ್ಡಿನ್ ನನ್ನು ವಶಕ್ಕೆ ಪಡೆದಿದ್ದು, ಪ್ರಕರಣ ದಾಖಲಿಸಿದ್ದಾರೆ.