ಫೆಸಿಫಿಕ್ ಏಷ್ಯಾ ಟ್ರಾವೆಲ್ ಅಸೋಸಿಯೇಷನ್(ಪಾಟಾ) ವಾರ್ಷಿಕ ಪ್ರವಾಸಿ ಮೇಳ 
ಜಿಲ್ಲಾ ಸುದ್ದಿ

ಪಾಟಾ ಪ್ರವಾಸಿ ಮೇಳ ಸಮಾಪ್ತಿ 66 ದೇಶಗಳ ಪ್ರತಿನಿಧಿಗಳು ಭಾಗಿ

ರಾಜ್ಯ ಮತ್ತು ದೇಶದ ಪ್ರವಾಸೋದ್ಯಮ ಕ್ಷೇತ್ರದ ದೃಷ್ಟಿಯಿಂದ ಮಹತ್ವಪೂರ್ಣವೆಂದು ಬಿಂಬಿಸಲಾದ ಫೆಸಿಫಿಕ್ ಏಷ್ಯಾ ಟ್ರಾವೆಲ್ ....

ಬೆಂಗಳೂರು: ರಾಜ್ಯ ಮತ್ತು ದೇಶದ ಪ್ರವಾಸೋದ್ಯಮ ಕ್ಷೇತ್ರದ ದೃಷ್ಟಿಯಿಂದ ಮಹತ್ವಪೂರ್ಣವೆಂದು ಬಿಂಬಿಸಲಾದ ಫೆಸಿಫಿಕ್ ಏಷ್ಯಾ ಟ್ರಾವೆಲ್ ಅಸೋಸಿಯೇಷನ್(ಪಾಟಾ) ವಾರ್ಷಿಕ ಪ್ರವಾಸಿ ಮೇಳ ಬೆಂಗಳೂರಿನಲ್ಲಿ ಮೂರು ದಿನಗಳ ಕಾಲ ಯಶಸ್ವಿಯಾಗಿ ಸಂಪನ್ನಗೊಂಡಿತು. ಪ್ರವಾಸೋದ್ಯಮದ ವಿವಿಧ ಮಜಲುಗಳ ಅನಾವರಣ ಒಂದು ಕಡೆಯಾದರೆ, 66 ದೇಶಗಳ ಪ್ರವಾಸಿ ಕ್ಷೇತ್ರದ ಪ್ರತಿನಿಧಿಗಳು ಮೇಳದಲ್ಲಿ ಪಾಲ್ಗೊಂಡಿದ್ದರು.

ರಾಜ್ಯಕ್ಕಾದ ಲಾಭವೇನು?: ದುಬೈನ ಉದ್ಯಮಿ ಬಿ.ಆರ್.ಶೆಟ್ಟಿ ಸಮೂಹದ ಕಂಪನಿ ಜೋಗ ಜಲಪಾತದ ಸುತ್ತಮುತ್ತಲು ಹೋಟೆಲ್, ಆಸ್ಪತ್ರೆ, ವಿದ್ಯುತ್ ಯೋಜನೆ ಸೇರಿ ವಿವಿಧ ಪ್ರವಾಸೋದ್ಯಮ ಬೆಳವಣಿಗೆಗೆ ಪೂರಕವಾದ ಯೋಜನೆ ಕೈಗೆತ್ತಿಕೊಳ್ಳಲು ಒಂದು ಸಾವಿರ ಕೋಟಿ ಡಗಿಸಲು ಮುಂದೆ ಬಂದಿದ್ದು ಮುಖ ಸಂಗತಿ. ಇದರ ಹೊರತಾಗಿ ಕೊಡಗು, ಚಿಕ್ಕಮಗಳೂರು, ಹಾಸನ ಸೇರಿದಂತೆ ವಿವಿಧ ಕಡೆಗಳಲ್ಲಿ ರೆಸಾರ್ಟ್, ಹೋಟೆಲ್ ಉದ್ಯಮ ಆರಂಭಕ್ಕೆ ಉದ್ಯಮಿಗಳು ಹಣ ಹೂಡುವುದಾಗಿ ಮುಂದೆ ಬಂದಿದ್ದಾರೆ. ಇದು ಸಹ ಮೇಳದಲ್ಲಿ ಖಚಿತವಾಗಿದೆ. ರಾಜ್ಯದ ಪ್ರವಾಸಿ ಉದ್ಯಮದಲ್ಲಿ ತೊಡಗಿಕೊಂಡವರಿಗೆ ಅಂತಾರಾಷ್ಟ್ರೀಯ ಪ್ರವಾಸೋದ್ಯಮ ಸಾಗುತ್ತಿರುವ ದಾರಿ, ಅಲ್ಲಿ ಸಿಗುವ ಸೇವೆಗಳು, ಆತಿಥ್ಯದ
ವಿಶೇಷತೆಗಳ ಸಣ್ಣ ಪರಿಚಯವಾಯಿತು. ಕರ್ನಾಟಕದ ಪ್ರವಾಸೋದ್ಯಮ ಕ್ಷೇತ್ರದ ಪ್ರಮುಖ ಸಾಧನಗಳಾದ ಗೋಲ್ಡನ್ ಚಾರಿಯೇಟ್ , ಜಂಗಲ್ ರೆಸಾರ್ಟ್ ಸೇರಿ ಪ್ರವಾಸಿ ತಾಣಗಳ ಮಹತ್ವವನ್ನು ವಿಶ್ವಕ್ಕೆ ಪರಿಚಯಿಸುವ ಅವಕಾಶ ದೊರೆಯಿತು. ರಾಜ್ಯ ಕಲೆ, ಸಂಸ್ಕೃತಿ ಯನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಬಿಂಬಿಸುವ ವೇದಿಕೆ ಇದಾಗಿತ್ತು.

ತಾಂತ್ರಿಕ ಮೇಳ: ಪ್ರವಾಸೋದ್ಯಮ ಕ್ಷೇತ್ರದಲ್ಲಿ ತಂತ್ರಜ್ಞಾನ- ತಾಂತ್ರಿಕತೆ ಕುರಿತ ವಿಶೇಷ ವಿಚಾರ ಸಂಕಿರಣ ಮೇಳದ ವಿಶೇಷವಾಗಿತ್ತು. ಪ್ರವಾಸಿಗರಿಗೆ ಮತ್ತು ಪ್ರವಾಸೋದ್ಯಮದಲ್ಲಿ ತೊಡಗಿಕೊಂಡವರಿಗೆ, ಸರ್ಕಾರಿ ವ್ಯವಸ್ಥೆಗೆ ಅನುಕೂಲವಾಗುವ ನಿಟ್ಟಿನಲ್ಲಿ ಕೈಗೊಳ್ಳಬಹು ದಾದ ಕ್ರಮಗಳ ಬಗ್ಗೆ ತಜ್ಞರು ವಿಚಾರ ವಿನಿಮಯ ಮಾಡಿಕೊಂಡರು. ಮುಂದಿ ನ ಪಾಟಾ ರಾಷ್ಟ್ರೀಯ ಪ್ರವಾಸಿ ಮೇಳ 2016ನೇ ಸೆ. 7ರಿಂದ 9ರವರೆಗೆ ಇಂಡೋ ನೇಷ್ಯಾದಲ್ಲಿ ನಡೆಸುವುದೆಂದು ಪ್ರಕಟಣೆ ಹೊರಬಿದ್ದು ವರ್ಣರಂಜಿತ ತೆರೆಬಿತ್ತು.

ಇನ್ನು ಮುಂದೆ ಇಂಡೋನೇಷ್ಯಾಗೆ ಪ್ರವಾಸ ಹೋಗಿ ಬರಲು ಪಾಸ್ ಪೊರ್ಟ್ ಇದ್ದರೆ ಸಾಕಾಗುತ್ತದೆ. ಪ್ರವಾಸಿಗರು ವೀಸಾ ಪಡೆಯಬೇಕೆಂಬ ನಿಯಮವನ್ನು ಸಡಿಲಗೊಳಿಸಲು ಅಲ್ಲಿನ ಸರ್ಕಾರ ನಿರ್ಧರಿಸಿದೆ. ಅದೇ ರೀತಿ ಭಾರತದಿಂದ ಇಂಡೋನೇಷ್ಯಾಗೆ ನೇರ ವಿಮಾನಯಾನ ಆರಂಭಿಸುವ ಬಗ್ಗೆಯೂ ಭಾರತ ಸರ್ಕಾರದೊಂದಿಗೆ ಮಾತುಕತೆ ನಡೆದಿದೆ ಎಂದು ಇಲ್ಲಿನ ಪ್ರವಾಸೋದ್ಯಮ ಇಲಾಖೆ ಮಂತ್ರಿ ಆರಿರಹ್ಯಾನೆ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಶೀಘ್ರವೇ ದೆಹಲಿ ಸೇರಿದಂತೆ ಮೂರು ಮಹಾನಗರಗಳಿಂದ ಇಂಡೋನೇಷ್ಯಾಗೆ ನೇರ ವಿಮಾನಯಾನ ಸೌಲಭ್ಯ ಕಲ್ಪಿಸುವ ಸಂಬಂಧ ಪ್ರಯತ್ನ ನಡೆದಿದೆ ಎಂದು ಇದೇ ಸಂದರ್ಭದಲ್ಲಿ ತಿಳಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Super Emergency: ತಾರಕಕ್ಕೇರಿದ ದೆಹಲಿ ಪ್ರತಿಭಟನೆ, ಬರೊಬ್ಬರಿ 3 ಸಾವಿರ ಮಂದಿ ವಶಕ್ಕೆ, ವಿಪಕ್ಷಗಳ ಆಕ್ರೋಶ!

ಅಭಿಜೀತ್ ದೀಪ್ಕೆ ಸಂಪರ್ಕಿಸಲು ಸಾಧ್ಯವಾಗುತ್ತಿಲ್ಲ; ಅಜ್ಜಿ ಸಾವಿನ ಸುದ್ದಿ ತಿಳಿಸುವುದು ಹೇಗೆ? ಪೊಲೀಸ್ ಕ್ರಮಕ್ಕೆ ಪೋಷಕರ ಆಕ್ರೋಶ

ದೇಶವಿರೋಧಿ ಶಕ್ತಿಗಳಿಂದ ಅಶಾಂತಿ ಸೃಷ್ಟಿಗೆ ಯತ್ನ; CJP ಪ್ರತಿಭಟನೆಯಿಂದ ದೂರವಿರಿ: ಮುಸ್ಲಿಮರಿಗೆ ಇಮಾಮ್‌ ಮುಖ್ಯಸ್ಥ ಕರೆ

'ಇಂದಿರಾ ಗಾಂಧಿ ಕೂಡ ಹೀಗೆ ಮಾಡಿರಲಿಲ್ಲ': ದೆಹಲಿ ವಿಮಾನ ನಿಲ್ದಾಣದಲ್ಲಿ ವಶಕ್ಕೆ ಪಡೆಯುವ ಮುನ್ನ ಅಭಿಜಿತ್ ದೀಪ್ಕೆ; ವಿಡಿಯೋ ಹಂಚಿಕೊಂಡ CJP

CJP protest: ಮಮತಾ ಬ್ಯಾನರ್ಜಿ, ನೇಹಾ ಬೋರಾ, ಯೋಗೇಂದ್ರ ಯಾದವ್ ವಶಕ್ಕೆ ಪಡೆದ ಪೊಲೀಸರು