ಬೆಂಗಳೂರು: ಬಾಣಸವಾಡಿಯಲ್ಲಿ ಮಾ್ಯನ್‍ಹೋಲ್‍ಗೆ ನೂಕಿ ಮೂವರು ಮಕ್ಕಳನ್ನು ಹತ್ಯೆಗೈದ ಪ್ರಕರಣ ಸಂಬಂಧ ಪತ್ತೆಯಾಗದ ಇನ್ನೊಂದು ಮಗುವಿನ ಶವಕ್ಕಾಗಿ ಮೂರು
ದಿನಗಳಿಂದ ನಡೆಯುತ್ತಿರುವ ಶೋಧ ಗುರುವಾರವೂ ಫಲ ನೀಡಿಲ್ಲ. ಹೀಗಾಗಿ, ಎಕ್ಸ್ ರೇ ನೆರವಿನೊಂದಿಗೆ ಮೋರಿಯ ಪೈಪ್ ಹಾದು ಹೋಗಿರುವ ಜಾಗ ಹಾಗೂ ಕ್ಯಾಮರಾ ನೆರವಿನೊಂದಿಗೆ ಪೈಪ್‍ನ ಒಳಗಿನ ಭಾಗದ ದೃಶ್ಯಗಳ ವೀಕ್ಷಣೆಗೆ ನಿರ್ಧರಿಸಲಾಗಿದೆ ಎಂದು ಬಾಣಸವಾಡಿ ಅಗ್ನಿ ಶಾಮಕ ಠಾಣೆ ಡಿಎಫ್ಒ ಮಂಜುನಾಥ ಹೇಳಿದ್ದಾರೆ.
ಗುರುವಾರ ಬೆಳಗ್ಗೆಯಿಂದ ಸಂಜೆವರೆಗೂ ಎಚ್‍ಬಿಆಲ್ ಲೇಔಟ್ ಕಿರು ಅರಣ್ಯ ಪ್ರದೇಶದಲ್ಲಿರುವ ಮಾ್ಯನ್‍ಹೋಲ್‍ಗಳಲ್ಲಿ ಸಿಬ್ಬಂದಿ ಹುಡುಕಾಟ ನಡೆಸಿದರು. ಮತ್ತೊಂದು ತಂಡ ಎರಡು ಕಿಮೀವರೆಗಿನ ರಾಜ ಕಾಲುವೆ ಹಾಗೂ ಹೆಣ್ಣೂರು ಕೆರೆಯಲ್ಲಿ ಶೋಧ ಕಾರ್ಯ ನಡೆಸಿದರೂ ಯಾವುದೇ ಪ್ರಯೋಜನವಾಗಲಿಲ್ಲ. ಶುಕ್ರವಾರ ಬೆಳಗ್ಗೆಯಿಂದ ಶವದ ಶೋಧ ಮಾಡಲು ಪೊಲೀಸ್ ಇಲಾಖೆ ನೆಲದಲ್ಲಿ ಸುಮಾರು 15 ಅಡಿ ಆಳದವರೆಗೆ ಇರುವ ಮೂಳೆಯನ್ನು ಪತ್ತೆ ಮಾಡಬಲ್ಲ ಎಕ್ಸ್ ರೇ ಯಂತ್ರವನ್ನು ಖಾಸಗಿಯವರಿಂದ ಬಾಡಿಗೆ ತೆಗೆದುಕೊಳ್ಳಲು ನಿರ್ಧರಿಸಿದೆ. ಇದೇ ವೇಳೆ ಆರೋಪಿ, ಫಯುಮ್ ಖಾನ್‍ನನ್ನು ಪೊಲೀಸರು ಮತ್ತೊಮ್ಮೆ ವಿಚಾರಣೆ ನಡೆಸಿದ್ದಾರೆ.
ತಾನು ಮೂವರು ಮಕ್ಕಳನ್ನು ಅದೇ ಜಾಗದಲ್ಲೇ ತಳ್ಳಿದ್ದಾಗಿ ಆತ ಮತ್ತೆ ಹೇಳಿದ್ದಾನೆ. ಹೀಗಾಗಿ, ಅದೇ ಪ್ರದೇಶದ ಸುತ್ತ ಮುತ್ತ ಶವಶೋಧ ನಡೆಸಬೇಕಾದ ಅನಿವಾರ್ಯತೆಗೆ ಪೊಲೀಸರು
ಸಿಲುಕಿದ್ದಾರೆ.