(ಸಾಂದರ್ಭಿಕ ಚಿತ್ರ) 
ಜಿಲ್ಲಾ ಸುದ್ದಿ

ಮಕ್ಕಳೊಂದಿಗೆ ತಾಯಿ ಆತ್ಮಹತ್ಯೆ

ತಾಯಿ, ಮಕ್ಕಳಿಬ್ಬರು ಅನುಮಾನಾಸ್ಪದವಾಗಿ ಮೃತಪಟ್ಟಿರುವ ಘಟನೆ ಪಾದರಾಯನಪುರ ಸಮೀಪದ ಅರಾಫತ್‍ನಗರದಲ್ಲಿ ನಡೆದಿದೆ...

ಬೆಂಗಳೂರು: ತಾಯಿ, ಮಕ್ಕಳಿಬ್ಬರು ಅನುಮಾನಾಸ್ಪದವಾಗಿ ಮೃತಪಟ್ಟಿರುವ ಘಟನೆ ಪಾದರಾಯನಪುರ ಸಮೀಪದ ಅರಾಫತ್‍ನಗರದಲ್ಲಿ ನಡೆದಿದೆ.

ರಿಜ್ವಾನಾ (40), ತನ್ನ ಮಕ್ಕಳಾದ ರಿಯಾಜ್(5) ಹಾಗೂ ಹಾಜಿರಾಗೆ (3) ವಿಷ ಕುಡಿಸಿ ಕೊಲೆ ಮಾಡಿ, ನಂತರ ತಾವೂ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು
ಪೆÇಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ. ತಮಿಳುನಾಡಿನ ವೆಲ್ಲೂರು ಮೂಲದ ರಿಜ್ವಾನಾ, ಆರು ವರ್ಷಗಳ ಹಿಂದೆ ಜಹೀರ್ ಅಹಮದ್ ಎಂಬುವರನ್ನು ಮದುವೆಯಾಗಿದ್ದರು.

ಹಣ ಸಾಕಾಗುತ್ತಿಲ್ಲ ಎಂದು ಕೆಲಸ ಅರಸಿ ಹತ್ತು ತಿಂಗಳ ಹಿಂದೆ ಸೌದಿ ಅರೆಬಿಯಾಕ್ಕೆ ತೆರಳಿದ ಜಹೀರ್, ಅಲ್ಲಿ ಟೈಲರ್ ಕೆಲಸಕ್ಕೆ ಸೇರಿದ್ದರು. ಪತ್ನಿ ಮಕ್ಕಳ ಜೀವನ ನಿರ್ವಹಣೆಗಾಗಿ ಹಣ ಕಳುಹಿಸುತ್ತಿದ್ದರು. ಜಹೀರ್ ಸಹೋದರ ಅನ್ವರ್, ಮನೆಯಲ್ಲಿ ಮಾಡಿದ್ದ ಸಿಹಿ ತಿಂಡಿಯನ್ನು ನೀಡಲು ಬೆಳಿಗ್ಗೆ 11 ಗಂಟೆಗೆ ಅವರು ರಿಜ್ವಾನಾ ಮನೆಗೆ ಹೋದಾಗ ಪ್ರಕರಣ ಬೆಳಕಿಗೆ ಬಂದಿದೆ. ಚಹಾದಲ್ಲಿ ವಿಷ ಬೆರೆಸಿ ಮಕ್ಕಳಿಗೆ ಕುಡಿಸಿ, ನಂತರ ತಾವೂ ಸೇವಿಸಿ ಮೃತಪಟ್ಟಿರುವುದು ಸಾಧ್ಯತೆಗಳಿವೆ ಎಂದಿದ್ದಾರೆ ಪೊಲೀಸರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಕಾಗ್ನಿಜಂಟ್, ಇನ್ಫೋಸಿಸ್, ಟಿಸಿಎಸ್, ವಿಪ್ರೋ ಎಚ್‌ಸಿಎಲ್ ಗೆ ಅಮೆರಿಕ ಶಾಕ್: ಗ್ರೀನ್ ಕಾರ್ಡ್ ಕಾರ್ಯಕ್ರಮದಿಂದ ಅಮಾನತು!

ರಿಯಾದ್ ವಿಮಾನ ನಿಲ್ದಾಣದ ಮೇಲೆ ದಾಳಿ: ರಿಯಾದ್ ಗೆ ತೆರಳಬೇಕಿದ್ದ ಭಾರತೀಯ ವಿಮಾನಗಳು ರದ್ದು

ರಾಜ್‌ಘಟ್‌ನಲ್ಲಿ 'ಇಂಡಿಯಾ' ನಾಯಕರಿಂದ ಧರಣಿ; ಜ್ಞಾನೇಶ್ ಕುಮಾರ್ ರಾಜೀನಾಮೆ ನೀಡುವವರೆಗೂ 'ವೋಟ್ ಚೋರಿ' ಹೋರಾಟ ಮುಂದುವರಿಸಲು ಪ್ರತಿಜ್ಞೆ!

ಅಂಬಾನಿ ಭಾರತದ ನಿಜವಾದ ಬಾಸ್?: ಭಾರತದಲ್ಲಿ ಸ್ಟಾರ್ ಲಿಂಕ್ ಸೇವೆ ಆರಂಭ ವಿಳಂಬಕ್ಕೆ ಎಲಾನ್ ಮಸ್ಕ್ ಹತಾಶೆ!

SIR ಕಾನೂನುಬದ್ಧ: ಪ್ರತಿಪಕ್ಷಗಳ ಪ್ರತಿಭಟನೆ ನಡುವೆ CEC ಜ್ಞಾನೇಶ್ ಬೆಂಬಲಕ್ಕೆ ನಿಂತ 42 ನಿವೃತ್ತ ನ್ಯಾಯಾಧೀಶರು!