ಬೆಂಗಳೂರು: ಸಾಲಬಾಧೆಯಿಂದಾಗಿ ರಾಜ್ಯದಲ್ಲಿ ಶನಿವಾರ ಮೂವರು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಯಲಬುರ್ಗಾ ತಾಲೂಕಿನ ನಿಲೋಗಲ್‍ನ ದ್ಯಾನನಗೌಡ ಮುದೇಗೌಡ ಪೊಲೀಸ್ ಪಾಟೀಲ್ (35), ಗಂಗಾವತಿ ತಾಲೂಕಿನ ಲಿಂಗದಹಳ್ಳಿಯ ಲಿಂಗನಗೌಡ ಬಾಳನಗೌಡ (32)ಆಳಂದ ತಾಲೂಕಿನ ಶಿವಾನಂದ ಕೃಷ್ಣಪ್ಪ ಮದರಿ (32) ಮೃತರು.
ದ್ಯಾನನಗೌಡ ಮುದೇಗೌಡ ಪೊಲೀಸ್ ಪಾಟೀಲ ಅವರು ಬೆಳೆದಿದ್ದ ಹತ್ತಿ ಬೆಳೆ ಕೀಟಬಾಧೆಗೆ ಸಿಲುಕಿತ್ತು. ಲಿಂಗನಗೌಡ ಬಾಳನಗೌಡ ರು.2.50ಲಕ್ಷದಷ್ಟು ಸಾಲ ಹೊಂದಿದ್ದರು. ಶಿವಾನಂದ ಕೃಷ್ಣಪ್ಪ ಮದರಿ ತೋಟದಲ್ಲಿ ವಿದ್ಯುತ್ ತಂತಿ ಹಿಡಿದು ಆತ್ಮಹತ್ಯೆ ಮಾಡಿಕೊಂಡಿದ್ದು, ರು.3ಲಕ್ಷದಷ್ಟು ಸಾಲ ಮಾಡಿಕೊಂಡಿದ್ದರು.