ಬಹುಭಾಷಾ ಚಿತ್ರಕಲಾವಿದ ರಾಮಚಂದ್ರನ್ ಇನ್ನಿಲ್ಲ
ಬಹುಭಾಷಾ ಚಲನಚಿತ್ರಗಳ ಪೋಸ್ಟರ್ ಕಲಾವಿದ ಕೆ.ಎನ್.ರಾಮಚಂದ್ರನ್ (78) ವಯೋಸಹಜ ಅನಾರೋಗ್ಯದಿಂದ ಸೋಮವಾರ ನಿಧನರಾದರು...
ಬೆಂಗಳೂರು: ಬಹುಭಾಷಾ ಚಲನಚಿತ್ರಗಳ ಪೋಸ್ಟರ್ ಕಲಾವಿದ ಕೆ.ಎನ್.ರಾಮಚಂದ್ರನ್ (78) ವಯೋಸಹಜ ಅನಾರೋಗ್ಯದಿಂದ ಸೋಮವಾರ ನಿಧನರಾದರು.ಮೃತರಿಗೆ ಪತ್ನಿ, ಇಬ್ಬರು ಗಂಡುಮಕ್ಕಳು, ಮೂವರು ಹೆಣ್ಣು ಮಕ್ಕಳು ಇದ್ದಾರೆ. ಚೆನ್ನೈ ಮೂಲದ ಅವರು ಕಳೆದ 55 ವರ್ಷಗಳಿಂದ ಬೆಂಗಳರಿನಲ್ಲೇ ನೆಲೆಸಿದ್ದರು. ಇಂಗ್ಲಿಷ್, ಹಿಂದಿ, ಕನ್ನಡ ಸೇರಿದಂತೆ ದಕ್ಷಿಣ ಭಾರತದ ಚಲನಚಿತ್ರ ಪೋಸ್ಟರ್‍ಗಳನ್ನು ತಯಾರಿ ಸುತ್ತಿ ದ್ದ ಕಲಾವಿದರಾಗಿದ್ದು, ಒಂದು ತಲೆಮಾರಿನ ಬಹುಮಖ್ಯ ಪೋಸ್ಟರ್ ಕಲಾವಿದ ಎಂದು ಗುರುತಿಸಿಕೊಂಡಿದ್ದರು. ನಿಧನ ಸುದ್ದಿ ತಿಳಿಯುತ್ತಿದ್ದಂತೆ ನೂರಾರು ಕಲಾವಿದರು, ಚಲನಚಿತ್ರ ರಂಗದ ಪ್ರಮುಖರು ಅವರ ಬಸವೇಶ್ವರ ನಗರ ಶಾರದಾ ಕಾಲೋನಿ ಮನೆಗೆ ತೆರಳಿ ಅಂತಿಮ ದರ್ಶನ ಪಡೆದರು. ಸಂಜೆ ಸುಮನ ಹಳ್ಳಿಯ ಸ್ಮಶಾನದಲ್ಲಿ ಅಂತ್ಯಕ್ರಿಯೆ ನೆರವೇರಿತು. ತಮಿಳುನಾಡಿನ ಪಟ್ಟುಕೋಟೆಯಿಂದ ರಾಮಚಂದ್ರನ್ ಚೆನ್ನೈಗೆ ಬಂದರು. ಚೆನ್ನೈಯಿಂದ ಬೆಂಗಳೂರಿಗೆ ಬಂದು ನೆಲೆಸಿದರು. ದಕ್ಷಿಣ ಭಾರತದ ಎಲ್ಲ ಭಾಷೆಯ ಸಿನೆಮಾಗಳಿಗಲ್ಲ ದೆ ಹಿಂದಿ, ಇಂಗ್ಲಿಷ್‍ಗೂ ಬ್ಯಾನರ್, ಪೋಸ್ಟರ್‍ಗಳನ್ನು ರಚಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ. ನಿರಂತರ 60 ವರ್ಷಗಳ ಚಿತ್ರಕಲಾವಿ ದರಾಗಿ ಕಾರ್ಯನಿರ್ವಹಿಸುತ್ತಿ ದ್ದ ರಾಮಚಂದ್ರನ್ ತಮ್ಮ 77ರ ಹರೆಯ ದಲ್ಲಿ ಅದೇ ಚೆನ್ನೈನಲ್ಲಿ ಜೇಪಿಅಳಗರ್ ನಿರ್ದೇಶನದ `ಪ್ರಮುಗರ್' ತಮಿಳು ಸಿನಮಾದಲ್ಲಿ ಪ್ರಮುಖ ಪಾತ್ರವಾದ `ಪ್ರಭಂಜನ್' ಪಾತ್ರದಲ್ಲಿ ನಟಿಸಲು ಆಹ್ವಾನಿಸಿದ್ದರು. ಅವರು ರಚಿಸಿದ್ದ ಪ್ರಖ್ಯಾತರ ಪ್ರೊಟ್ರೇಟ್ ಗಳಿಗೆ ಲೆಕ್ಕವಿಲ್ಲ. 26ಕ್ಕೂ ಹೆಚ್ಚು ಏಕವ್ಯಕ್ತಿ ಪ್ರದರ್ಶ ನಗಳನ್ನು ನೀಡಿದ್ದಾರೆ. 25ಕ್ಕೂ ಅಧಿಕ ಪ್ರಶಸ್ತಿಗಳಿಗೆ ಪಾತ್ರವಾಗಿದ್ದಾರೆ. 2012 ರಲ್ಲಿ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾಗಿದ್ದರು.