(ಸಾಂದರ್ಭಿಕ ಚಿತ್ರ) 
ಜಿಲ್ಲಾ ಸುದ್ದಿ

ಹತ್ಯೆ ಆರೋಪಿ ಶರಣು

ಹತ್ಯೆಯಾದ ಬನಶಂಕರಿ ಪಾಲಿಕೆ ಸದಸ್ಯ ದಿವಾನ್ ಅಲಿ ಸಹೋದರ ನಯಾಜ್ ಎಂಬ ರೌಡಿಯನ್ನು ಹಾಡಹಗಲೇ ಹತ್ಯೆ ಮಾಡಿದ್ದ ಪ್ರಮುಖ ಆರೋಪಿ ಅಯಾಜ್ಸೋಮವಾರ ಪೊಲೀಸರಿಗೆ ಖುದ್ದು ಶರಣಾಗಿದ್ದಾನೆ. ಆದರೆ, ಮಾಗಡಿ ಠಾಣೆ ಪೊಲೀಸರು ಈ ಬಗ್ಗೆ ಮಾಹಿತಿ ನೀಡಲು ನಿರಾಕರಿಸಿದ್ದಾರೆ...

ಬೆಂಗಳೂರು: ಹತ್ಯೆಯಾದ ಬನಶಂಕರಿ ಪಾಲಿಕೆ ಸದಸ್ಯ ದಿವಾನ್ ಅಲಿ ಸಹೋದರ ನಯಾಜ್ ಎಂಬ ರೌಡಿಯನ್ನು ಹಾಡಹಗಲೇ ಹತ್ಯೆ ಮಾಡಿದ್ದ ಪ್ರಮುಖ ಆರೋಪಿ ಅಯಾಜ್
ಸೋಮವಾರ ಪೊಲೀಸರಿಗೆ ಖುದ್ದು ಶರಣಾಗಿದ್ದಾನೆ. ಆದರೆ, ಮಾಗಡಿ ಠಾಣೆ ಪೊಲೀಸರು ಈ ಬಗ್ಗೆ ಮಾಹಿತಿ ನೀಡಲು ನಿರಾಕರಿಸಿದ್ದಾರೆ.

ಪೊಲೀಸರಿಗೆ ಶರಣಾದ ವೇಳೆ ಮಾತನಾಡಿದ ಆತ, ಹತ್ಯೆ ಹಿನ್ನೆಲೆಯಲ್ಲಿ ಯಾರ ಪಾತ್ರವೂ ಇಲ್ಲ. ಎಲ್ಲವೂ `ಅಲ್ಲಾ'ನ ಕೃಪೆ. ಹಣ ಹಾಗೂ ಹುಡುಗಿ ಆಸೆಯಿಂದ ನಾವು ಕರೆದಲ್ಲಿಗೆ ಬಂದ
ಸುಲಭವಾಗಿ ಸಿಕ್ಕಿಬಿದ್ದ ಎಂದು ಹತ್ಯೆ ಹಿನ್ನೆಲೆಯನ್ನು ವಿವರಿಸಿದ ಆತ, ಇದರಲ್ಲಿ ನನ್ನ ಪಾತ್ರವಿಲ್ಲ. ಆತ ನನ್ನ ತಂದೆ, ಅಣ್ಣ ಸೇರಿದಂತೆ ಆಪ್ತರನ್ನು ಹತ್ಯೆ ಮಾಡಿದ್ದ. ದಿವಾನ್ ಅಲಿ ಹತ್ಯೆ ಪ್ರಕರಣದಲ್ಲಿ ವಿನಾಕಾರಣ ನನ್ನನ್ನು ಆರೋಪಿಯನ್ನಾಗಿ ಮಾಡಿ ಜೈಲಿಗೆ ಕಳುಹಿಸಿದ್ದರು ಎಂದನು.

ಜೈಲಿನಿಂದ ಹೊರಬಂದ ನಂತರ ನಾನು ಬೀದಿಪಾಲಾಗಿದ್ದೆ. ಆದರೂ ನನ್ನ ಬೆನ್ನತ್ತಿದ ನಯಾಜ್ ಹಾಗೂ ಆತನ ಸಹಚರರು ನನ್ನ ಹತ್ಯೆಗೆ ಹೊಂಚು ಹಾಕಿದ್ದರು. ಮೂರ್ನಾಲ್ಕು ಬಾರಿ ತಪ್ಪಿಸಿಕೊಂಡಿದ್ದೆ. ಕೊನೆಗೆ ಜೀವ ಉಳಿಸಿಕೊಳ್ಳಲು ಆತನ ಹತ್ಯೆ ಮಾಡಲಾಯಿತು. ಹಣ, ಹೆಣ್ಣಿನ ಆಸೆ ತೋರಿಸಿ ರಹಸ್ಯ ಸ್ಥಳಕ್ಕೆ ಕರೆಸಿ ಹತ್ಯೆ ಮಾಡಲಾಯಿತು. ನಯಾಜ್ ವಿರುದಟಛಿ ನಗರದ ವಿವಿಧ ಠಾಣೆಗಳಲ್ಲಿ ಸುಮಾರು 17 ದೂರು ದಾಖಲಾಗಿವೆ ಎಂದು ತಿಳಿಸಿದ್ದಾನೆ. ಪೊಲೀಸರು ಮಾತ್ರ ಈ ಸಂಬಂಧ ಯಾವುದೇ ಮಾಹಿತಿ ನೀಡುತ್ತಿಲ್ಲ. ಸೆ.4ರಂದು ಮಾಗಡಿ ಠಾಣೆ ವ್ಯಾಪ್ತಿಯಲ್ಲಿ ಹತ್ಯೆ ನಡೆದಿತ್ತು.ಘಟನೆ ನಂತರ ಆರೋಪಿ  ಪರಾರಿಯಾಗಿದ್ದ. ಈ ಸಂಬಂಧ ಪೊಲೀಸರು ಆರೋಪಿಗೆ ಹುಡುಕಾಟ ನಡೆಸಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

INDIA ಬ್ಲಾಕ್ ನಲ್ಲಿ ಬಿರುಕು?: ಆಪ್ ಕೈ ಕೊಟ್ಟ ಬೆನ್ನಲ್ಲೇ ಭೋಜನ ಕೂಟಕ್ಕೆ ಸಮಾಜವಾದಿ ಪಕ್ಷ ಗೈರು!

ರಾಹುಲ್, ಪ್ರಿಯಾಂಕಾ ಗಾಂಧಿಯನ್ನು ಎಳೆದೊಯ್ದು ವಶಕ್ಕೆ ಪಡೆದ ಪೊಲೀಸರು; ಬಸ್‌ನ ಟೈರ್ ಪಂಕ್ಚರ್ ಮಾಡಿದ ಕಾರ್ಯಕರ್ತರು

ಭಾರತವನ್ನು ಜಾಗತಿಕ ಶಕ್ತಿಯಾಗಿಸಿದ್ದು ಮೋದಿ, ಅಂತಹವರ ವಿರುದ್ಧವೇ ಸಂಚು: ಸರ್ಬಿಯಾ ಮಾಜಿ ಅಧ್ಯಕ್ಷ, Video ವೈರಲ್

SIR ವಿರುದ್ಧ ಕಾಂಗ್ರೆಸ್ ಪ್ರತಿಭಟನೆ: ಡಿಎಂಕೆ ಯು-ಟರ್ನ್!

ಗ್ರಾಹಕರಿಗೆ ನೆಮ್ಮದಿ: ಕಟಾವಿಗೆ ಬಂದ ಖಾರಿಫ್ ಬೆಳೆ, ಕರ್ನಾಟಕ ಸೇರಿ ಹಲವು ರಾಜ್ಯಗಳಲ್ಲಿ ಈರುಳ್ಳಿ ದರ ಕುಸಿತ ಸಾಧ್ಯತೆ, 2 ಲಕ್ಷ ಕ್ವಿಂಟಾಲ್‌ ಪೂರೈಕೆ!