ಬೇಬಿ ಕೇರ್ಗಳಿಗೆ ಪ್ರತ್ಯೇಕ ನಿಯಮ: ಸಚಿವೆ ಉಮಾಶ್ರೀ
ಪ್ಲೇ ಹೋಮ್, ಬೇಬಿ ಕೇರ್ಗಳಿಗೆ ಪ್ರತ್ಯೇಕ ನಿಯಮ ರೂಪಿಸುವ ಬಗ್ಗೆ ಸರ್ಕಾರ ಚಿಂತನೆ ನಡೆಸಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಉಮಾಶ್ರೀ ಹೇಳಿದ್ದಾರೆ...
ಬೆಂಗಳೂರು: ಪ್ಲೇ ಹೋಮ್, ಬೇಬಿ ಕೇರ್ಗಳಿಗೆ ಪ್ರತ್ಯೇಕ ನಿಯಮ ರೂಪಿಸುವ ಬಗ್ಗೆ ಸರ್ಕಾರ ಚಿಂತನೆ ನಡೆಸಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಉಮಾಶ್ರೀ ಹೇಳಿದ್ದಾರೆ.
ವಿಕಾಸಸೌಧದಲ್ಲಿ ನಡೆದ ಮಕ್ಕಳ ಕಲ್ಯಾಣ ಸಮಿತಿಯ ಕಾರ್ಯನಿರ್ವಹಣೆ ಮತ್ತು ಪರಿಶೀಲನಾ ಸಭೆಯಲ್ಲಿ ಈ ವಿಷಯ ತಿಳಿಸಿರುವ ಅವರು, ಪ್ಲೇ ಹೋಮ್ ಗಳ ಬಗ್ಗೆ ಈಗಾಗಲೇ ಒಂದಿಷ್ಟು
ನಿಯಮಗಳಿವೆ. ಆದರೆ ಇನ್ನಷ್ಟು ಪರಿಣಾಮಕಾರಿ ಕಾಯ್ದೆ ಅಗತ್ಯವಾಗಿರುವುದರಿಂದ ಪ್ರತ್ಯೇಕ ನಿಯಮ ರೂಪಿಸಲಾಗುವುದು ಎಂದು ಹೇಳಿದರು.