ಬೆಂಗಳೂರು: ಅಕ್ಟೋಬರ್ ಒಳಗೆ ಕಾರ್ಯ ಪೂರ್ಣಗೊಳಿಸಲು ಸಚಿವರ ತಾಕೀತು ನಡು ರಸ್ತೆಯ ಗುಂಡಿಯಿಂದ ಸಂಭವಿಸಿದ ಅವಘಡದಲ್ಲಿ ಮೃತಪಟ್ಟ ಹಿನ್ನೆಲೆಯಲ್ಲಿ ದಿಢೀರ್ ಎಚ್ಚೆತ್ತುಕೊಂಡಿರುವ ಸರ್ಕಾರ ಇದೀಗ ಬೆಂಗಳೂರಿನ ರಸ್ತೆಯ ಗುಂಡಿಗಳಿಗೆ ಮುಕ್ತಿ ಕಾಣಿಸಲು ಮುಂದಾಗಿದೆ.
ಸಾರಿಗೆ ಸಚಿವ ರಾಮಲಿಂಗಾಡ್ಡಿಯವರೇ ಖುದ್ದು ರಸ್ತೆ ಗುಂಡಿ ಮುಚ್ಚುವ ಅಭಿಯಾನದ ಮುತುವರ್ಜಿ ವಹಿಸಿದ್ದಾರೆ. ಅಲ್ಲದೆ, ನಗರವನ್ನು ಗುಂಡಿ ಮುಕ್ತವಾಗಿಸಲು ಸೋಮವಾರ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದಾರೆ. ನಂತರ ಮಾತನಾಡಿ, `ಅಕ್ಟೋಬರ್ ಅಂತ್ಯ ದೊಳಗೆ ಪ್ರಮುಖ ರಸ್ತೆ, ಆರ್ಟಿರಿಯಲ್ ಹಾಗೂ ಸಬ್ ಆರ್ಟಿರಿಯಲ್ ರಸ್ತೆಗಳಲ್ಲಿರುವ ಗುಂಡಿ ಮುಚ್ಚಲು ಕ್ರಮ ಕೈಗೊಳ್ಳಲಾಗುವುದು' ಎಂದು ತಿಳಿಸಿದ್ದಾರೆ.
ರಸ್ತೆ ಅಗೆಯುವವರಿಗೆ ಎಚ್ಚರಿಕೆ: ರಸ್ತೆಗಳನ್ನು ಅಗೆಯಲು ಪಾಲಿಕೆಯಿಂದ ಅನುಮತಿ ಪಡೆಯಲು ಆನ್‍ಲೈನ್ ಅರ್ಜಿ ಸಲ್ಲಿಸುವಂತೆ ವ್ಯವಸ್ಥೆ ಮಾಡಲಾಗಿದೆ. ಬೆಂಗಳೂರು ಜಲಮಂಡಳಿಯೊಂದಿಗೂ ಈ ವಿಚಾರ ಚರ್ಚಿಸಲಾಗಿದೆ. ಅರ್ಜಿ ಸಲ್ಲಿಸಿ, ಅನುಮತಿ ಪಡೆದ ಬಳಿಕವೇ ರಸ್ತೆ ಅಗೆಯಲು ಅವಕಾಶ. ತಪ್ಪಿದಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ರಾಮಲಿಂಗಾರೆಡ್ಡಿಯವರು ತಿಳಿಸಿದ್ದಾರೆ.
ಪ್ರಕರಣ ಹಿಂಪಡೆಯಲು ಸೂಚನೆ: ಎಚ್ ಎಎಲ್ ಸಮೀಪ ಸಂಭವಿಸಿದ ಅಪಫಾತದಲ್ಲಿ ಮೃತಪಟ್ಟ ಸಾಫ್ಟ್ ವೇರ್ ಉದ್ಯೋಗಿ ಸ್ತುತಿ ಪಾಂಡೆ ಪ್ರಕರಣದಲ್ಲಿ ಆಕೆಯ ಪತಿ ಓಂಪ್ರಕಾಶ್ ವಿರುದ್ಧವೇ ಕೇಸು ದಾಖಲಿಸಿರುವುದು ಸರಿಯಲ್ಲ ಎಂದು ಸಚಿವ ರಾಮಲಿಂಗಾ ರೆಡ್ಡಿ ಅಭಿಪ್ರಾಯಪಟ್ಟಿದ್ದಾರೆ
ರಸ್ತೆ ಗುಂಡಿ ತಪ್ಪಿಸಲುಹೋಗಿ ಅವಘಡ ಸಂಭವಿಸಿದೆ. ಈ ಬಗ್ಗೆ ಪೊಲೀಸ್ ಆಯುಕ್ತರೊಂದಿಗೆ ಮಾತನಾಡಿ, ಕೇಸು ಹಿಂಪಡೆಯಲು ಸೂಚನೆ ನೀಡಲಾಗುವುದು. ಅಂತೆಯೇ ಅಪಘಾತದ ಸ್ಥಳದಲ್ಲಿ ಅಂಡರ್ ಪಾಸ್ ಕಾಮಗಾರಿ ನಡೆಯುತ್ತಿದ್ದು, ಇದನ್ನು ಶೀಘ್ರದಲ್ಲೇ ಪೂರ್ಣಗೊಳಿಸಲಾಗುವುದು.
ಸುಗಮ ಸಂಚಾರಕ್ಕೆ ಸೂಚನೆ