ಬ್ಯಾಂಕ್ವೆಟ್ ಹಾಲ್ ನಲ್ಲಿ ವಾತ್ಸಲ್ಯವಾಣಿ ಗೆ ಚಾಲನೆ ನೀಡಿದ ಸಚಿವ ಯು.ಟಿ ಖಾದರ್ 
ಜಿಲ್ಲಾ ಸುದ್ದಿ

ವಾತ್ಸಲ್ಯವಾಣಿಗೆ ಚಾಲನೆ ನೀಡಿದ ಆರೋಗ್ಯ ಸಚಿವ ಯು.ಟಿ ಖಾದರ್

ಶಿಶು ಮರಣ ಪ್ರಮಾಣ ಕಡಿಮೆ ಹಾಗೂ ಮಕ್ಕಳ ಪೌಷ್ಟಿಕತೆ ಹೆಚ್ಚಿಸುವುದು, ಮಕ್ಕಳ ಸರಿಯಾದ ಬೆಳವಣಿಗೆಯ ಟ್ರ್ಯಾಕಿಂಗ್ ಮುಖಾಂತರ ಖಚಿತಪಡಿಸಿಕೊಳ್ಳುವುದಕ್ಕಾಗಿ ...

ಬೆಂಗಳೂರು: ಶಿಶು ಮರಣ ಪ್ರಮಾಣ ಕಡಿಮೆ ಹಾಗೂ ಮಕ್ಕಳ ಪೌಷ್ಟಿಕತೆ ಹೆಚ್ಚಿಸುವುದು, ಮಕ್ಕಳ ಸರಿಯಾದ ಬೆಳವಣಿಗೆಯ ಟ್ರ್ಯಾಕಿಂಗ್ ಮುಖಾಂತರ ಖಚಿತಪಡಿಸಿಕೊಳ್ಳುವುದಕ್ಕಾಗಿ ರಾಜ್ಯ ಸರ್ಕಾರವು `ವಾತ್ಸಲ್ಯ ವಾಣಿ- 104' ಯೋಜನೆ ಜಾರಿಗೆ ತಂದಿದೆ.

ಸೋಮವಾರ ವಿಧಾಸೌಧದ ಬ್ಯಾಂಕ್ವೆಟ್ ಸಭಾಂಗಣದಲ್ಲಿ ಆರೋಗ್ಯ ಸಚಿವ ಯು.ಟಿ.ಖಾದರ್ ನೂತನ ಯೋಜನೆಗೆ ಚಾಲನೆ ನೀಡಿದರು. ನಂತರ ಮಾತನಾಡಿದ ಸಚಿವ ಯು.ಟಿ.ಖಾದರ್, ವಾತ್ಸಲ್ಯ ವಾಣಿ ಯೋಜನೆಯಲ್ಲಿನ ವ್ಯವಸ್ಥೆಯು ಭಾರತದಲ್ಲೇ ಪ್ರಥಮ ಬಾರಿಗೆ ಅನುಷ್ಠಾನವಾಗುತ್ತಿದೆ. ಈ ಸೇವೆಯಿಂದಾಗಿ ಗರ್ಭಿಣಿಯರ ಆರೈಕೆಗೆ ಮತ್ತು ಅಗತ್ಯಕ್ಕೆ ತಕ್ಕಂತೆ ವೈದ್ಯಕೀಯ ಸೇವೆಯನ್ನು ಕಡ್ಡಾಯವಾಗಿ ಒದಗಿಸುವುದರಿಂದ ತಾಯಿ ಮತ್ತು ಶಿಶು ಮರಣ ಪ್ರಮಾಣದ ಸಂಖ್ಯೆಯನ್ನು ಗಣನೀಯವಾಗಿ ಕಡಿಮೆ ಮಾಡಬಹುದಾಗಿದೆ ಎಂದರು.

ಪ್ರತಿಯೊಬ್ಬ ಗರ್ಭಿಣಿಯ ನೋಂದಣಿ ಸಮಯದಿಂದ ಹೆರಿಗೆಯಾಗುವವರೆಗೂ, ಪ್ರಸವದ ನಂತರದ ಆರೈಕೆಯೂ ಒಳಗೊಂಡಂತೆ ಯಾವುದೇ ಸ್ಥಳದಲ್ಲಿ ನೋಂದಣಿಯಾಗಿದ್ದರೂ ಸಮಯೋಚಿತವಾಗಿ ಸಂಪೂರ್ಣ ಆರೋಗ್ಯ ಸೇವೆ ಒದಗಿಸುತ್ತದೆ ಎಂದು ವಿವರಿಸಿದರು. ಆರೈಕೆ ಮಾಹಿತಿಯ ಜೊತೆಗೆ ಪೌಷ್ಠಿಕ ಆಹಾರ ಹಾಗೂ ಆರೋಗ್ಯದ ಮಾಹಿತಿ, ಸರ್ಕಾರ ವಿವಿಧ ಆರೋಗ್ಯ ಕಾರ್ಯಕ್ರಮಗಳು ಹಾಗೂ ಯೋಜನೆಗಳ ಬಗ್ಗೆ ತಿಳಿವಳಿಕೆ ನೀಡುವುದು, ಗಂಡಾಂತರ ಪರಿಸ್ಥಿತಿಯಲ್ಲಿರುವ ಗರ್ಭಿಣಿಯರು, ಕಡಿಮೆ ತೂಕವುಳ್ಳ ಮಕ್ಕಳನ್ನು ಗುರುತಿಸುವುದು ಯೋಜನೆಯ ಪ್ರಮುಖ ಮುಖ್ಯಾಂಶಗಳು ಎಂದರು.

ಮಾತನಾಡಿದ ತಾರಾ ಅನುರಾಧ, ಆರೋಗ್ಯ ಸಚಿವರಿಗೆ, ಕೇಂದ್ರ ಸರ್ಕಾರಕ್ಕೆ ಸಭಿಕರಿಂದ ಜೈಕಾರ ಕೂಗಿಸಿದ್ದು ಮತ್ತು ಮಹಿಳೆಯರಿಗೆ ಮಾತ್ರ ಗರ್ಭಧರಿಸಲು ಅವಕಾಶ, ಗಂಡಸರಿಗಿಲ್ಲ ಅವಕಾಶ ಎಂಬಿತ್ಯಾದಿ ಮಾತುಗಳು ಸಭೆಯನ್ನು ನಗೆಗಡಲಲ್ಲಿ ತೇಲಿಸಿತು. ವೈದ್ಯಕೀಯ ಶಿಕ್ಷಣ ಸಚಿವ ಶರಣಪ್ರಕಾಶ್ ಪಾಟೀಲ್, ವಿಧಾನಪರಿಷತ್ ಸದಸ್ ರಾದ ತಾರಾ ಅನುರಾಧ, ಜಯಮಾಲ, ಅತುಲ್ ಕುಮಾರ್ ತಿವಾರಿ, ವಿ.ಎಸ್. ವಸ್ತಾದ್, ಡಾ.ಜಿ.ಎಂ.ವಾಮದೇವ್ ಇದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಜನರು ಬಿಜೆಪಿ, ಮೋದಿ ಅವರೊಂದಿಗಿದ್ದಾರೆ': 2029ರ ಚುನಾವಣೆಯಲ್ಲಿ ಮತ್ತೊಂದು 'ಭಾರಿ ಸೋಲಿಗೆ' ಸಿದ್ಧರಾಗಿ: ರಾಹುಲ್ ಗಾಂಧಿ ವಿರುದ್ಧ ಅಮಿತ್ ಶಾ ವಾಗ್ದಾಳಿ

'ನನ್ನ ಜೊತೆ ಮಲಗಿದ್ರೆ ಸಿನಿಮಾ ಅವಕಾಶ’: ಚಿಕ್ಕ ವಯಸ್ಸಿಗೆ ಚಿತ್ರರಂಗ ಬಿಟ್ಟಿದ್ದೇಕೆ; ಸೌಥ್ ನಿರ್ದೇಶಕನ ಬಗ್ಗೆ ನಟಿ ಶಾಕಿಂಗ್ ಹೇಳಿಕೆ!

3 ಬಾರಿ ಸಿಎಂ ಕೂಡ ಸುರಕ್ಷಿತವಾಗಿಲ್ಲ: ಮಮತಾ ಬ್ಯಾನರ್ಜಿ ಮೇಲೆ ಚಾಕುವಿನಿಂದ ದಾಳಿಗೆ ಯತ್ನ; ಮಹಿಳೆ ಬಂಧನ

ವಿಚಿತ್ರವಾದ್ರೂ ಸತ್ಯ: ಅಪ್ರಾಪ್ತೆಯನ್ನು ಹಿಂಬಾಲಿಸಿ ಲೈಂಗಿಕ ದೌರ್ಜನ್ಯ; ರೋಬೋಟ್ ವಶಕ್ಕೆ ಪಡೆದ ಪೊಲೀಸರು!

'ಏನೇನ್ ದಾಖಲೆ ಇದೆ ಎಲ್ಲಾ ತರಿಸುತ್ತೇನೆ': HDK 'ಸ್ಟಿಂಗ್' ಆರೋಪಕ್ಕೆ CM ಡಿಕೆಶಿ ಶಾಕಿಂಗ್ ರಿಯಾಕ್ಷನ್!