ಸಾಂದರ್ಭಿಕ ಚಿತ್ರ 
ಜಿಲ್ಲಾ ಸುದ್ದಿ

ರಸ್ತೆ ಗುಂಡಿ ಮುಚ್ಚಲು ಉಪಲೋಕಾಯುಕ್ತರ ಆದೇಶ

ರಸ್ತೆಗುಂಡಿ ಮುಚ್ಚಲು ಹಾಗೂ ರಸ್ತೆಗಳನ್ನು ಅಪಘಾತ ರಹಿತ ಮಾಡಲು ಕೈಗೊಂಡ ಕ್ರಮಗಳ ಬಗ್ಗೆ ವರದಿ ನೀಡಬೇಕು ಎಂದು ಉಪಲೋಕಾಯುಕ್ತ...

ಬೆಂಗಳೂರು: ರಸ್ತೆಗುಂಡಿ ಮುಚ್ಚಲು ಹಾಗೂ ರಸ್ತೆಗಳನ್ನು ಅಪಘಾತ ರಹಿತ ಮಾಡಲು ಕೈಗೊಂಡ ಕ್ರಮಗಳ ಬಗ್ಗೆ ವರದಿ ನೀಡಬೇಕು ಎಂದು ಉಪಲೋಕಾಯುಕ್ತ ಸುಭಾಷ್ ಅಡಿ ಅವರು ಬಿಬಿಎಂಪಿ ಹಾಗೂ ಬಿಡಿಎ ಆಯುಕ್ತರಿಗೆ ಆದೇಶ ನೀಡಿದ್ದಾರೆ.

ಆರ್‍ಟಿಐ ಕಾರ್ಯಕರ್ತ ಸಾಯಿದತ್ತ ಎಂಬುವರು ರಸ್ತೆ ಸಮಸ್ಯೆ ಕುರಿತು ಲೋಕಾಯುಕ್ತಕ್ಕೆ ದೂರು ನೀಡಿದ್ದಾರೆ. ಕಳೆದ ಎಂಟೂವರೆ ತಿಂಗಳಲ್ಲಿ ನಗರದಲ್ಲಿ ರಸ್ತೆ ಅಪಘಾತದಿಂದ 531 ಮಂದಿ ಮರಣಕ್ಕೀಡಾಗಿ ದ್ದಾರೆ. ಈ ವರ್ಷ 3,400 ರಸ್ತೆ ಅಪಘಾತಗಳು ನಡೆದಿವೆ.

ನಗರದ ರಸ್ತೆಗುಂಡಿಗಳನ್ನು ಮುಚ್ಚಲು ನಗರ ಜಿಲ್ಲಾ ಉಸ್ತುವಾರಿ ಸಚಿವರು ಅಕ್ಟೋಬರ್ 5ರ ಗಡುವು ವಿಧಿಸಿದ್ದು ಅದನ್ನು ಜಾರಿಗೊಳಿಸಲು ಬದ್ಧರಾಗಿರುವುದಾಗಿ ನಗರ ಸಂಚಾರ ಪೊಲೀಸರು ಹೇಳಿದ್ದಾರೆ. ಆದರೆ,ಸಮಸ್ಯೆಗಳಿರೋದು ಗುಂಡಿಗಳಿಂದ ಮಾತ್ರವಲ್ಲ. ನಗರದ ಸುಮಾರು 67,309 ಚದರ ಮೀಟರ್ ರಸ್ತೆ ಬಳಸಲಿಕ್ಕೇ ಯೋಗ್ಯವಾಗಿಲ್ಲ.ಕಳೆದ ವರ್ಷ ಬಿಬಿಎಂಪಿ ವ್ಯಾಪ್ತಿಯಲ್ಲಿ ರಸ್ತೆ ಕಾಮಗಾರಿಗೆ 1 ಸಾವಿರ ಕೋಟಿ ಬಿಡುಗಡೆ ಯಾಗಿದ್ದು, ಎಲ್ಲಿಯೂ ರಸ್ತೆ ಸಮರ್ಪಕವಾಗಿಲ್ಲ ಎಂದು ದೂರಿನಲ್ಲಿ ತಿಳಿಸಲಾಗಿದೆ. ಈ ದೂರು ಆಧರಿಸಿ  ಉಪಲೋಕಾಯುಕ್ತರು ಬಿಬಿಎಂಪಿ ಆಯುಕ್ತ ಕುಮಾರ ನಾಯಕ್ ಹಾಗೂ ಬಿಡಿಎ ಆಯುಕ್ತ ಶ್ಯಾಮ್ ಭಟ್ ಅವರಿಗೆ ಸೂಚನೆ ನೀಡಿದ್ದಾರೆ.

ನಗರದಲ್ಲಿ ರಸ್ತೆಗುಂಡಿ ಹೆಚ್ಚಿದ್ದು, ಅಪಘಾತದಿಂದ ಸತ್ತ ಮಂದಿಯ ಕುಟುಂಬದವರು ಮಾತ್ರ ಈ ನೋವು ತಿಳಿಯಲು ಸಾಧ್ಯ. ಕಳೆದ ಬಾರಿ ರಾಜ್ಯ ಸರ್ಕಾರ ಗುಂಡಿ ಮುಚ್ಚಲು ಪ್ರತ್ಯೇಕ ಅನುದಾನ ಬಿಡುಗಡೆ ಮಾಡಿದ್ದು, ಮೇ 31ರೊಳಗೆ ಗುಂಡಿ ಮುಚ್ಚುವುದಾಗಿ ಬಿಬಿಎಂಪಿ ತಿಳಿಸಿತ್ತು. ಆದರೆ ಬಿಬಿಎಂಪಿ ಹಾಗೂ ಬಿಡಿಎ ಕಿವುಡಾಗಿದ್ದು, ಇನ್ನೂ ಕ್ರಮ ಕೈಗೊಂಡಿಲ್ಲ. ವರ್ಷಕ್ಕೆ 500 ಮಂದಿ ರಸ್ತೆ ಅಪಘಾತದಿಂದ ಮೃತಪಡುತ್ತಿರುವುದು ಸಣ್ಣ ವಿಚಾರವಲ್ಲ. ಹೀಗಾಗಿ ಶೀಘ್ರದಲ್ಲಿ ಕೈಗೊಂಡ ಕ್ರಮಗಳ ಬಗ್ಗೆ ವರದಿ ಸಲ್ಲಿಸಬೇಕು ಎಂದು ಸೂಚನೆ ನೀಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಮತಗಳ್ಳತನ' ನಡೆದಿರುವುದನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ನಿರಾಕರಿಸಲಿಲ್ಲ, ನನಗೆ ಆಶ್ಚರ್ಯವಾಯಿತು: ರಾಹುಲ್ ಗಾಂಧಿ

ಬೆಂಗಳೂರು: ನಮ್ಮ ಮೆಟ್ರೋದಲ್ಲಿ Alt News ಸಹ ಸ್ಥಾಪಕ ಮೊಹಮ್ಮದ್ ಜುಬೈರ್ ಗೆ ಹಿಗ್ಗಾಮುಗ್ಗ ಥಳಿತ?, Video Viral

19ನೇ ಓವರ್‌ನಲ್ಲೇ 250 ರನ್ ಚೇಸ್: ಟಿ20 ಕ್ರಿಕೆಟ್‌ನಲ್ಲಿ ಭಾರತವನ್ನು ಸೋಲಿಸಿ ದಾಖಲೆ ಬರೆದ ವಿಂಡೀಸ್

CJP Protest: ಭಾರತದ ಯುವಕರು ದೆಹಲಿಗೆ ತಲುಪುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ: ಚಿರಾಗ್ ಪಾಸ್ವಾನ್

24 ಗಂಟೆ ಇಂಟರ್ನೆಟ್ ಕಟ್, 57 ಮೆಟ್ರೋ ನಿಲ್ದಾಣ ಬಂದ್: ಸಿಜೆಪಿ ಪ್ರತಿಭಟನೆಗೂ ಮುನ್ನ ದೆಹಲಿ ಹೈ ಅಲರ್ಟ್