ಬೆಂಗಳೂರು: ರೈತರಿಗೆ ಪ್ರೋತ್ಸಾಹಧನ ಹೆಚ್ಚಳವಾದ ನಂತರ ಕೆಎಂಎಫ್‍ಗೆ ಹೆಚ್ಚಿನ ಹಾಲು ಹರಿದುಬರುತ್ತಿದೆ. ಹಾಲು ಖರ್ಚಾಗದೆ ಉಳಿಯುತ್ತಿದೆ. ಹಾಲಿ ಪುಡಿ ತಯಾರಿಸಿದರೂ ಖರ್ಚಾಗುತ್ತಿಲ್ಲ.
3200 ಟನ್‍ನಷ್ಟು ಹಾಲಿನ ಪುಡಿ ಬಾಕಿಯಾಗಿದೆ. ಕೆಎಂಎಫ್ ಡೈರಿಗಳು ನಷ್ಟದಲ್ಲಿದ್ದು, ಹಾಲಿನ ದರ ಹೆಚ್ಚಳ ಮಾಡಬೇಕೆಂದು ಒಕ್ಕೂಟಗಳು ಪ್ರಸ್ತಾವ ಸಲ್ಲಿಸಿವೆ.
ಆದರೆ, ಈ ಬಗ್ಗೆ ಸರ್ಕಾರ ತಕ್ಷಣಕ್ಕೆ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ ಕಾನೂನು ಸಚಿವ ಟಿ.ಬಿ. ಜಯಚಂದ್ರ ಹೇಳಿದರು. ಹೊರರಾಜ್ಯದಿಂದ ಬರುವ ಕಳಪೆ ಗುಣಮಟ್ಟದ ಹಾಲು ಮಾರಾಟ ನಿಯಂತ್ರಿಸಲು ಪ್ರತ್ಯೇಕ ಕಾಯ್ದೆ ಜಾರಿಗೆ ತರುವ ಬಗ್ಗೆ ಚಿಂತನೆ ನಡೆದಿದೆ ಎಂದು ಅವರು ಹೇಳಿದರು.