ಬೆಂಗಳೂರು: ಖಾಸಗಿ ಕಂಪನಿಗಳಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿ ಹಣ ಪಡೆದು ವಂಚಿಸುತ್ತಿದ್ದ ಆರೋಪಿಯನ್ನು ಚಾಮರಾಜಪೇಟೆ ಪೊಲೀಸರು ಬಂಧಿಸಿದ್ದಾರೆ.
ಬಿ.ಕೆ.ಸತ್ಯಪ್ರೇಮ್ ಅಲಿಯಾಸ್ ಸೂರ್ಯವಂಶಿ (53) ಬಂಧಿತ ಆರೋಪಿ. ಉದ್ಯೋಗದ ಆಸೆಗೆ ಸತ್ಯ ಪ್ರೇಮ್ ಗೆ ಹಣ ನೀಡಿ ವಂಚನೆಗೆ ಒಳಗಾದ ಮನು ಎಂಬುವರು ನೀಡಿದ ದೂರಿನ ಆಧಾರದ ಮೇಲೆ ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.