ಶ್ರೀಧರ್ ಜಿ.ವಿ 
ಜಿಲ್ಲಾ ಸುದ್ದಿ

ಜಿಜೆಎಫ್ ನೂತನ ಅಧ್ಯಕ್ಷರಾಗಿ ಜಿ.ವಿ. ಶ್ರೀಧರ್ ಆಯ್ಕೆ

ಆಲ್ ಇಂಡಿಯ ಜೆಮ್ಸ್ & ಜ್ಯುವೆಲ್ಲರಿ ಟ್ರೇಡ್ ಫೆಡರೇಷನ್ (ಜಿಜೆಎಫ್)ನ ನೂತನ ಅಧ್ಯಕ್ಷರಾಗಿ ಜಿ.ವಿ. ಶ್ರೀಧರ್ ಆಯ್ಕೆಯಾಗಿದ್ದಾರೆ.

ಬೆಂಗಳೂರು: ಆಲ್ ಇಂಡಿಯ ಜೆಮ್ಸ್ & ಜ್ಯುವೆಲ್ಲರಿ ಟ್ರೇಡ್ ಫೆಡರೇಷನ್ (ಜಿಜೆಎಫ್)ನ ನೂತನ ಅಧ್ಯಕ್ಷರಾಗಿ ಜಿ.ವಿ. ಶ್ರೀಧರ್ ಆಯ್ಕೆಯಾಗಿದ್ದಾರೆ.

ಶ್ರೀಧರ್ ಅವರು ಜಿಜೆಎಫ್‍ನ ಮಾಜಿ ನಿರ್ದೇಶಕರಾಗಿದ್ದು, ಸ್ಥಾಪನೆ ದಿನದಿಂದಲೂ ಇದರ ಜೊತೆಗೆ ಸಹಯೋಗ ಹೊಂದಿದ್ದು, ದೇಶೀಯವಾಗಿ ಹರಳು ಮತ್ತು ಆಭರಣ ಉದ್ದಿಮೆಯ ಪ್ರಗತಿಗೆ ಒತ್ತು ನೀಡಿದ್ದಾರೆ. ಬೆಂಗಳೂರಿನಲ್ಲಿ ಇತರ ಸಂಘಟನೆಗಳ ಜತೆಗೂ ಸಹಯೋಗ ಹೊಂದಿದ್ದು, ಕ್ರಿಯಾಶೀಲ ಉದ್ದಿಮೆದಾರರಾದ ಅವರು, ವ್ಯಾಪಕ ಅನುಭವವನ್ನು ಹೊಂದಿದ್ದಾರೆ.

ಆಭರಣ ಕಸುಬು ಹೊಂದಿದ್ದ ಕುಟುಂಬದ ಹಿನ್ನೆಲೆಯ ಜಿ.ವಿ. ಶ್ರೀಧರ್ ಅವರು ಶ್ರೀರಾಮ ಜ್ಯುವೆಲರ್ಸ್ ನ ವ್ಯವಸ್ಥಾಪಕ ನಿರ್ದೇಶಕರಾಗಿದ್ದಾರೆ. ಇದರ ಜತೆಗೆ ವಾಸವಿ ಚಾರಿಟೆಬಲ್ ಟ್ರಸ್ಟ್ ಮತ್ತು ವಾಸವಿ ಎಜುಕೇಷನಲ್ ಟ್ರಸ್ಟ್‍ನ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ.

ಆಲ್ ಇಂಡಿಯಾ ಜೆಮ್ಸ್ ಅಂಡ್ ಜ್ಯುವೆಲ್ಲರಿ ಟ್ರೇಡ್ ಫೆಡರೇಷನ್ (ಜಿಜೆಎಫ್) ಉತ್ಪಾದಕರು, ಸಗಟು ವ್ಯಾಪಾರಿಗಳು, ಬಿಡಿ ವ್ಯಾಪಾರಿಗಳು, ವಿತರಕರು, ಪ್ರಯೋಗಾಲಯಗಳು, ಹರಳು ತಜ್ಞರು, ವಿನ್ಯಾಸಕಾರರು ಮತ್ತು ಸಂಬಂಧಿತ ಸೇವೆ ಒಳಗೊಂಡಂತೆ 6,00,000 ಸದಸ್ಯರನ್ನು ಹೊಂದಿದೆ. ಜೆಮ್ಸ್ ಅಂಡ್ ಜ್ಯುವೆಲ್ಲರಿ ಉದ್ದಿಮೆಯು ವಿಸ್ತಾರವಾದ, ಸುಮಾರು 1 ಕೋಟಿ ನೌಕರರ ಪಡೆಯನ್ನು ಹೊಂದಿದು, ಆಭರಣ ಉದ್ದಿಮೆಯಲ್ಲಿ ತೊಡಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Chalo Supreme Court: ಭೇಟಿ ಮನವಿ ತಿರಸ್ಕರಿಸಿದ CJI ಸೂರ್ಯಕಾಂತ್; ಸುಪ್ರೀಂ ಕೋರ್ಟ್‌ನತ್ತ ಇಂಡಿಯಾ ಬ್ಲಾಕ್ ಮೆರವಣಿಗೆ!

ಯುವತಿ ಮೇಲೆ ಅತ್ಯಾಚಾರ ಆರೋಪ: ಹುಣಸಮಾರನಹಳ್ಳಿ ಮಠದ ನಂಜೇಶ್ವರ ಶಿವಾಚಾರ್ಯ ಸ್ವಾಮೀಜಿ ಬಂಧನ

ಚುನಾವಣೆ ಘೋಷಣೆಯಾದ್ರೆ 25 ಕಾಂಗ್ರೆಸ್‌ ಶಾಸಕರು ಬಿಜೆಪಿ ಸೇರಲು ರೆಡಿ ಇದ್ದಾರೆ: ವಿಜಯೇಂದ್ರ ಹೊಸ ಬಾಂಬ್‌

KPSC ನೇಮಕಾತಿ ಹಗರಣದ ಕಿಂಗ್‌ಪಿನ್ ಬಸವರಾಜ್ ಕನ್ನಾಳೆಗೆ 5 ದಿನ ಜಾಮೀನು ಮಂಜೂರು; ಇಲ್ಲಿದೆ ಕಾರಣ...

ರಸ್ತೆ ಮಧ್ಯೆ ನಮಾಜ್ ಮಾಡುತ್ತಿದ್ದ ಪಾಕ್‌ ಮೂಲದ ವಿದ್ಯಾರ್ಥಿನಿಗೆ ಕಾರು ಢಿಕ್ಕಿ, ಸಾವು; ಚಾಲಕನಿಗೆ ಜೈಲು ಶಿಕ್ಷೆ ವಿನಾಯಿತಿ!