ಪುತ್ತೂರು: ಹಣದ ಆಮಿಷ ತೋರಿಸಿ ಬಾಲಕಿಯೊಬ್ಬಳನ್ನು ಗುಡ್ಡೆಗೆ ಕರೆದುಕೊಂಡು ಹೋಗಿ ಅತ್ಯಾಚಾರಕ್ಕೆ ಯತ್ನಿಸಿದ ಆರೋಪದ ಮೇಲೆ ಅಪ್ರಾಪ್ತ ಬಾಲಕನನ್ನು ಪೊಲೀಸರು ಬಂಧಿಸಿದ್ದಾರೆ.
ಅಪ್ರಾಪ್ತನನ್ನು ಬಂಧಿಸಿರುವ ಸಂಪ್ಯ ಪೊಲೀಸರು ಆತನ ವಿರುದ್ದ ಪೋಕ್ಸೋ ಕಾಯಿದೆಯಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
17 ವರ್ಷ ಪ್ರಾಯದ ಬಾಲಕ 12 ವರ್ಷದ ಬಾಲಕಿಗೆ ಹಣದ ಅಮಿಷ ತೋರಿಸಿ, ಸಂಪ್ಯ ಆನಂದಾಶ್ರಮದ ಬಳಿಯಲ್ಲಿನ ನಿರ್ಜನ ಪ್ರದೇಶದಲ್ಲಿ ಅತ್ಯಾಚಾರಕ್ಕೆ ಯತ್ನಿಸಿರುವುದಾಗಿ ಆರೋಪಿಸಲಾಗಿತ್ತು.