ಸಾಂದರ್ಭಿಕ ಚಿತ್ರ 
ಜಿಲ್ಲಾ ಸುದ್ದಿ

ಸಿಡಿಲಿಗೆ ನಾಲ್ವರು ಬಲಿ 8 ಮಂದಿಗೆ ಗಾಯ

ರಾಜ್ಯದ ಹಲವು ಜಿಲ್ಲೆಗಳಲ್ಲಿ ಭಾನುವಾರ ದಿಢೀರನೆ ಗುಡುಗು ಸಹಿತ ಮಳೆಯಾಗಿದ್ದು, ಸಿಡಿಲಿಗೆ ನಾಲ್ವರು...

ಬೆಂಗಳೂರು: ರಾಜ್ಯದ ಹಲವು ಜಿಲ್ಲೆಗಳಲ್ಲಿ ಭಾನುವಾರ ದಿಢೀರನೆ ಗುಡುಗು ಸಹಿತ ಮಳೆಯಾಗಿದ್ದು, ಸಿಡಿಲಿಗೆ ನಾಲ್ವರು ಬಲಿಯಾಗಿದ್ದಾರೆ. ಒಟ್ಟು 8 ಮಂದಿಗೆ ಗಾಯಗಳಾಗಿವೆ.

ಚಿತ್ರದುರ್ಗ ಜಿಲ್ಲೆಯ ಪ್ರತ್ಯೇಕ ಎರಡುಪ್ರಕರಣಗಳಲ್ಲಿ ಮೂವರು ಬಲಿಯಾಗಿದ್ದರೆ, ಮಧುಗಿರಿಯಲ್ಲಿ ಒಬ್ಬರು ಸಿಡಿಲು ಬಡಿದು ಸಾವಿಗೀಡಾಗಿದ್ದು, ಐವರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಹೊಳಲ್ಕೆಕೆರೆ ತಾಲೂಕಿನ ದಗ್ಗೆ ಗ್ರಾಮದ ಮಂಜುನಾಥ್ (52), ತೇಕವಟ್ಟಿ ಗ್ರಾಮದ ಉಮೇಶ್ (28) ಮತ್ತು ಮೊಳಕಾಲ್ಮುರು ತಾಲೂಕಿನ ಜುಮ್ಮೊಬನಹಳ್ಳಿ ಗ್ರಾಮದ ಬಸಣ್ಣ (35) ಮತ್ತು ಮಧುಗಿರಿ ತಾಲೂಕಿನ ಕಡಗತ್ತೂರು ಗ್ರಾಮದ ಅಂಜಪ್ಪ (60)ಮೃತರು.

ಐವರಿಗೆ ಗಾಯ: ಚಳ್ಳಕೆರೆ ತಾಲೂಕಿನ ಜಡೇಕುಂಟೆ ಗ್ರಾಮದಲ್ಲಿ ಕೃಷಿ ಚಟುವಟಕೆಯಲ್ಲಿ ತೊಡಗಿದ್ದಾಗ ಸಿಡಿಲು ಬಡಿದು ಮೂವರು ಗಾಯಗೊಂಡಿದ್ದರೆ, ಎತ್ತು ಸ್ಥಳದಲ್ಲೇ ಸಾವನ್ನಪ್ಪಿದೆ. ತಿಮ್ಮಾರೆಡ್ಡಿ(21), ಸರೋಜಮ್ಮ(30) ಮತ್ತು ರೇಣುಕಮ್ಮ (39) ಗಾಯಗೊಂಡವರನ್ನು ಜಿಲ್ಲಾ ಆಶ್ಪತ್ರೆಗೆ ದಾಖಲಿಸಲಾಗಿದೆ.

ಮಡಿಕೇರಿಯಲ್ಲಿ ದಿಢೀರ್ ಮಳೆ:
ದ.ಕ.ಜಿಲ್ಲೆಯಲ್ಲಿ ಮಳೆಯಾಗಿದ್ದು, ಮಡಿಕೇರಿಯಲ್ಲಿ ಭರ್ಜರಿಯಾಗಿ ಸುರಿದಿದೆ. ತೀವ್ರಸ್ವರೂಪದಲ್ಲಿದ್ದ ಗಾಳಿ ಮಳೆ ಬಂದಿದ್ದು,ಹಳ್ಳ ಕೊಳ್ಳಗಳೆಲ್ಲವೂ ತುಂಬಿ ಹರಿದವು. ಶಿವಮೊಗ್ಗ, ಉತ್ತರಕನ್ನಡ, ರಾಜಧಾನಿಬೆಂಗಳೂರು, ರಾಮನಗರ, ಹಾಸನಸೇರಿದಂತೆ ಹಲವು ಜಿಲ್ಲೆಗಳಲ್ಲಿ ಸಾಧಾರಣಮಳೆಯಾಗಿದ್ದು, ತುಮಕೂರು ಜಿಲ್ಲೆಯಶಿರಾದಲ್ಲಿ ಉತ್ತಮವಾಗಿ ಸುರಿದಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ನನ್ನ ವಿರುದ್ಧ 100 ಎಫ್‌ಐಆರ್‌ ದಾಖಲಿಸಿ ಹೆದರಲ್ಲ, ಪ್ರತಿಯೊಂದೂ ನನಗೆ ಪದಕ': ರಾಹುಲ್ ಗಾಂಧಿ

CM ಆಗಲು ಸಿದ್ದರಾಮಯ್ಯ ವಿರುದ್ಧ ಡಿಕೆಶಿ ಸ್ಟಿಂಗ್ ಆಪರೇಷನ್; ಈಗ ಸಚಿವರ ವಿರುದ್ಧವೂ ಅದೇ ತಂತ್ರ: ಕುಮಾರಸ್ವಾಮಿ ಗಂಭೀರ ಆರೋಪ

SIR ವೇಳೆ ಡಿಲೀಟ್ ಆಗಿರುವ 13.3 ಕೋಟಿ ಮತದಾರರ ಪತ್ತೆಗೆ ಕಾಂಗ್ರೆಸ್‌ನಿಂದ ‘ಮತ ರಕ್ಷಕ’ರ ನೇಮಕ!

'ಸ್ಪಾದಲ್ಲಿ ಅಕ್ರಮ ಚಟುವಟಿಕೆ' ಎಂದು ಆರೋಪಿಸಿ ದಾಂಧಲೆ; 5 ಲಕ್ಷ ರೂ ಗೆ ಬೇಡಿಕೆ, 1 ಲಕ್ಷ ವಸೂಲಿ! ಶಾಕಿಂಗ್ ಘಟನೆ

'ಇತಿಹಾಸ ನಿಮ್ಮನ್ನು ಇನ್ನಷ್ಟು ಗೌರವದಿಂದ ನೆನಪಿಸಿಕೊಳ್ಳಲಿದೆ'; Agarkarಗೆ ಗೇಟ್ ಪಾಸ್`, ಗಂಭೀರ್‌ ಭಾವುಕ ಸಂದೇಶ!