ಬೆಂಗಳೂರು: ಅನಾರೋಗ್ಯದ ಕಾರಣ ಪತ್ನಿ ಅಕಾಲಿಕ ಸಾವನ್ನಪ್ಪಿದ್ದರಿಂದ ಖಿನ್ನತೆಗೊಳಗಾದ ಪತಿ 11 ತಿಂಗಳ ಮಗುವನ್ನು ಉಸಿರುಗಟ್ಟಿಸಿ ಕೊಲೆ ಮಾಡಿ ನಂತರ ತಾನೂ ಆತ್ಮಹತ್ಯೆಗೆ ಶರಣಾಗಿರುವ ಘಟನೆ ರಾಜಗೋಪಾಲನಗರದ ಚೌಡೇಶ್ವರಿನಗರದಲ್ಲಿ ಸೋಮವಾರ ನಡೆದಿದೆ.
ನಾಯಂಡಹಳ್ಳಿ ನಿವಾಸಿ ಗುರು (28) ಅವರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಳ್ಳುವುದಕ್ಕೂ ಮೊದಲು ಮಗಳು ರಿಷಿಕಾಳನ್ನು ಕೊಲೆ ಮಾಡಿದ್ದ ಎಂದು ಪೊಲೀಸರು ಹೇಳಿದ್ದಾರೆ.
ರಿಲಯನ್ಸ್ ಫ್ರೆಶ್‍ನಲ್ಲಿ ಕೆಲಸ ಮಾಡುತ್ತಿದ್ದ ಮಾಗಡಿ ಮೂಲದ ಗುರುಗೆ 3 ವರ್ಷದ ಹಿಂದೆ ವಿಜಯಲಕ್ಷ್ಮಿ ಎಂಬುವರ ಜತೆ ವಿವಾಹವಾಗಿತ್ತು. ಹೆರಿಗೆ ನಂತರ ಹೊಟ್ಟೆ ನೋವಿನಿಂದ ಬಳಲುತ್ತಿದ್ದ ಪತ್ನಿ ವಿಜಯಲಕ್ಷ್ಮಿ 11 ದಿನಗಳ ಹಿಂದೆ ಮೃತಪಟ್ಟಿದ್ದರು.