ರಾಘವೇಶ್ವರ ಭಾರತಿ 
ಜಿಲ್ಲಾ ಸುದ್ದಿ

2ನೇ ಪ್ರಕರಣದ ತನಿಖೆಯೂ ಚುರುಕು: ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ವಸ್ತ್ರಗಳು

ರಾಘವೇಶ್ವರ ಸ್ವಾಮೀಜಿ ವಿರುದ್ಧ ಯಕ್ಷಗಾನ ಕಲಾವಿದೆ ದಾಖಲಿಸಿರುವ ಅತ್ಯಾಚಾರ ಪ್ರಕರಣ ಸಂಬಂಧಿಸಿದಂತೆ ಸಿಐಡಿ ಅಧಿಕಾರಿಗಳು...

ಬೆಂಗಳೂರು: ರಾಘವೇಶ್ವರ ಸ್ವಾಮೀಜಿ ವಿರುದ್ಧ ಯಕ್ಷಗಾನ ಕಲಾವಿದೆ ದಾಖಲಿಸಿರುವ ಅತ್ಯಾಚಾರ ಪ್ರಕರಣ ಸಂಬಂಧಿಸಿದಂತೆ ಸಿಐಡಿ ಅಧಿಕಾರಿಗಳು ತನಿಖೆ ಚುರುಕುಗೊಳಿಸಿದ್ದು ದೂರುದಾರರು ನೀಡಿರುವ ವಸ್ತ್ರಗಳನ್ನು ಪರೀಕ್ಷೆಗಾಗಿ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ರವಾನಿಸಿದ್ದಾರೆ.

ಒಮ್ಮೆ ಸಿಐಡಿ ಅಧಿಕಾರಿಗಳ ಮುಂದೆ ಹಾಜರಾಗಿ ನೊಂದ ಮಹಿಳೆ ಹೇಳಿಕೆ ನೀಡಿದ್ದಾರೆ. ಅನಾರೋಗ್ಯ ಹಿನ್ನೆಲೆಯಲ್ಲಿ ಅವರು ಹೆಚ್ಚಿನ ವಿಚಾರಣೆಗೆ ಆಗಮಿಸಲಾಗುತ್ತಿಲ್ಲ ಎಂದಿದ್ದಾರೆ. ಆದರೆ, ತನಿಖೆಗೆ ಸಂಬಂಧಿಸಿದಂತೆ ಮಾಹಿತಿ ಕಲೆ ಹಾಕುವ ಪ್ರಕ್ರಿಯೆ ಆರಂಭವಾಗಿದ್ದು ಚಾತುರ್ಮಾಸ್ಯ ಸಂದರ್ಭದಲ್ಲಿ ಅತ್ಯಾಚಾರ ನಡೆದಿತ್ತು ಎಂದು ಹೇಳಿದ್ದರು.

ಹೀಗಾಗಿ, ಅತ್ಯಾಚಾರ ಪ್ರಕರಣ ಸಂಬಂಧ ಅವರು ನೀಡಿರುವ ವಸ್ತ್ರಗಳನ್ನು ಎಫ್ಎಸ್‍ಎಲ್‍ಗೆ ಕಳುಹಿಸಿಕೊಡಲಾಗಿದೆ. ಎಫ್ಎಸ್‍ಎಲ್ ವರದಿಯಲ್ಲಿ ಪುರುಷರ ಡಿಎನ್‍ಎ, ವೀರ್ಯ ಇರುವು  ದು ಕಂಡು ಬಂದರೆ ಅದನ್ನು ಖಚಿತ ಪಡಿಸಿಕೊಳ್ಳಲು ಆರೋಪಿ ಸ್ವಾಮೀಜಿಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲು ನೋಟಿಸ್ ನೀಡಲಾಗುವುದು ಎಂದು ಸಿಐಡಿ ಉನ್ನತ ಅಧಿಕಾರಿಗಳು ಹೇಳಿದರು.

ಎಫ್ಐಆರ್‍ನಲ್ಲಿ 2006ರಲ್ಲಿ ರಾಮಚಂದ್ರಾಪುರ ಮಠದಲ್ಲಿ ನಡೆದ ಚಾತುರ್ಮಾಸ್ಯ ಸಮಯದಲ್ಲಿ ರಾಘವೇಶ್ವರ ಸ್ವಾಮಿ ತಮ್ಮ ಖಾಸಗಿ ಕೊಠಡಿಗೆ ಕರೆದುಕೊಂಡು ಹೋಗಿ 15 ವಯಸ್ಸಿನವರಾಗಿದ್ದ ದೂರುದಾರರಿಗೆ `ನಿನ್ನ ಜಾತಕದಲ್ಲಿ ಕೆಲವು ದೋಷಗಳಿವೆ ಎಂದು ಹೇಳಿ ನಂಬಿಸಿ ಬಲವಂತ ಸಂಭೋಗ ಮಾಡಿದ್ದಾರೆ. ಬಳಿಕ ಮದುವೆ ಮಾಡಿಕೊಂಡು ಗಂಡನೊಂದಿಗೆ ವಾಸವಿದ್ದ ದೂರುದಾರರನ್ನು, 2012ರ ಆಗಸ್ಟ್ ತಿಂಗಳಲ್ಲಿ ಗಿರಿನಗರದ ಶ್ರೀರಾಮಚಂದ್ರಾಪುರ ಮಠಕ್ಕೆ ಕರೆಯಿಸಿ ಕೊಂಡು ಮತ್ತೆ ಅವರು ತಂಗಿದ್ದ ಕೊಠಡಿಯೊಳಗೆ ಇಚ್ಛೆಗೆ ವಿರುದ್ಧವಾಗಿ ಅತ್ಯಾಚಾರ ಮಾಡಿದ್ದಾರೆ.

ಅಲ್ಲದೇ 2014ರ ಸೆಪ್ಟೆಂಬರ್ 13ರಂದು ತಂದೆಯ ಮನೆಯಲ್ಲಿದ್ದ ದೂರುದಾರರನ್ನು ಅರುಣಶ್ಯಾಮ್, ಅನಂತಣ್ಣ, ರಮೇಶಣ್ಣ, ಸುಧಾಕರ, ಮಧುಕರ ಎಂಬುವರು ಬಲವಂತವಾಗಿ ತಾವು ತಂದಿದ್ದ ಇನ್ನೋವಾ ಕಾರಿನಲ್ಲಿ ಕೂರಿಸಿಕೊಂಡು ಕುಮುಟಾ ಸಮೀಪದ ಕೆಕ್ಕಾರು ಮಠಕ್ಕೆ ಅಪಹರಿಸಿಕೊಂಡು ಹೋಗಿದ್ದರು. ಅಲ್ಲಿ ಅಕ್ರಮ ಬಂಧನದಲ್ಲಿರಿಸಿಕೊಂಡು `ಮಠದ ಸ್ವಾಮಿ ಪರವಾಗಿ ಸಿಐಡಿ ಪೊಲೀಸರ ಬಳಿ ಸಾಕ್ಷ್ಯ ಹೇಳಬೇಕು' ಎಂದು ತಾಕೀತು ಮಾಡಿ ಬೆದರಿಕೆ ಹಾಕಿದ್ದರು.

ಎಲ್ಲೆಲ್ಲಿ ಅತ್ಯಾಚಾರ?
ವಿವೇಕಾನಂದ ಕೇಂದ್ರ ನಿತ್ಯ ಭವನ, ಜೋಧಪುರ
ಗಿರಿನಗರದ ರಾಮಚಂದ್ರಾಪುರ ಮಠ
ಹೊರನಾಡು, ಅನ್ನಪೂರ್ಣೇಶ್ವರಿ ದೇವಾಲಯದ ಅರ್ಚಕರ ಮನೆ
ಆರ್.ಟಿ. ನಗರದ ಕುಕ್ಕೂರು ರಾಮಚಂದ್ರರಾವ್ ಎಂಬುವರ ಮನೆ
ಪರಮಾರ್ಥ ನಿಕೇತನ ಆಶ್ರಮ, ಹೃಷಿಕೇಶ
ಭಕ್ತ ಕೇಜ್ರಿವಾಲ್ ಮನೆ, ದೆಹಲಿ
ಪ್ರಗತಿ ವಿದ್ಯಾನಿಕೇತನ, ಮುರೂರು
ಕಲಬುರಗಿ ತ್ರಿವಿಕ್ರಮ ಮಠ
ಭಾರತಿ ಸಮೂಹ ವಿದ್ಯಾಸಂಸ್ಥೆಯ ಕೊಠಡಿ, ಮಂಗಳೂರು
 ಶಿವರಾತ್ರಿ ದಿನ ಗೋಕರ್ಣ ಮಠ
ಪುತ್ತೂರು, ಸಿದ್ದಾಪುರ ಮಠ
ಸಿಗಂದೂರಿನಲ್ಲಿ ಅರ್ಚಕರೊಬ್ಬರ ಮನೆ
ಮುಡಿಪುನಲ್ಲಿ ಅರ್ಚಕರ ಮನೆ
 ಗಿರಿನಗರ ಮಠ
ಅಂಬಾಭವಾನಿ ಯಾತ್ರಿ ನಿವಾಸ್ ಅತಿಥಿ ಗೃಹ, ಶಿರಸಿ
ಗಿರಿನಗರ ಮಠ, ಬೆಂಗಳೂರು
 ಕೆಕ್ಕಾರು ರಾಮಚಂದ್ರರಾವ್ ಮನೆ
 ತಿರುಪತಿ, ಮೈಸೂರು

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ-ಭಗವಂತನ ಸಂಬಂಧ ಇದೆ; RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿ.ಕೆ ಶಿವಕುಮಾರ್; Video

ಭಾರತದ ಮೇಲೆ ಶೇ. 50 ರಷ್ಟು ಸುಂಕ ನಾಳೆ ಜಾರಿ, ಅಮೆರಿಕ ಕರಡು ಸೂಚನೆ; ಔಷಧ, ಎಲೆಕ್ಟ್ರಾನಿಕ್ಸ್‌ ವಸ್ತುಗಳಿಗೆ ವಿನಾಯಿತಿ

Ragigudda Metro ಮೆಟ್ರೋ ನಿಲ್ದಾಣದಲ್ಲಿ ತಪ್ಪಿದ ದುರಂತ, ಆಯತಪ್ಪಿ ಹಳಿ ಮೇಲೆ ಬಿದ್ದ ಸಿಬ್ಬಂದಿ!... ಮುಂದೇನಾಯ್ತು? Video

ಪದಕ ಹಾಕಿಸಿಕೊಳ್ಳಲು ನಿರಾಕರಿಸಿದ DMK ಸಚಿವನ ಪುತ್ರ, BJP ನಾಯಕ Annamalai ಹೇಳಿದ್ದೇನು? Video

'ಶಾಂತಿ ಬೇಕಾದರೆ ಯುದ್ಧಕ್ಕೆ ಸಿದ್ಧರಾಗಿ.. Sudarshan Chakra ವಾಯುರಕ್ಷಣಾ ವ್ಯವಸ್ಥೆಗೆ ಮೂರೂ ಸೇನೆಗಳ ಬೃಹತ್ ಪ್ರಯತ್ನ ಬೇಕು': CDS Chauhan

SCROLL FOR NEXT