ಬೆಂಗಳೂರು: ಮಂಜೂರಾದ ನಿವೇಶನ ನೀಡಲು ಸತಾಯಿಸುತ್ತಿರುವ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಬಿಡಿಎ) ಅಧಿಕಾರಿಗಳನ್ನು ನ್ಯಾಯಮೂರ್ತಿ ರಾಮಮೋಹನ ರೆಡ್ಡಿ ಮಂಗಳವಾರ ತರಾಟೆಗೆ ತೆಗೆದುಕೊಂಡರು.
`ಬಿಡಿಎನಲ್ಲಿ ಕೆಲಸಕ್ಕೆ ಬಾರದ ಎಂಜಿನಿರ್‍ಗಳೇ ಇದ್ದು, ಅರ್ಜಿದಾರರ ನ್ನು ಅಲೆದಾಡಿಸ್ತಾರಲ್ಲಾ... ಏನಿದು?' ಎಂದು ಬಿಡಿಎ ಪರ ವಕೀಲರ ನ್ನು ಪ್ರಶ್ನಿಸಿದರು. ಅರ್ಕಾವತಿ ಲೇ ಔಟ್‍ನಲ್ಲಿ 2006ರಲ್ಲಿ ಶಾಂತಕುಮಾರ್ ಎಂಬುವವರಿಗೆ ಸಾಮಾನ್ಯ ವರ್ಗದ ಅಡಿಯಲ್ಲಿ ನಿವೇಶನ ಮಂಜೂರು ಮಾಡಲಾಗಿತ್ತು. ಆದರೆ, ಬೊಂಡು ರಾಮಸ್ವಾಮಿ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ನೀಡಿದ ತೀರ್ಪಿನ ಅನ್ವಯ ಜಮೀನು ನೀಡಿದವರಿಗೂ 4060 ರ ಅನುಪಾತದಲ್ಲಿ ನಿವೇಶನ ನೀಡಬೇಕೆಂಬ ಕಾರಣ ನೀಡಿ ಶಾಂತಕುಮಾರ್ ಅವರಿಗೆ ನೀಡಲಾಗಿದ್ದ ನಿವೇಶನವನ್ನು ಬಿಡಿಎ ವಾಪಸ್ ಪಡೆಯಿತು.