ಬಳ್ಳಾರಿ: ಎತ್ತಿನಗಾಡಿಗೆ ಲಾರಿ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಮೂವರ ಮೃತಪಟ್ಟಿರುವ ಘಟನೆ ಬುಧವಾರ ಬೆಳಿಗ್ಗೆ ಬಳ್ಳಾರಿ ಸಿಂಧಗೇರಿ ಬಳಿ ನಡೆದಿದೆ.
ಈ ಎತ್ತಿನ ಗಾಡಿಯಲ್ಲಿ ಜಮೀನಿಗೆ ತೆರಳುತ್ತಿದ್ದ ವೇಳೆ ಲಾರಿ ಡಿಕ್ಕಿ ಹೊಡೆದಿದೆ. ಘಟನೆಯಲ್ಲಿ ಗಾಡಿಯಲ್ಲಿ ಒಂದೇ ಕುಟುಂಬದ ಮೂವರು ಸದ್ಯಸರು ಸಾವನ್ನಪ್ಪಿದ್ದಾರೆ.
ನಾಗಮ್ಮ(40) ವಿಶಾಲಾಕ್ಷಿ(20) ಬಸವ(30) ಮೃತಪಟ್ಟವರು. ಕುರುಗೋಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಲಾರಿ ಚಾಲಕನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.