ಇನ್ವೆಸ್ಟ್ ಕರ್ನಾಟಕದ ಚಿಹ್ನೆ 
ಜಿಲ್ಲಾ ಸುದ್ದಿ

ಮೇಕ್ ಇನ್ ಇಂಡಿಯಾ: ಕರ್ನಾಟಕದಲ್ಲಿ 9.7 ಲಕ್ಷ ಕೋಟಿ ರೂಪಾಯಿ ಹೂಡಿಕೆ

ಯಶಸ್ಸು ಗಳಿಸಿದ ಇನ್ವೆಸ್ಟ್ ಕರ್ನಾಟಕ ಸಮ್ಮೇಳನ ಕಳೆದು ಕೇವಲ ಹದಿನೈದು ದಿನಗಳಲ್ಲಿ ರಾಜ್ಯಕ್ಕೆ ಸುಮಾರು 1.33 ಲಕ್ಷ ಕೋಟಿ ರೂಪಾಯಿ ಬಂಡವಾಳ...

ಬೆಂಗಳೂರು: ಯಶಸ್ಸು ಗಳಿಸಿದ ಇನ್ವೆಸ್ಟ್ ಕರ್ನಾಟಕ ಸಮ್ಮೇಳನ ಕಳೆದು ಕೇವಲ ಹದಿನೈದು ದಿನಗಳಲ್ಲಿ ರಾಜ್ಯಕ್ಕೆ ಸುಮಾರು 1.33 ಲಕ್ಷ ಕೋಟಿ ರೂಪಾಯಿ ಬಂಡವಾಳ ಹೂಡಿಕೆಯ ಪ್ರಸ್ತಾವನೆ ಬಂದಿದ್ದು, ಅನೇಕ ಉದ್ಯಮಿಗಳನ್ನು ಇಲ್ಲಿ ಹೂಡಿಕೆ ಮಾಡಲು ಕೈ ಬೀಸಿ ಕರೆಯುತ್ತಿದೆ. ಮುಂಬೈನಲ್ಲಿ ನಡೆಯುತ್ತಿರುವ ಮೇಕ್ ಇನ್ ಇಂಡಿಯಾ ಸಪ್ತಾಹದಲ್ಲಿ ಕರ್ನಾಟಕದ ಸೆಮಿನಾರ್ ನಲ್ಲಿ ಇಂಧನ ವಲಯ ಸೇರಿದಂತೆ ಕೈಗಾರಿಕೋದ್ಯಮಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಈ ಕುರಿತು ಸಮ್ಮೇಳನದಲ್ಲಿ ಕೈಗಾರಿಕಾ ಸಚಿವ ಆರ್.ವಿ.ದೇಶಪಾಂಡೆ ಮಾಹಿತಿ ನೀಡಿದರು.

ಫ್ರಾನ್ಸ್ ನ ಟರ್ ಕೊವಾಕ್ಸ್ ಸಿಸ್ಟಮ್ಸ್ ಗ್ರೂಪ್ ಎಂಬ ಕಂಪೆನಿ ಸಾಗರ ಆಧಾರಿತ ನವೀಕರಣ ಇಂಧನ ಮೂಲ ಯೋಜನೆಗೆ ಸುಮಾರು 2 ಸಾವಿರದ 284 ಕೋಟಿ ರೂಪಾಯಿ ಹೂಡಿಕೆ ಮಾಡಲು ಆಸಕ್ತಿ ತಳೆದಿದೆ. ಅಮೆರಿಕ ಮೂಲದ ಮೆಕ್ ಕಾರ್ಮಿಕ್ ಕಂಪೆನಿ, 150 ಕೋಟಿ ರೂಪಾಯಿ ವೆಚ್ಚದಲ್ಲಿ ಆಹಾರ ಸಂಸ್ಕರಣಾ ಘಟಕವನ್ನು ಸ್ಥಾಪಿಸಲು, ಗ್ಲೋಬಲ್ ಮೋಡ್ ಅಂಡ್ ಅಕ್ಸೆಸರೀಸ್ ಪ್ರೈ.ಲಿಮಿಟೆಡ್ 25 ಕೋಟಿ ರೂಪಾಯಿ ಹೂಡಿಕೆಯಲ್ಲಿ ಉತ್ಪಾದಕ ಘಟಕವನ್ನು ಸ್ಥಾಪಿಸಿದ್ದು, ಸುಮಾರು 2 ಸಾವಿರ ಮಂದಿಗೆ ಉದ್ಯೋಗ ನೀಡಲಿದೆ.

ಸೋಲಾರ್ ಕ್ಷೇತ್ರದಲ್ಲಿ ಭಾರೀ ಹೂಡಿಕೆ ಮಾಡಲು ಕೈಗಾರಿಕೋದ್ಯಮಿಗಳು ಮುಂದೆ ಬಂದಿದ್ದು, 6 ಸಾವಿರ ಕೋಟಿ ರೂಪಾಯಿ ಹೂಡಿಕೆಯಲ್ಲಿ ಸೋಲಾರ್ ಕೋಶ ಘಟಕವನ್ನು ಸ್ಥಾಪಿಸಲು ಮತ್ತು  ಬೀದಿ ದೀಪ, ಐಟಿ ಭದ್ರತೆ, ಕಣ್ಗಾವಲು, ಜಿಪಿಎಸ್ ಗೆ ಬೇಕಾದ ಉತ್ಪಾದನಾ ಘಟಕಗಳನ್ನು ಸ್ಥಾಪಿಸುವ ಪರ್ಟ್ ಟೆಲಿಕಾಂ ಸುಮಾರು ಸಾವಿರದ 250 ಕೋಟಿ ರೂಪಾಯಿ ಬಂಡವಾಳ ಹೂಡಿಕೆ ಮಾಡಲಿವೆ ಎಂದು ದೇಶಪಾಂಡೆ ತಿಳಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಸೌಜನ್ಯ ಕೇಸ್‌ ಮರು ತನಿಖೆಗೆ ಸುಪ್ರೀಂ ಆದೇಶ: ಶ್ರೀ ಕ್ಷೇತ್ರ ಧರ್ಮಸ್ಥಳ ಹೇಳಿದ್ದು ಏನು?

ಬೆಳಗಾವಿ: 6 ಮಂದಿ ಸಾವಿನ ಪ್ರಕರಣಕ್ಕೆ ದೊಡ್ಡ ಟ್ವಿಸ್ಟ್; ವ್ಯಕ್ತಿ ಕೈಯಲ್ಲಿ ಬಕೆಟ್; CCTVಯಲ್ಲಿ ಸಿಕ್ತು ಸ್ಫೋಟಕ ತಿರುವು!

ಮಾಗಡಿ: ಚಕ್ರಬಾವಿ ಮರುಳಸಿದ್ದೇಶ್ವರ ಜಂಗಮ ಮಠದ ಸ್ವಾಮೀಜಿ ಲಿಂಗೈಕ್ಯ

ಏಷ್ಯನ್ ಗೇಮ್ಸ್ 2026: ಎರಡನೇ ದಿನ ನಾಲ್ಕು ಪದಕ ಗೆದ್ದ ಭಾರತ, MMA ಸ್ಪರ್ಧೆಯಲ್ಲಿ ಕಂಚು ಗೆದ್ದು, ಇತಿಹಾಸ ಬರೆದ ಸುಚಿಕಾ ತರಿಯಾಲ್!

ರಾಮ ಮಂದಿರದಲ್ಲಿ ಕಳ್ಳತನದ 105 ಘಟನೆ ಸಿಸಿಟಿವಿಯಲ್ಲಿ ಪತ್ತೆ: ಸುಪ್ರೀಂ ಕೋರ್ಟ್‌ಗೆ ಎಸ್‌ಐಟಿ ಮಾಹಿತಿ