ಮಾಗಡಿ: 2016ನೇ ಹೊಸ ವರ್ಷ ಅಚರಣೆ ಮಾಡಲು ಗೆಳಯರ ಜೊತೆ ಹೋಗಿದ್ದ ಯುವಕ ಬೈಕ್ ಆಯಾ ತಪ್ಪಿ ಕಂಬಕ್ಕೆ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೆ ಮೃತಪಟ್ಟ ಘಟನೆ ಶುಕ್ರವಾರ ಮುಂಜಾನೆ ಮಾಗಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಪಟ್ಟಣದ ತಿರುಮಲೆ ರಾಜಣ್ಣನ ಮಗ ಕಿರಣ್(26) ಮೃತಪಟ್ಟ ಯುವಕ ಎಂದು ಗುರುತಿಸಲಾಗಿದೆ. ಈ ಸಂಬಂಧ ಮಾಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.