ಜಿಲ್ಲಾ ಸುದ್ದಿ

ಆಸ್ತಿಗಾಗಿ ತಮ್ಮನಿಂದ ಅಣ್ಣನ ಕೊಲೆ

Mainashree
ಬೆಂಗಳೂರು: ಆಸ್ತಿ ವಿಚಾರ ಸಂಬಂಧ ವ್ಯಕ್ತಿಯೊಬ್ಬ ತನ್ನ ಅಣ್ಣಿನನ್ನೇ ಕೊಲೆ ಮಾಡಿರುವ ಘಟನೆ ರಾಜಗೋಪಾಲ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಗುರುವಾರ ನಡೆದಿದೆ.
ಜೆಕೆಡಬ್ಲ್ಯೂ ನಿವಾಸಿ ನರಸಿಂಹ(28) ಮೃತಪಟ್ಟವರು. ರಾಜಗೋಪಾಲನಗರ ನಿವಾಸಿ  ರಾಜಗೋಪಾಲ ನಗರ ನಿವಾಸಿ ಚಂದ್ರ ಕೊಲೆ ಮಾಡಿದವ. ರೌಡಿಶೀಟರ್ ಮೃತ ನರಸಿಂಹ ಮೂರು ವರ್ಷಗಳ ಹಿಂದೆ ಪ್ರೇಮ ವಿವಾಹವಾಗಿ ಪತ್ನಿಯೊಂದಿಗೆ ವಾಸವಿದ್ದ.
ಆದರೆ, ತಾಯಿ ಮತ್ತು ತಮ್ಮ ವಾಸವಿದ್ದ ಮನೆಯನ್ನು ಮಾರಿ ಬರುವ ಹಣದಲ್ಲಿ ಪಾಲು ನೀಡುವಂತೆ ಆಗಾಗ ತಾಯಿಯೊಂದಿಗೆ ಜಗಳ ನಡೆಸುತ್ತಿದ್ದ. ಆದರೆ, ತಾಯಿ ಮಾತ್ರ ಮನೆ ಮಾರಾಟ ಮಾಡಲು ನಿರಾಕರಿಸುತ್ತಿದ್ದರು. ಆಧರೂ ಜಗಳ ಏರ್ಪಟ್ಟಾಗ ತಾಯಿ ಎಂಬುದನ್ನು ಲೆಕ್ಕಿಸದೆ ಹೀನಾಯವಾಗಿ ನಿಂದಿಸುತ್ತಿದ್ದ. 
ಈತನ ಜಗಳದಿಂದ ರೋಸಿ ಹೋಗಿದ್ದ ಆರೋಪಿ ಚಂದ್ರ, ಗುರುವಾರ ರಾತ್ರಿ ಹೊಸ ವರ್ಷದ ನೆಪದಲ್ಲಿ ಅಣ್ಣ ನರಸಿಂಹನನ್ನು ಮನೆಯ ಬಳಿ ಕರೆಸಿಕೊಂಡು ಕೊಲೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದರು.
SCROLL FOR NEXT