ಬೆಂಗಳೂರು : ಮಲ್ಲೇಶ್ವರಂನ ಸ್ವಸ್ತಿಕ ಬಳಿಯ ಮೆಟ್ರೋ ಸ್ಟೇಷನ್ ಅನ್ನು ಮಂತ್ರಿ ಇನ್ಫ್ರಾಸ್ಟಕ್ಚರ್ ಕಂಪೆನಿಯ ಸಹಭಾಗಿತ್ವದಲ್ಲಿ ನಿರ್ಮಾಣ ಮಾಡುವುದಕ್ಕೆ
ಬೆಂಗಳೂರು ಮೆಟ್ರೋ ರೈಲು ಕಾರ್ಪೋರೇಷನ್ (ಬಿಎಂಆರ್‍ಸಿಎಲ್) ಮಾಡಿಕೊಂಡಿದ್ದ ಒಪ್ಪಂದವನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ಸೋಮವಾರ ಹೈಕೋರ್ಟ್ ವಜಾಗೊಳಿಸಿದೆ.
ಬೆಂಗಳೂರು ನಗರದ ನಿವಾಸಿಗಳ ಸಂಘ, ಸಿಟಿಜನ್ ಆಕ್ಷನ್ ಫೋರಂ ಮತ್ತು ನಮ್ಮ ಬೆಂಗಳೂರು ಪ್ರತಿಷ್ಠಾನ ಸೇರಿದಂತೆ ವಿವಿಧ ಸಂಸ್ಥೆಗಳು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದವು. ಸರ್ಕಾರದ ಅಂಗ ಸಂಸ್ಥೆಯಾದ ಮೂಲಭೂತ ಅಭಿವೃದಿಟಛಿ ನಿಗಮ(ಐಡೆಕ್ )ನೀಡಿರುವ ವರದಿಯಂತೆ ಈ ಒಪ್ಪಂದದ ಪ್ರಕಾರ ಮಂತ್ರಿ ಮತ್ತು ಮೆಟ್ರೋ ಸಂಸ್ಥೆಗಳಿಬ್ಬರಿಗೂ ಲಾಭ ಸಿಗಲಿದೆ ಎಂದು ತಿಳಿಸಿದೆ. ಹೀಗಿರುವಾಗ ನಷ್ಟದ ಪ್ರಶ್ನೆ ಉದ್ಭವಿಸುವುದಿಲ್ಲ ಎಂದು ಅಭಿಪ್ರಾಯ ಪಟ್ಟಿರುವ ಹಂಗಾಮಿ ಮುಖ್ಯನ್ಯಾ.ಎಸ್.ಕೆ.ಮುಖರ್ಜಿ ಮತ್ತು ನ್ಯಾ.ರವಿ ಮಳಿಮಠ್ ಅವರಿದ್ದ ನ್ಯಾಯಪೀಠ ಅರ್ಜಿ ವಜಾಗೊಳಿಸಿ ಆದೇಶ ಹೊರಡಿಸಿದೆ.
ಮಂತ್ರಿ ಮಾಲ್ ನಿರ್ಮಿಸಿರುವ ಜಮೀನನ್ನು ಕೆಐಎಡಿಬಿ ಸ್ವಾಧೀನ ಪಡಿಸಿಕೊಂಡಿತ್ತು. ಒಮ್ಮೆ ವಶಕ್ಕೆ ಪಡೆದಿದ್ದ ಜಮೀನನ್ನು ಮತ್ತೊಬ್ಬರಿಗೆ ನೀಡುವುದಕ್ಕೆ ಕೆಐಎಡಿಬಿ ಕಾಯಿದೆಯಲ್ಲಿ ಅವಕಾಶವಿಲ್ಲ. ಆದರೂ, ಬಿಎಂಆರ್‍ಸಿಎಲ್ ಸಂಸ್ಥೆ ಮಂತ್ರಿ ಡೆವಲಪ್ ರ್ಸ್‍ನೊಂದಿಗೆ ಒಪ್ಪಂದ ಮಾಡಿಕೊಂಡಿದ್ದರಿಂದ ಅರ್ಜಿ ಸಲ್ಲಿಸಲಾಗಿತ್ತು.