ಜಿಲ್ಲಾ ಸುದ್ದಿ

ಬೆಂಗಳೂರಿನ ಹೋಟೆಲ್ ಗಳಲ್ಲಿ ಕಾಫಿ/ಟೀ ದರ ಏರಿಕೆ

Shilpa D

ಬೆಂಗಳೂರು: ಕೆಎಂಎಫ್ ಹಾಲಿನ ದರ ಏರಿಸಿದ ಬೆನ್ನಲ್ಲೇ ಹೋಟೆಲ್‌ಗಳಲ್ಲಿ ಮಂಗಳವಾರದಿಂದಲೇ ಅನ್ವಯವಾಗುವಂತೆ ಕಾಫಿ ಮತ್ತು ಟೀ ದರ ತಲಾ 2 ರೂ. ಏರಿಕೆಯಾಗಿದೆ. ಗುಣಮಟ್ಟದ ಆಧಾರದ ಮೇಲೆ ಒಂದು ಕಾಫಿ /ಟೀ ದರ 16 ರೂ. ನಿಂದ 22 ರೂ.ವರೆಗೆ ಇತ್ತು. ಇದನ್ನು 18 ರೂ.ನಿಂದ 24 ರೂ.ವರೆಗೆ ಏರಿಸಲಾಗಿದೆ.

ಪ್ರತಿ ಲೀಟರ್ ಹಾಲಿಗೆ 4 ರೂ. ಏರಿಕೆಯಾಗಿದೆ. ಜತೆಗೆ ಕಾಫಿ ಪುಡಿ ದರದಲ್ಲೂ ಹೆಚ್ಚಳವಾಗಿದೆ. ಈ ಹಿನ್ನೆಲೆಯಲ್ಲಿ ಹೋಟೆಲ್ ಮಾಲೀಕರು ಈ ಹೊರೆ ತಪ್ಪಿಸಿಕೊಳ್ಳಲು ಕಾಫಿ-ಟೀ ದರವನ್ನು ಹೆಚ್ಚು ಮಾಡಿದ್ದಾರೆ.

ಸದ್ಯ ಒಂದು ಕಾಫಿಗೆ 20 ರೂ. ದರ ವಿಧಿಸಲಾಗುತ್ತಿತ್ತು. ಬುಧವಾರದಿಂದ 22 ರೂ.ಗೆ ಹೆಚ್ಚಿಸಲಾಗುವುದು. ಇದೀಗ ಹಾಲಿನ ದರ ಏರಿಕೆಯಾದದ್ದು ನಿಜ. ಆದರೆ ನಾವು ಅದೊಂದನ್ನೇ ಗಮನದಲ್ಲಿಟ್ಟುಕೊಂಡು ದರ ಹೆಚ್ಚಿಸುತ್ತಿಲ್ಲ. ಕಾಫಿ ಪುಡಿ, ಸಕ್ಕರೆ, ಗ್ಯಾಸ್ ಹೀಗೆ ಕಾಫಿ ತಯಾರಿಗೆ ಬೇಕಾದ ಬಹುತೇಕ ಸಾಮಗ್ರಿಗಳ ದರವೂ ಏರಿಕೆಯಾಗಿದೆ. ಅದೆಲ್ಲವನ್ನೂ ಗಮನದಲ್ಲಿಟ್ಟುಕೊಂಡು ದರ ಹೆಚ್ಚಿಸಲಾಗಿದೆ ಎನ್ನುತ್ತಾರೆ ಹೋಟೆಲ್ ಮಾಲೀಕರು.

SCROLL FOR NEXT