ಸಾಂದರ್ಭಿಕ ಚಿತ್ರ 
ಜಿಲ್ಲಾ ಸುದ್ದಿ

ಭೂಗತ ಪಾತಕಿ ವಿಕ್ಕಿ ಶೆಟ್ಟಿ ಎಂಟು ಸಹಚರರ ಸೆರೆ

ಎರಡು ಪ್ರತ್ಯೇಕ ಪ್ರಕರಣಗಳಿಗೆ ಸಂಬಂಧಿಸಿದಂತೆ ಭೂಗತ ಪಾತಕಿ ವಿಕ್ಕಿ ಶೆಟ್ಟಿಯ 8 ಮಂದಿ ಸಹಚರರನ್ನು ನಗರದ ಮರಕ್ಕಡದಲ್ಲಿ ಮಂಗಳೂರು ನಗರ ಅಪರಾಧ...

ಮಂಗಳೂರು: ಎರಡು ಪ್ರತ್ಯೇಕ ಪ್ರಕರಣಗಳಿಗೆ ಸಂಬಂಧಿಸಿದಂತೆ ಭೂಗತ ಪಾತಕಿ ವಿಕ್ಕಿ ಶೆಟ್ಟಿಯ 8 ಮಂದಿ ಸಹಚರರನ್ನು ನಗರದ ಮರಕ್ಕಡದಲ್ಲಿ ಮಂಗಳೂರು ನಗರ ಅಪರಾಧ ಪತ್ತೆ ವಿಭಾಗದ ಪೊಲೀಸರು ಬಂಧಿಸಿದ್ದಾರೆ.

ದರೋಡೆಗೆ ಹೊಂಚು ಹಾಕಿದ್ದ ಆರು ಮಂದಿ ಹಾಗೂ ಇಬ್ಬರ ಅನುಮಾನಾಸ್ಪದ ನಡೆಯಿಂದ ವಶಕ್ಕೆ ಪಡೆಯಲಾಗಿದೆ. ಬಂಧಿತರಿಂದ ಮಾರಕಾಸ್ತ್ರ ಹಾಗೂ ವಾಹನಗಳನ್ನು ವಶಪಡಿಸಿ ಕೊಳ್ಳಲಾಗಿದೆ ಎಂದು ನಗರ ಪೊಲೀಸ್ ಕಮಿಷನರ್ ಎಂ.ಚಂದ್ರಶೇಖರ್ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಆರೋಪಿ ಗೌರೀಶ್ ಯಾನೆ ಸುಜಿತ್ ಯಾನೆ ಗೌರಿ (26), ಬಿಜೈ ಜಯೇಶ್ ಯಾನೆ ಸಚ್ಚು (23)  ಶೆಟ್ಟಿ ಯಾನೆ ಪಿಲಿ ನವೀನ್ (34) ಆಕಾಶಭವನ್, ಪ್ರವೀಣ್ ಕುಮಾರ್ ಯಾನೆ ಕೆ.ಪಿ.ಪ್ರವೀಣ್ (26) ಗೋಳ್ತಮಜಲು, ಹರ್ಷಿತ್ (22) ಕುಲಶೇಖರ ಬಂಧಿತರು.

ಅನುಮಾನಾಸ್ಪದವಾಗಿ ತಿರುಗಾಡುತ್ತಿದ್ದ ಆರೋಪದಲ್ಲಿ  ಆರೋಪಿ ಸಚಿನ್ ಗೌಡ ಪುತ್ತೂರು ಹಾಗೂ ಪವನ್ ಶೆಟ್ಟಿ ಎಂಬುವರನ್ನು ಬಿಜೈನಲ್ಲಿ ಬಂಧಿಸಲಾಗಿದೆ.  ಬಂಧಿತರೆಲ್ಲರೂ ಭೂಗತ ಪಾತಕಿ ವಿಕ್ಕಿಯಾನೆ ಶೆಟ್ಟಿ ಯಾನೆ ಬಾಲಕೃಷ್ಣ ಶೆಟ್ಟಿಯ ಸಹಚರರು. ಬಂಧಿತರಿಗೆ  ಇನ್ನೊಬ್ಬ ಪಾತಕಿ ಆಕಾಶಭವನ ಶರಣ್ ಜತೆ ಸಂಪರ್ಕ ಇರುವ ಬಗ್ಗೆ ವಿಚಾರಣೆ ನಡೆಸಲಾಗುತ್ತಿದೆ ಎಂದು ನಗರ ಪೊಲೀಸರು ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Cockroach Janta Partyಗೆ ಬಿಗ್ ಶಾಕ್: ಜಂತರ್ ಮಂತರ್ ಪ್ರತಿಭಟನೆಗೆ ಅನುಮತಿ ನಿರಾಕರಿಸಿದ ದೆಹಲಿ ಪೊಲೀಸರು, 57 ಮೆಟ್ರೋ ನಿಲ್ದಾಣಗಳು ಬಂದ್..!

ಕನ್ನಡಿಗರ ಆತ್ಮೀಯತೆ, ವಾತ್ಸಲ್ಯ, ದಯೆ ನಿಜಕ್ಕೂ ನನ್ನ....: ಬೆಂಗಳೂರು ಭೇಟಿ ಬಗ್ಗೆ ಅಭಿಜೀತ್ ದೀಪ್ಕೆ ಭಾವುಕ ಪೋಸ್ಟ್!

ಕೇಂದ್ರ ಸಚಿವ, ಬಿಜೆಪಿ ನಾಯಕನಿಂದ ಸ್ಟಿಂಗ್ ಆಪರೇಷನ್‌ಗೆ ಸಂಚು: Congress ಶಾಸಕ ಗಣಿಗ ರವಿ ಸ್ಫೋಟಕ ಆರೋಪ; Video

ಧಾರವಾಡ: ಕಾರು - ಕ್ಯಾಂಟರ್ ಮುಖಾಮುಖಿ ಡಿಕ್ಕಿ; ಭೀಕರ ಅಪಘಾತದಲ್ಲಿ ನಾಲ್ವರು ಸ್ಥಳದಲ್ಲೇ ಸಾವು!

ಉಪ ಚುನಾವಣೆ ಫಲಿತಾಂಶ| ಅಸ್ಸಾಂ, ಪ.ಬಂಗಾಳ, ತಮಿಳುನಾಡು, ಪುದುಚೇರಿಯ ಆರು ಕ್ಷೇತ್ರಗಳಲ್ಲಿ ಮತ ಎಣಿಕೆ ಪ್ರಗತಿಯಲ್ಲಿ