ಮಲೆನಾಡ ಗಾಂಧಿ ಎಚ್ .ಜಿ. ಗೋವಿಂದೇಗೌಡ ಅಂತ್ಯಕ್ರಿಯೆ
ಮಲೆನಾಡಗಾಂಧಿ ಮಾಜಿ ಸಚಿವ ಎಚ್ .ಜಿ. ಗೋವಿಂದೇಗೌಡರ ಅಂತ್ಯಕ್ರಿಯೆ ಗುರುವಾರ ಸಂಜೆ ಅವರ ಮಣಿಪುರ ಎಸ್ಟೇಟ್‍ನಲ್ಲಿ ನಡೆಯಿತು...
ಮಲೆನಾಡಗಾಂಧಿ ಮಾಜಿ ಸಚಿವ ಎಚ್ .ಜಿ. ಗೋವಿಂದೇಗೌಡರ ಅಂತ್ಯಕ್ರಿಯೆ ಗುರುವಾರ ಸಂಜೆ ಅವರ ಮಣಿಪುರ ಎಸ್ಟೇಟ್‍ನಲ್ಲಿ ನಡೆಯಿತು. ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿ ಹಲವು ಗಣ್ಯರು ಅಂತಿಮನಮನ ಸಲ್ಲಿಸಿದರು. ಕೊಪ್ಪ ಪಟ್ಟಣದ ಸಮೀಪದಲ್ಲಿರುವ ಮಣಿಪುರ ಎಸ್ಟೇಟ್‍ನ ಮನೆಯ ಅನತಿ ದೂರದಲ್ಲಿ ಗೋವಿಂದೇಗೌಡರ ಪುತ್ರ ವೆಂಕಟೇಶ್ ಚಿತೆಗೆ ಸಂಜೆ 5.30ಕ್ಕೆ ಅಗ್ನಿ ಸ್ಪರ್ಶ ಮಾಡಿದರು.
ಈ ಸಂದರ್ಭದಲ್ಲಿ ಕುಟುಂಬದ ಹತ್ತಿರದ ಸಂಬಂಧಿ ಮಾಜಿ ಸಚಿವ ಬಿ.ಎಲ್. ಶಂಕರ್, ಹೆಣ್ಣು ಮಕ್ಕಳು, ಅಳಿಯಂದಿರು ಹಾಗೂ ಸಂಬಂಧಿಕರು ಹಾಜರಿದ್ದರು. ಸಿಎಂ ಸಿದ್ದರಾಮಯ್ಯ ಭೇಟಿ ನೀಡುವ ಸುದ್ದಿ ತಿಳಿಯುತ್ತಿದ್ದಂತೆ ಕೊಪ್ಪದಲ್ಲಿ ಹೆಚ್ಚಿನ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.
ಪಟ್ಟಣದಲ್ಲಿ ವರ್ತಕರು ಸ್ವಯಂ ಪ್ರೇರಿತವಾಗಿ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿ ಗೌರವ ಸಲ್ಲಿಸಿದರು. ಆದರೆ, ಬಸ್‍ಗಳು, ಆಟೋಗಳ ಸಂಚಾರ ಎಂದಿನಂತೆ ಇತ್ತಾದರೂ ವಿರಳವಾಗಿತ್ತು. ಔಷಧಿ ಅಂಗಡಿಗಳನ್ನು ಹೊರತುಪಡಿಸಿ, ಇತರೆ ಎಲ್ಲಾ ಅಂಗಡಿಗಳು ಬಂದ್ ಆಗಿದ್ದವು. ಶೃಂಗೇರಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ ಶೃಂಗೇರಿ, ಎನ್.ಆರ್ .ಪುರ ಹಾಗೂ ಕೊಪ್ಪ ತಾಲೂಕುಗಳ ಶಾಲಾ, ಕಾಲೇಜುಗಳಿಗೆ ಶಿಕ್ಷಣ ಇಲಾಖೆ ರಜೆ ಘೋಷಣೆ ಮಾಡಿತ್ತು.