ಸಾಂದರ್ಭಿಕ ಚಿತ್ರ 
ಜಿಲ್ಲಾ ಸುದ್ದಿ

ದುಡ್ಡಿಗಾಗಿ ಪತಿಗೇ ಚಿತ್ರಹಿಂಸೆ ನೀಡಿದಳು!

ದುಡ್ಡಿಗಾಗಿ ಅಪ್ಪ, ಅಮ್ಮನ ಜತೆ ಹೆಂಡಿಯೇ ಗಂಡನನ್ನು ಮಂಚಕ್ಕೆ ಕಟ್ಟಿ ಹಾಕಿ 2 ತಿಂಗಳು ಚಿತ್ರಹಿಂಸೆ ಪ್ರಸಂಗವಿದು. ಅತ್ತೆ, ಮಾವ, ಭಾವ, ಹೆಂಡತಿಯಿಂದ ಮನೆಯೊಳಗೆ ...

ಭಟ್ಕಳ: ದುಡ್ಡಿಗಾಗಿ ಅಪ್ಪ, ಅಮ್ಮನ ಜತೆ ಹೆಂಡಿಯೇ ಗಂಡನನ್ನು ಮಂಚಕ್ಕೆ ಕಟ್ಟಿ ಹಾಕಿ 2 ತಿಂಗಳು ಚಿತ್ರಹಿಂಸೆ ಪ್ರಸಂಗವಿದು. ಅತ್ತೆ, ಮಾವ, ಭಾವ, ಹೆಂಡತಿಯಿಂದ ಮನೆಯೊಳಗೆ ಚಿತ್ರಹಿಂಸೆ ಅನುಭವಿಸುತ್ತಿದ್ದ ವ್ಯಕ್ತಿಯನ್ನು ಸಾರ್ವಜನಿಕರು ಬಂಧಮುಕ್ತಗೊಳಿಸಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಬಂಧಿಸಲಾಗಿದೆ.

ತಾಲೂಕಿನ ಮುಗ್ದಮ್  ಕಾಲನಿ ನಿವಾಸಿ ಮಹ್ಮದ್ ಆಫಾನ್  ಶೇಕ್ (27) ಯಾತನೆಗೊಳಗಾದ ವ್ಯಕ್ತಿ. ತೀವ್ರ ಅಸ್ವಸ್ಥರಾಗಿದ್ದ ಇವರನ್ನು ಉಡುಪಿ ಸರ್ಕಾರಿ ಆಸ್ಪತ್ರೆಗೆ ಸೇರಿಸಲಾಗಿದೆ. ತಾಲೂಕಿನ ಗುಳ್ಮಿಯ ಜುಲೇಕಾ ಮಹಮದ್ ಅಬ್ಬಾಸ್ (40), ಅಬ್ಬಾಸ್ ತಂದೆ ಮಹ್ಮದ್ ಹಮ್ಜಾ (43), ಜಮೀಲಾ ಆಫಾನ್ (22) ಹಾಗೂ ಮಹ್ಮದ್ ಸಲೀಮ್ ಎಂಬುವರು ಚಿತ್ರಹಿಂಸೆ ನೀಡಿದ್ದಾರೆ ಎಂದು ಆರೋಪಿಸಲಾಗಿದೆ. ಈ ಪೈಕಿ ಜುಲೇಕಾ ಹಾಗೂ ಮಹಮದ್ ಅಬ್ಬಾಸ್ ನನ್ನು ಬಂಧಿಸಲಾಗಿದೆ. ಮಹ್ಮದ್ ಆಫಾನ್ ಶೇಕ್ ಇಲ್ಲಿನ ಮುಗ್ದಮ್ ಕಾಲನಿ ನಿವಾಸಿ ಯಾಗಿದ್ದು, ಎರಡು ವರ್ಷಗಳ ಹಿಂದಷ್ಟೇ ಗುಳ್ಮಿಯ ಯುವತಿಯೊಂದಿಗೆ ಮದುವೆಯಾಗಿದೆ. ಪತ್ನಿ ಮಾತಿಗೆ ಕಟ್ಟುಬಿದ್ದು ಮನೆ ಅಳಿಯನಾದ ಇವರನ್ನು ಹಣಕ್ಕಾಗಿ ಪೀಡಿಸಿದ್ದಾರೆ.

ಇವರ ಕಾಟ ತಾಳಲಾರದೇ ವಿಜಯವಾಡಕ್ಕೆ ತೆರಳಿ ಹೊಟೆಲ್ ಕೆಲಸಕ್ಕೆ ಸೇರಿದ್ದರು. ಆಗ  ಇವರು ಕಾಣೆಯಾಗಿದ್ದಾರೆಂದು ಅತ್ತೆ, ಮಾವ ಪೊಲೀಸರಿಗೆ ದೂರು ನೀಡಿ ಭಟ್ಕಳಕ್ಕೆ ಕರೆತರುವಲ್ಲಿ ಯಶಸ್ವಿಯಾಗಿದ್ದರು. ಮತ್ತೆ ಮನೆಯಿಂದ ಹೊರಗೆ ಬಿಡದೆ ಚಿತ್ರಹಿಂಸೆ ನೀಡಲಾಗಿದೆ. ಬೆನ್ನ ಮೇಲೆ ಬರೆ ಹಾಕಿ, 2 ತಿಂಗಳಿಂದ ಮಂಚದ ಕೆಳಗೆ ಕಟ್ಟಿಹಾಕಿ ಕ್ರೂರವಾಗಿ ನಡೆಸಿಕೊಂಡಿದ್ದಾರೆ

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

US-Iran ಶಾಂತಿ ಮಾತುಕತೆ ವಿಫಲ ಬೆನ್ನಲ್ಲೇ Pakistanಗೆ ಜಾಕ್‌ಪಾಟ್‌: ಕತಾರ್, ಸೌದಿಯಿಂದ 5 ಬಿಲಿಯನ್ ಡಾಲರ್ ಆರ್ಥಿಕ ನೆರವು!

'ಬಹು ಅಂಗಾಂಗ ವೈಫಲ್ಯದಿಂದ ಗಾಯಕಿ ಆಶಾ ಭೋಸ್ಲೆ ನಿಧನ': ಬ್ರೀಚ್ ಕ್ಯಾಂಡಿ ಆಸ್ಪತ್ರೆ ಸ್ಪಷ್ಟನೆ

US-Iran ಶಾಂತಿ ಒಪ್ಪಂದ ವಿಫಲ: ಪಾಕಿಸ್ತಾನ ಕುತಂತ್ರ; ಸೌದಿಗೆ 13,000 Pak ಸೈನಿಕರು, 18 ಯುದ್ಧ ವಿಮಾನ ರವಾನೆ!

ಇರಾನ್-ಅಮೆರಿಕ ಯುದ್ಧ ಮುಂದುವರೆದರೆ ಟ್ರಂಪ್ ಅಧ್ಯಕ್ಷ ಸ್ಥಾನಕ್ಕೇ ಕುತ್ತು!

40 ಲಕ್ಷ ರೂ ಸಂಬಳ, ದಿಢೀರ್ ಕೆಲಸದಿಂದ ವಜಾ; 1.4 ಕೋಟಿ ಮೌಲ್ಯದ ಮನೆ EMI ತೀರಿಸಲು Rapido ಚಾಲಕನಾದ ಟೆಕ್ಕಿ!

SCROLL FOR NEXT